ದಚ್ಚು-ಕಿಚ್ಚ ಯುದ್ಧಕಾಂಡ ;ಪರಪ್ಪನ ಅಗ್ರಹಾರದಲ್ಲಿ ಪತಿಯ ದರ್ಶನ ಮಾಡಿದ ವಿಜಯಲಕ್ಷ್ಮಿ- ಡೆವಿಲ್‌ಗೆ 'ವಾರ್' ಮೆಸೇಜ್?

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಸದ್ಯ ಇಂತಹದ್ದೇ ಒಂದು ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ ವಿವಾದ ಭುಗಿಲೆದ್ದಿದೆ.

ಸೋಶಿಯಲ್ ಮೀಡಿಯಾದಲ್ಲಿ ಎರಡು ಕಡೆಯ ಬಣ ಪರಸ್ಪರ ಕೆಸರೆರುಚುತ್ತಿದೆ. ವ್ಯೆಯಕ್ತಿಕ ನಿಂದನೆ.. ದಾಳಿ ಮತ್ತು ಚಾರಿತ್ರ್ಯ ಹರಣವನ್ನು ಕೂಡ ಮಾಡುತ್ತಿದೆ. ಇನ್ನೂ ಸುದೀಪ್ ತಾವು ಆಡಿದ ಮಾತು ಮತ್ತು ಅದರ ಹಿಂದಿನ ಉದ್ದೇಶ ಏನಾಗಿತ್ತು ಎಂದು ಹೇಳಿದ್ದಾರೆ.

The Jailhouse Briefing Did Vijayalakshmi Reveal Sudeep s War Warning to Darshan During Her Visit

ನಾನು ಮಾತನಾಡಿದ್ದು ಪೈರಸಿಯ ವಿರುದ್ಧ ಎಂದು ಹೇಳಿರುವ ಸುದೀಪ್, ನಾನು ಉದ್ದೇಶಪೂರ್ವಕವಾಗಿಯೇ ಪೈರಸಿ ಪದವನ್ನು ಹೇಳಿಲ್ಲ. ಯಾಕೆಂದರೆ.. ಯಾರಿಗೋ ಎಚ್ಚರಿಕೆ ನೀಡಬೇಕಾದರೆ ಹೇಳಿಯೇ ಹೊಡೆಯಬೇಕು ಎಂದು ಹೇಳಿದ್ದಾರೆ. ಚೆಸ್ ಆಟದ ಉದಾಹರಣೆ ನೀಡಿದ್ದಾರೆ. ಪೈರಸಿ ಅಂತ ಪದ ಹೇಳುವ ಅವಶ್ಯಕತೆ ಇಲ್ಲ. ಈ ರೂಮಿನಲ್ಲಿ ಅಲ್ಲಿ ಕೆಟ್ಟ ಸ್ಮೆಲ್ ಬಂದ್ರೆ ಬಿಟ್ಟಿದ್ದು ಯಾರು ಎನ್ನುವುದು ಬಿಟ್ಟವನಿಗೆ ಗೊತ್ತಾಗುತ್ತೆ ಹಾಗೆ ಕೂಡ ಇದು ಎಂದು ಕಗ್ಗತ್ತಲಿನಲ್ಲಿ ಕಾರ್ಯಾಚರಣೆ ಮಾಡಿ ಚಿತ್ರವನ್ನು ಹರಿಬಿಡುವ ಕಿರಾತಕರಿಗೆ ಹೇಳಿದ್ದಾರೆ.

ಮುಂದುವರೆದು ''45'' ಚಿತ್ರದ ಬಗ್ಗೆ ಕೂಡ ನಾನು ಹೇಳಿದ್ದೇನೆ. ಯಾಕೆ ''45'' ತಂಡದವರು ನಮಗೆ ಹೇಳಿದ್ದಾರೆ ಅಂದುಕೊಂಡಿಲ್ಲ. ಗಣೇಶ್, ಧ್ರುವ ಸರ್ಜಾ, ಯಶ್, ರಿಷಬ್, ರಕ್ಷಿತ್‌ ಹೀಗೆ ಚಿತ್ರರಂಗದಲ್ಲಿ ಹಲವಾರು ಕಲಾವಿದರು ಇದ್ದಾರೆ. ಯಾಕೆ ಅವರ ಅಭಿಮಾನಿಗಳು ನಮಗೆ ಹೇಳಿದ್ದು ಅಂತ ಅಂದುಕೊಂಡಿಲ್ಲ ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ.

ಆದರೂ ಕೂಡ ಇನ್ನೂ ಕೆಲವರಿಗೆ ಸಮಾಧಾನವಾಗಿಲ್ಲ. ಸಮಾಧಾನವಾಗಿಲ್ಲ ಎನ್ನುವುದಕ್ಕಿಂತ ಸುದೀಪ್ ಎಷ್ಟೇ ಸಮರ್ಥನೆ ಮಾಡಿಕೊಂಡರು ಕೂಡ ಅವರು ಹೇಳಿದ್ದು ದರ್ಶನ್ ಅವರನ್ನು ಗುರಿಯಾಗಿಸಿಕೊಂಡೇ ಎಂದು ಹಲವರು ತೀರ್ಮಾನಕ್ಕೆ ಬಂದಿದ್ದಾರೆ. ಖುದ್ದು ವಿಜಯಲಕ್ಷ್ಮಿ ಅವರಿಗೆ ಕೂಡ ಹೀಗೆ ಅನಿಸಿದ್ದರೂ ಅನಿಸಿರಬಹುದು. ಹೀಗಾಗಿ ವಿಜಯಲಕ್ಷ್ಮಿ ದಾವಣಗೆರೆಯಲ್ಲಿ ಪರೋಕ್ಷವಾಗಿ ಪ್ರತ್ಯುತ್ತರ ನೀಡಿದ್ದರು ನೀಡಿರಬಹುದು. ಆ ಸಾಧ್ಯತೆ ಕೂಡ ಇದೆ.

ಹೀಗಿರುವಾಗ ಈಗ ಈ ಯುದ್ಧಕಾಂಡದ ನಡುವೆ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರದಲ್ಲಿರುವ ತಮ್ಮ ಪತಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಇಂದು ( ಡಿಸೆಂಬರ್ 23 ) ದರ್ಶನ್ ಸಹೋದರ ದಿನಕರ್ ಜೊತೆ ಜೈಲಿಗೆ ಬಂದು ಅರ್ಧ ಗಂಟೆಗೂ ಅಧಿಕ ಕಾಲ ದರ್ಶನ್ ಅವರ ಜೊತೆ ಚರ್ಚೆ ಮಾಡಿ ಹೋಗಿದ್ದಾರೆ.

The Jailhouse Briefing Did Vijayalakshmi Reveal Sudeep s War Warning to Darshan During Her Visit

ನೋ ಡೌಟ್, ''ಡೆವಿಲ್'' ಚಿತ್ರದ ರಿಪೋರ್ಟ್‌ ಕಾರ್ಡ್‌ನ್ನು ದರ್ಶನ್ ಅವರಿಗೆ ವಿಜಯಲಕ್ಷ್ಮಿ ನೀಡಿಯೇ ನೀಡಿರುತ್ತಾರೆ. ಆದರೆ ಇದೇ ಸಮಯದಲ್ಲಿ ಹೊರಗಡೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೂಡ ವಿಜಯಲಕ್ಷ್ಮೀ ವರದಿಯನ್ನು ದರ್ಶನ್ ಅವರಿಗೆ ನೀಡಿದ್ದರು ನೀಡಿರಬಹುದು. ಒಂದು ವೇಳೆ ವಿಜಯಲಕ್ಷ್ಮೀ ''ವಾರ್'' ಮೆಸೇಜ್‌ನ ದರ್ಶನ್ ಅವರಿಗೆ ನೀಡಿದ್ದರೆ ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ನಮಗೆ ಗೊತ್ತಿಲ್ಲವಾದರು ಸದ್ಯ ವಿಜಯಲಕ್ಷ್ಮೀ ಅವರ ಈ ಭೇಟಿ ಕುತೂಹಲ ಕೆರಳಿಸಿದೆ.

ಯಾಕೆಂದರೆ ಈ ಹಿಂದೆಯೂ ಜೈಲಿನಲ್ಲಿ ಭೇಟಿಯಾಗಿ ಬಂದ ನಂತರ ವಿಜಯಲಕ್ಷ್ಮಿ, ತಮ್ಮ ಪತಿಯ ಪರವಾಗಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ದರ್ಶನ್ ಅಭಿಮಾನಿಗಳಿಗೆ ದರ್ಶನ್ ಜೈಲಿಂದ ಕಳುಹಿಸಿದ ಸಂದೇಶವನ್ನು ಕಳುಹಿಸಿದ್ದಾರೆ. ಈ ಹಿನ್ನೆಲೆ ಈ ಬಾರಿ ಕೂಡ ದರ್ಶನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಂದೇಶವನ್ನು ವಿಜಯಲಕ್ಷ್ಮಿ ಅವರ ಬಳಿ ಕಳುಹಿಸಿರಬಹುದಾ..? ವಿಜಯಲಕ್ಷ್ಮೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಬೇರೆ ಯಾವುದಾದರೂ ಸಂದೇಶ ಹಂಚಿಕೊಳ್ಳುತ್ತಾರಾ..? ಎನ್ನುವ ಪ್ರಶ್ನೆ ಹಲವರಲ್ಲಿದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Sandalwood's star war heats up! Vijayalakshmi briefs Darshan in prison after Sudeep’s viral comments. Inside details on the meeting that has fans talking. Read more!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X