ಐಪಿಎಲ್ ರೋಚಕ ಘಟ್ಟದ ನಡುವೆ ಈ ವಾರ ರಿಲೀಸ್ ಆಗ್ತಿರೋ ಚಿತ್ರಗಳ ಪಟ್ಟಿ
ಎಲೆಕ್ಷನ್, ಐಪಿಎಲ್ ಕಾರಣಕ್ಕೆ ಇತ್ತೀಚೆಗೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. ಮಾರ್ಚ್ 28ಕ್ಕೆ ಯುವ ರಾಜ್‌ಕುಮಾರ್ ನಟನೆಯ 'ಯುವ' ಚಿತ್ರವೇ ಕೊನೆ. ಆ ಬಳಿಕ ಹೇಳಿಕೊಳ್ಳುವಂತಹ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿಲ್ಲ.
ಸದ್ಯ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ಮುಕ್ತಾಯವಾಗಿದೆ. ಆದರೂ ಐಪಿಎಲ್ ಭಯ ಚಿತ್ರರಂಗವನ್ನು ಕಾಡುತ್ತಿದೆ. ಇದೇ ಭಾನುವಾರ (ಮೇ 26) ಐಪಿಎಲ್ ಸರಣಿಗೆ ತೆರೆ ಬೀಳಲಿದೆ. ಜೂನ್ 4ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಸಹ ಹೊರ ಬೀಳಲಿದೆ. ಆ ಬಳಿಕವೇ ಚಿತ್ರರಂಗ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ.

ಮತ್ತೊಂದು ವೀಕೆಂಡ್ ಬರ್ತಿದೆ. ದೊಡ್ಡ ಸಿನಿಮಾಗಳು ಅಲ್ಲದೇ ಇದ್ದರೂ ಒಂದಷ್ಟು ಸಿನಿಮಾಗಳು ಈ ವಾರೆ ಬಿಡುಗಡೆಗೆ ಸಜ್ಜಾಗಿವೆ. ಆ ಪಟ್ಟಿಯಲ್ಲಿ ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಸಿನಿಮಾ ಕೂಡ ಇದೆ. ಮಲಯಾಳಂನ 'ಟರ್ಬೊ' ಕೂಡ ಕುತೂಹಲ ಮೂಡಿಸಿದೆ. ಮೇ 24ಕ್ಕೆ ತೆರೆಗಪ್ಪಳಿಸುತ್ತಿರುವ ಚಿತ್ರಗಳ ಪಟ್ಟಿ ಮುಂದೆ ಓದಿ..
1. 'ದಿ ಜಡ್ಜ್‌ಮೆಂಟ್'
ಗುರುರಾಜ್ ಕುಲಕರ್ಣಿ ನಿರ್ದೇಶನದ 'ದಿ ಜಡ್ಜ್‌ಮೆಂಟ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. 'ಸೀ ಯು ಇನ್ ಕೋರ್ಟ್' ಎನ್ನುವ ಅಡಿಬರಹ ಕೂಡ ಇದೆ. ವಿ. ರವಿಚಂದ್ರನ್, ರಂಗಾಯಣ ರಘು, ಧನ್ಯಾ ರಾಮ್‌ಕುಮಾರ್, ದಿಗಂತ್, ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಕೋರ್ಟ್ ಡ್ರಾಮಾ ಎನ್ನುವುದು ಗೊತ್ತಾಗುತ್ತಿದೆ. ಜಿ9 ಕಮ್ಯೂನಿಕೇಷನ್ ಮೀಡಿಯಾ & ಎಂಟರ್‌ಟೇನ್ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ಸಿದ್ಧವಾಗಿದೆ.
2. ಮೂರನೇ ಕೃಷ್ಣಪ್ಪ
ರಂಗಾಯಣ ರಘು, ಸಂಪತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಮೂರನೇ ಕೃಷ್ಣಪ್ಪ' ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಕೋಲಾರ ಭಾಗದ ಭಾಷೆಯ ಸೊಗಡು ಈ ಚಿತ್ರದಲ್ಲಿದೆ. ಶ್ರೀಪ್ರಿಯಾ, ತುಕಾಲಿ ಸಂತೋಷ್, ಉಗ್ರಂ ಮಂಜು ಚಿತ್ರದ ತಾರಾಗಣದಲ್ಲಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಗಮನ ಸೆಳೆದಿದೆ. ನವೀನ್ ನಾರಾಯಣ ಘಟ್ಟ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

3. 3ದೇವಿ
ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಸಿನಿಮಾ ಕೂಡ ಈ ವಾರವೇ ಪ್ರೇಕ್ಷಕರ ಮುಂದೆ ಬರಲಿದೆ. ಶೂಭಾ ಪೂಂಜಾ ಜೊತೆಗೆ ಸಂಧ್ಯಾ ಮತ್ತು ಜ್ಯೋತ್ಸ್ನಾ ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡೊಂದಕ್ಕೆ ಮೂವರು ನಾಯಕಿಯರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
3. ಎವಿಡೆನ್ಸ್
ಸಿ. ಪಿ ಪ್ರವೀಣ್ ನಿರ್ದೇಶನದ 'ಎವಿಡೆನ್ಸ್' ಚಿತ್ರಕ್ಕೂ ಈ ಶುಕ್ರವಾರವೇ ಬಿಡುಗಡೆ ಭಾಗ್ಯ. ತ್ರಿಕೋನ ಪ್ರೇಮಕಥೆ ಚಿತ್ರದಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದ್ದು 4 ಹಾಡುಗಳು, 2 ಫೈಟ್ಸ್ ಇದೆ. ರೋಬೊ ಗಣೇಶ್ ಹಾಗೂ ಮಾನಸ ಜೋಶಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಈ 3 ಚಿತ್ರಗಳ ಜೊತೆಗೆ 'ಸೆಲ್ಯೂಟ್' ಎನ್ನುವ ಮತ್ತೊಂದು ಕನ್ನಡ ಸಿನಿಮಾ ತೆರೆಗೆ ಬರಲಿದೆ.
4. ಟರ್ಬೋ
ಮಲಯಾಳಂನ 'ಟರ್ಬೊ' ಸಿನಿಮಾ ಕೂಡ ಈ ವಾರವೇ ಪ್ರೇಕ್ಷಕರ ಮುಂದೆ ಬರ್ತಿದೆ. ಮಮ್ಮುಟಿ ಚಿತ್ರದಲ್ಲಿ ಹೀರೊ ಆಗಿ ಅಬ್ಬರಿಸಿದ್ದಾರೆ. ಕನ್ನಡ ನಟ ರಾಜ್. ಬಿ ಶೆಟ್ಟಿ ಕೂಡ ಮತ್ತೊಂದು ಖಡಕ್ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ರಾಜ್ ಶೆಟ್ಟಿ ನಟಿಸಿರುವುದರಿಂದ ಈ ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಬಂದಿದ್ದ ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿತ್ತು.


Click it and Unblock the Notifications











