twitter
    For Quick Alerts
    ALLOW NOTIFICATIONS  
    For Daily Alerts

    2015ರ ಮೊದಲ ಭಕ್ತಿಪ್ರಧಾನ ಚಿತ್ರವಾಗಿ ಶ್ರೀ ಶಕ್ತಿಮಾತೆ

    By Rajendra
    |

    ಸ್ಯಾಂಡಲ್ ವುಡ್ ನಲ್ಲಿ ಭಕ್ತಿಪ್ರಧಾನ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬೇಕು. ವರ್ಷಕ್ಕೆ ಒಂದೋ ಎರಡೋ ಚಿತ್ರಗಳು ಸೆಟ್ಟೇರಿದರೆ ಅದೇ ಹೆಚ್ಚು. ಏನಿದ್ದರೂ ರೌಡಿಯಿಸಂ, ಅಂಡರ್ ವರ್ಲ್ಡ್, ನೈಜಕಥೆ, ಸಸ್ಪೆನ್ಸ್, ಹಾರರ್ ಚಿತ್ರಗಳದ್ದೇ ಸದ್ದು.

    ಈಗ 2015ರ ಮೊದಲ ಭಕ್ತಿಪ್ರಧಾನ ಚಿತ್ರವಾಗಿ 'ಶ್ರೀ ಶಕ್ತಿಮಾತೆ' ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಬಿ.ಎ.ಪುರುಷೋತ್ತಮ್ ಅವರು ಈ ಭಕ್ತಿಪ್ರಧಾನ ಚಿತ್ರವನ್ನು ಸದ್ದಿಲ್ಲದಂತೆ ಮಾಡಿ ಮುಗಿಸಿದ್ದಾರೆ.

    The first mythological Kannada movie of 2015 Sri Shakti Mate

    ಪುರುಷೋತ್ತಮ್ ಅವರ ನಿರ್ದೇಶನದ 12ನೇ ಚಿತ್ರವಾಗಿ ಮೂಡಿಬಂದಿರುವ ಶ್ರೀಶಕ್ತಿಮಾತೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಸದ್ಯದಲ್ಲೇ ಹಾಡುಗಳ ದ್ವನಿಸುರುಳಿ ಬಿಡುಗಡೆ ಮಾಡುವುದಾಗಿ ಯೋಜನೆ ಹಾಕಿಕೊಂಡಿದ್ದಾರೆ.

    ಕೃತ ಯುಗದಲ್ಲಿ ಶ್ರೀದೇವಿಯು ಮಹಿಷಾಸುರನನ್ನು ಸಂಹರಿಸುವಾಗ ತೊಗಟೆ ವೀರರು ತೊಗಟೆಯಿಂದ ಮಾಡಿದ ವಸ್ತ್ರವನ್ನು ದೇವಿಗೆ ಕೊಡುತ್ತಾರೆ. ಆಗ ಸಂತೃಪ್ತವಾದ ದೇವಿಯು ಕಲಿಯುಗದಲ್ಲಿ ನಾನು ಚಾಮುಂಡೇಶ್ವರಿಯಾಗಿ ಭಕ್ತರಿಗೆ ದರ್ಶನ ನೀಡುತ್ತೇನೆಂದು ಆಶೀರ್ವದಿಸುತ್ತಾಳೆ. ಅದೇ ರೀತಿ ಭಕ್ತರ ಇಷ್ಟಾರ್ಥ ಪೂರೈಸಲು ಚಾಮುಂಡೇಶ್ವರಿಯಾಗಿ ಅವತರಿಸುವ ದೇವಿಯ ಕಥೆ ಹೊಂದಿದೆ.

    ಆಟವೀಶ್ವರ ಫಿಲಂಸ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ, ಎಂ.ಎಂ.ಮುತ್ತುರಾಜ್ ಛಾಯಾಗ್ರಹಣ, ವಿಷ್ಣು ನಾಚನೇಕರ್, ಕುಮಾರ್ ಸಿ.ಹೆಚ್.ಸಂಕಲನ, ಪುರುಷೋತ್ತಮ್ ಸಾಹಿತ್ಯವಿದೆ. ಚಿತ್ರದ ತಾರಾಬಳಗದಲ್ಲಿ ಆದರ್ಶ, ರೂಪಿಕಾ, ರೇಖಾ, ಮೀನಾ, ಜೆಮ್ ಶಿವು ಪುರುಷೋತ್ತಮ್ ಇನ್ನು ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    Kannada mythological movie Sri Shakti Mate ready for release soon. This is the first mythological Sandalwood movie of 2015. Veteran director B A Purushottam has written the story, screenplay and dialogues for the movie.
    Wednesday, January 14, 2015, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X