ಬಹಳ ಎಚ್ಚರವಾಗಿರಿ ಎಂದು ಕನ್ನಡ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಸಲಹೆ

ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಶುಕ್ರವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದು ಈಗಾಗಲೇ ಟ್ರೈಲರ್ ಬಂದು ಹಿಟ್ ಆಗಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

'ಸಿಕಂದರ್' ಬಿಟ್ಟು ಇತ್ತೀಚೆಗೆ ಬಂದ ರಶ್ಮಿಕಾ ಮಂದಣ್ಣ ಸಿನಿಮಾಗಳೆಲ್ಲಾ ಗೆದ್ದಿದೆ. 'ಥಮ್ಮ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ನಡುವೆ 'ದಿ ಗರ್ಲ್‌ಫ್ರೆಂಡ್' ಆಗಿ ರಶ್ಮಿಕಾ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಆಫ್‌ಲೈನ್ ಮಾತ್ರವಲ್ಲದೇ ಆನ್‌ಲೈನ್‌ನಲ್ಲಿ ಕೂಡ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ರಶ‌ಅವರ್ ಹೆಸರಿನಲ್ಲಿ ಅಭಿಮಾನಿಗಳ ಜೊತೆ ಚಾಟ್ ಮಾಡಿ ಸಾಕಷ್ಟು ವಿಚಾರ ಹಂಚಿಕೊಳ್ಳುತ್ತಿದ್ದಾರೆ.

The Girlfriend film Actress Rashmika Mandanna Wins Hearts with Kannada Message to Fans

ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಯೊಬ್ಬರು ಮೆಸೇಜ್ ಮಾಡಿ ಕನ್ನಡ ಅಭಿಮಾನಿಗಳ ಬಗ್ಗೆ ಕನ್ನಡದಲ್ಲಿ ಒಂದೆರಡು ಮಾತಾಡಿ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ "ಹಾಯ್ ನೀವೆಲ್ಲರೂ ಚೆನ್ನಾಗಿದ್ದೀರಾ? ನಾನು ನಿಮ್ಮ ಬಗ್ಗೆ ತುಂಬಾನೇ ಯೋಚನೆ ಮಾಡ್ತಿರ್ತೀನಿ. ನೀವು ಯಾವಾಗಲೂ ನನ್ನ ಮನಸ್ಸಿನಲ್ಲಿ ಇರ್ತೀರಾ. ಯೋಚನೆಯಲ್ಲಿರ್ತೀರಾ. ನೀವು ಯಾವಾಗಲೂ ಖುಷಿಯಾಗಿ ಆರೋಗ್ಯವಾಗಿರಬೇಕು ಅದು ಮಾತ್ರ ಕೇಳಿಕೊಳ್ತೀನಿ. ಬಹಳ ಎಚ್ಚರವಾಗಿರಿ. ವೈರಲ್ ಫೀವರ್ ಬರ್ತಿದೆ. ಟ್ರಾಫಿಕ್‌ನಲ್ಲಿ ರೋಡ್‌ಗಳಲ್ಲಿ ಎಚ್ಚರದಿಂದಿರಿ" ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬ ಅಭಿಮಾನಿ ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದೀರಾ? ಎನ್ನುವ ಪ್ರಶ್ನೆಗೆ ಇಲ್ಲ ಎಂದು ತಲೆ ಆಡಿಸಿರುವ ವೀಡಿಯೋವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ರಾಹುಲ್ ರವಿಂದ್ರನ್ ನಿರ್ದೇಶನದ ಇಂಟೆನ್ಸ್ ರೊಮ್ಯಾಂಟಿಕ್ ಸಿನಿಮಾ 'ದಿ ಗರ್ಲ್‌ ಫ್ರೆಂಡ್'. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅನು ಇಮಾನ್ಯುಯೆಲ್, ರಾವು ರಮೇಶ್, ರೋಹಿಣಿ ಚಿತ್ರದ ತಾರಾಗಣದಲ್ಲಿದ್ದಾರೆ.

ಹೇಶಮ್ ಅಬ್ದುಲ್ ವಹಾಮ್ ಸಂಗೀತ, ಕೃಷ್ಣನ್ ವಸಂತ್ ಛಾಯಾಗ್ರಹಣ, ಚೋಟಾ ಕೆ ಪ್ರಸಾದ್ ಸಂಕಲನ 'ದಿ ಗರ್ಲ್‌ ಫ್ರೆಂಡ್' ಚಿತ್ರಕ್ಕಿದೆ. 'ಪೊಗರು' ಬಳಿಕ ರಶ್ಮಿಕಾ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಕ್ರಿಯರಾಗಿಬಿಟ್ಟರು. ಬಾಲಿವುಡ್ ನಟಿಯರಿಗೂ ಈಗ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ರೀತಿಯ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡು ಗೆದ್ದಿದ್ದಾರೆ.

'ದಿ ಗರ್ಲ್‌ ಫ್ರೆಂಡ್' ಬಳಿಕ 'ಕಾಕ್‌ಟೇಲ್' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಂದು ಬಾಲಿವುಡ್ ಕ್ರೇಜಿ ಪ್ರಾಜೆಕ್ಟ್ ಭಾಗವಾಗುತ್ತಿದ್ದಾರೆ. 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಹರಿದು ಬರ್ತಿದೆ. ಇದೆಲ್ಲದರ ನಡುವೆ ಪ್ರಭಾಸ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ನೀಡಿದ ಕೆಲ ಹೇಳಿಕೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಕೆಲವರು ಆಕೆಯನ್ನು ದ್ವೇಷಿಸಲು ಆರಂಭಿಸಿದ್ದಾರೆ. ಈ ಹಿಂದೆ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಲೇ ಇದೆ.

'ಗೀತಾಗೋವಿಂದಂ' ಚಿತ್ರದಲ್ಲಿ ಜೋಡಿ ಒಟ್ಟಿಗೆ ನಟಿಸಿತ್ತು. ಇಬ್ಬರೂ ಆತ್ಮೀಯ ಸ್ನೇಹಿತರು. ವಿಜಯ್ ಮನೆಯಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ರಶ್ಮಿಕಾ ಭಾಗಿ ಆಗುತ್ತಾರೆ. ಇತ್ತೀಚೆಗೆ ಗುಟ್ಟಾಗಿ ಇಬ್ಬರ ಎಂಗೇಜ್‌ಮೆಂಟ್ ಕೂಡ ನಡೆದಿದೆ ಎನ್ನುವ ಊಪಾಪೋಹ ಶುರುವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆಕೆ ಹಾರಿಕೆಯ ಉತ್ತರ ಕೊಡುತ್ತಾ ಬರ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X