ಊಹೆ ಮಾಡಿದ್ದು ಒಂದು, ಆಗಿದ್ದೇ ಇನ್ನೊಂದು: ನಿತ್ಯಾ ಮೆನನ್ ಗೆ ಇದು ಅದೃಷ್ಟ.!
Recommended Video

'ಕೋಟಿಗೊಬ್ಬ-2' ಚಿತ್ರದ ನಂತರ ನಿತ್ಯಾ ಮೆನನ್ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ. ಅತ್ತ ತೆಲುಗು, ತಮಿಳಿನಲ್ಲಿ ಬ್ಯುಸಿಯಾದ 'ಮೈನಾ'ಗೆ ಈಗೊಂದು ಅದೃಷ್ಟದ ಸಿನಿಮಾ ಸಿಕ್ಕಿದೆ.
ಇದು ಇಡೀ ಭಾರತವೇ ಕಾಯುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಯಾರು ನಾಯಕಿಯಾಗಲಿದ್ದಾರೆ ಎಂಬುದನ್ನ ಇಡೀ ಚಿತ್ರರಂಗದ ಎದುರು ನೋಡುತ್ತಿತ್ತು. ಸೌತ್ ನಟಿಯರ ಜೊತೆ ಬಾಲಿವುಡ್ ನಟಿಯರ ಹೆಸರು ಕೂಡ ಸಂಚಲನ ಸೃಷ್ಟಿಸಿತ್ತು.
ತ್ರಿಷಾ, ನಯನತಾರ, ವಿದ್ಯಾ ಬಾಲನ್, ಐಶ್ವರ್ಯ ರೈ ಬಚ್ಚನ್ ಅಂತಹ ಹೆಸರುಗಳು ಈ ಪ್ರಾಜೆಕ್ಟ್ ನಲ್ಲಿ ಕೇಳಿಬಂತಾದರೂ ಅಂತಿಮವಾಗಿ ಈ ಸಿನಿಮಾ ಹೋಗಿದ್ದು ಕನ್ನಡದ ನಟಿ ನಿತ್ಯಾ ಮೆನನ್ ಬಳಿ. ಅಷ್ಟಕ್ಕೂ, ನಿತ್ಯಾ ಮೆನನ್ ಗೆ ಬಯಸದೇ ಬಂದ ಭಾಗ್ಯ ಯಾವುದು.? ಭಾರತ ಚಿತ್ರರಂಗವೇ ಕಾಯುತ್ತಿರುವ ಈ ಸಿನಿಮಾದಲ್ಲಿ ನಿತ್ಯಾ ಮೆನನ್ ನಿರ್ವಹಿಸಲಿರುವ ಪಾತ್ರ ಯಾವುದು.? ಮುಂದೆ ಓದಿ.....

'ದಿ ಐರನ್ ಲೇಡಿ' ಫಸ್ಟ್ ಲುಕ್
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಪುರಚ್ಚಿ ತಲೈವಿ, ತಮಿಳಿಗರ ಪಾಲಿನ ಅಮ್ಮ ಎಂದು ಗುರುತಿಸಿಕೊಂಡಿ ಜೆ ಜಯಲಲಿತಾ ಅವರ ಬಯೋಪಿಕ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ 'ದಿ ಐರನ್ ಲೇಡಿ' ಚಿತ್ರದ ಪೋಸ್ಟರ್ ಅನಾವರಣ ಮಾಡಿದ್ದಾರೆ.

ಅಮ್ಮನಾದ ನಿತ್ಯಾ ಮೆನನ್
ಜಯಲಲಿತಾ ಬಯೋಪಿಕ್ ನಲ್ಲಿ ಅಮ್ಮನ ಪಾತ್ರ ಮಾಡೋದು ಯಾರು ಎಂಬ ಕಾತುರ ಕಾಡುತ್ತಿತ್ತು. ದಕ್ಷಿಣ ಹಾಗೂ ಬಾಲಿವುಡ್ ನ ಖ್ಯಾತನಾಮರ ಹೆಸರುಗಳು ಬಂತಾದರೂ, ಅಂತಿಮವಾಗಿ ನಿತ್ಯಾ ಮೆನನ್ ಗೆ ಈ ಅವಕಾಶ ಸಿಕ್ಕಿದೆ. ಪ್ರಿಯದರ್ಶಿನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹಾಕುತ್ತಿದೆ.

ನಿತ್ಯಾ ಮೆನನ್ ಜೀವ ತುಂಬ ಬಲ್ಲರಾ.?
ಜಯಲಲಿತಾ ಅವರ ಬಯೋಪಿಕ್ ಸಿನಿಮಾ 'ದಿ ಐರನ್ ಲೇಡಿ' ಟೈಟಲ್ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿರುವ ಚಿತ್ರತಂಡ ಜಯಾ ಪಾತ್ರದಲ್ಲಿ ಯಾರೂ ನಟಿಸಲಿದ್ದಾರೆ ಎಂಬುದನ್ನ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ. ಆದ್ರೆ, ನಿತ್ಯಾ ಮೆನನ್ ಮಾಡೋದು ಬಹುತೇಕ ಖಚಿತವಾಗಿದೆಯಂತೆ. ಜಯಲಲಿತಾ ಹುಟ್ಟುಹಬ್ಬಕ್ಕೆ ನಿತ್ಯಾ ಮೆನನ್ ಫಸ್ಟ್ ಲುಕ್ ರಿಲೀಸ್ ಆಗಲಿದೆ.

'ಶಶಿಕಲಾ' ಪಾತ್ರಕ್ಕೆ ಸೂಕ್ತ ಆಯ್ಕೆ
ಇನ್ನು ಜಯಲಲಿತಾ ಬಯೋಪಿಕ್ ಅಂದ್ಮೇಲೆ ಅವರ ಆಪ್ತ ಗೆಳತಿ ಶಶಿಕಲಾ ಅವರ ಪಾತ್ರವೂ ಬಹಳ ಮುಖ್ಯ. ಈ ಪಾತ್ರಕ್ಕಾಗಿ ವರಲಕ್ಷ್ಮಿ ಶರತ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದೆಯಂತೆ. ವರಲಕ್ಷ್ಮಿ ಆಯ್ಕೆಯನ್ನ ಪ್ರೇಕ್ಷಕರು ಸ್ವಾಗತಿಸಿದ್ದಾರೆ.


Click it and Unblock the Notifications











