ಹಿಂದಿಯಲ್ಲಿ ಅಬ್ಬರಿಸಲಿದ್ದಾನೆ ಕನ್ನಡದ 'ಭೀಮ' , ದಾಖಲೆ ಮೊತ್ತಕ್ಕೆ ಸೇಲಾಯ್ತು ರೈಟ್ಸ್..!

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಮತ್ತು ಡೈರೆಕ್ಟರ್ ಆಗಿ ಗುರುತಿಸಿಕೊಂಡವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಭಾರತದ ಯಾವುದೇ ಭಾಷೆಗೆ ಹೊಂದುವ ವಿಜಯ್ ಈಗಾಗಲೇ ತೆಲುಗಿನಲ್ಲಿ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ತೆಲುಗು ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ.

ಇನ್ನು ದುನಿಯಾ ವಿಜಯ್ ಅವರಿಗೆ ಹಿಂದಿಯಲ್ಲಿ ಕೂಡ ಒಳ್ಳೆಯ ಮಾರ್ಕೆಟ್ ವ್ಯಾಲ್ಯೂ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಂಠೀರವ, ದನ ಕಾಯೋನು, ಜರಾಸಂಧ ಸೇರಿ ಇವರ ಅನೇಕ ಚಿತ್ರಗಳು ಹಿಂದಿಗೆ ಡಬ್ ಆಗಿವೆ. ಯೂಟ್ಯೂಬ್‌ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಕಂಡಿವೆ. ಇದೀಗ ಈ ಸಾಲಿಗೆ ಭೀಮ ಚಿತ್ರ ಕೂಡ ಸೇರಿಕೊಳ್ಳಲಿದೆ. ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಮೊತ್ತಕ್ಕೆ ಬಿಕರಿಯಾಗಿದೆ.

The Hindi dubbing rights of Duniya Vijay s blockbuster film Bheema have been sold for 2 5 crore

ಹೌದು. ಗಜಿಬಿಜಿ ಬೆಂಗಳೂರಿನೆಲ್ಲೆಡೆ ಹರಿಡಿರುವ ಗಾಂಜಾ ಅಮಲಿನ ಸುತ್ತ ದುನಿಯಾ ವಿಜಯ್ ಹೆಣೆದ ಭೀಮ ಕಥೆ ಹಿಂದಿಯಲ್ಲಿ ಚಿನ್ನದಂತಹ ಬೆಲೆಗೆ ಮಾರಾಟವಾಗಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ. ಕರ್ನಾಟಕ ಬಾಕ್ಸಾಫೀಸ್‌ ಟ್ವಿಟರ್ [ ಎಕ್ಸ್‌ ] ಪೇಜ್ ಕೂಡ ಈ ಸುದ್ದಿಯನ್ನು ಪುಷ್ಠಿಕರಿಸುತ್ತಿದೆ. ಆ ಪ್ರಕಾರ ನೋಡುವುದಾದರೆ ಭೀಮ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಬರೋಬ್ಬರಿ ಎರಡೂವರೆ ಕೋಟಿಗೆ ಸೇಲಾಗಿದೆ. ಈ ಮೂಲಕ ನಿರ್ಮಾಪಕರ ಮೊಗದಲ್ಲಿನ ಸಂಭ್ರಮವನ್ನು ಕೂಡ ಭೀಮ ಹೆಚ್ಚಿಸಿದೆ. ಹಿಂದಿಗೆ ಡಬ್ ಆದ ಭೀಮ ಶೀಘ್ರದಲ್ಲಿಯೇ ಯೂಟ್ಯೂಬ್‌ನಲ್ಲಿ ಪ್ರಸಾರವೂ ಆಗಲಿದೆ.

ಅಂದ್ಹಾಗೇ ಭೀಮ ಚಿತ್ರಕ್ಕೆ ಹೆಚ್ಚು ಕಡಿಮೆ 18 ಕೋಟಿ ಖರ್ಚಾಗಿತ್ತು ಎನ್ನುವ ಮಾತು ಇದೆ. ಇನ್ನು ಚಿತ್ರದ ಗಳಿಕೆಯ ಲೆಕ್ಕವನ್ನು ಮಾಡುವ sacnilk.com ಪ್ರಕಾರ ಚಿತ್ರಮಂದಿರದಲ್ಲಿ ಭೀಮ ಹೆಚ್ಚು ಕಡಿಮೆ 23 ಕೋಟಿಯನ್ನು ದೋಚಿದೆ. ಗಾಂಧಿನಗರದಲ್ಲಿ ಕೇಳಿ ಬರುವ ಮಾತುಗಳ ಪ್ರಕಾರ ಅಮೆಜಾನ್ ಪ್ರೈಂನವರು ಕೂಡ ಒಳ್ಳೆಯ ಮೊತ್ತವನ್ನೇ ನೀಡಿ ಭೀಮ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನದ ಚಿತ್ರದ ಹಾಡುಗಳಿಂದ ಕೂಡ ನಿರ್ಮಾಪಕರಿಗೆ ಚಿನ್ನದಂತಹ ಬೆಳೆ ಸಿಕ್ಕಿದೆ. ಈಗ ಹಿಂದಿ ಡಬ್ಬಿಂಗ್ ರೈಟ್ಸ್ ಎರಡೂವರೆ ಕೋಟಿಗೆ ಸೇಲಾಗಿದೆ ಎನ್ನುವ ಸುದ್ದಿ ಇದೆ. ಅಲ್ಲಿಗೆ ಹೇಗೆ ಕೂಡಿ ಕಳೆದರೂ ಕೂಡ ಭೀಮ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಅವರಿಗೆ ಹಾಕಿದ ಬಂಡವಾಳಕ್ಕಿಂತ ಅಧಿಕ ಮೊತ್ತದ ನಿವ್ವಳ ಲಾಭ ಕೈ ಸೇರಿದೆ.

ಇನ್ನುಳಿದಂತೆ ಬೆಂಗಳೂರಿನ ಭಾಷೆಯನ್ನು ಯಥಾವತ್ತಾಗಿ ಬಳಸಿಕೊಂಡು, ಗಲ್ಲಿ ಗಟಾರ ಅಂತಾ ನೋಡದೇ ಲೆಕ್ಕವಿಡದಷ್ಟು ಲೊಕೇಷನ್ನುಗಳಲ್ಲಿ ದುನಿಯಾ ವಿಜಯ್ ತಮ್ಮ ತಂಡದ ಸಹಕಾರ ಸಹಯೋಗದೊಂದಿಗೆ ಈ ಚಿತ್ರವನ್ನು ಚಿತ್ರೀಕರಿಸಿದ್ದಾರೆ.

ಇನ್ನೂ ಭೀಮ ಚಿತ್ರದಲ್ಲಿ ಹಿಂಸೆ ಜಾಸ್ತಿ, ಅವಾಚ್ಯ ಪದಗಳನ್ನು ಹೆಚ್ಚು ಬಳಸಿದ್ದಾರೆ ಎನ್ನುವ ಮಾತು ಚಿತ್ರ ಬಿಡುಗಡೆಯಾದ ದಿನದಿಂದನೇ ಇದೆ. ಭೀಮ ಚಿತ್ರದಲ್ಲಿನ ಈ ಹಸಿ ಹಸಿ ಮಾತು ಮತ್ತು ಚಿತ್ರದಲ್ಲಿನ ಸಹಜತೆ ಬಹುಶಃ ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ಮಾರಾಟವಾಗದಂತೆ ತಡೆ ಹಿಡಿದಿರುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಅಮೆಜಾನ್ ಪ್ರೈಂನವರು ಮೆಚ್ಚಿದ ಭೀಮನನ್ನು ಕನ್ನಡದ ಮನರಂಜನಾ ವಾಹಿನಿಗಳು ಇನ್ನೂ ಖರೀದಿಸಿಲ್ಲ ಚಿತ್ರದ ಸ್ಯಾಟ್‌ಲೈಟ್ ರೈಟ್ಸ್ ಸೇಲ್ ಆಗಿಲ್ಲ ಎನ್ನುವ ಸುದ್ದಿ ಕೂಡ ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X