twitter
    For Quick Alerts
    ALLOW NOTIFICATIONS  
    For Daily Alerts

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ: ಉಚಿತ ಶೋ ಘೋಷಿಸಿದ ಶಾಸಕ ಯತ್ನಾಳ್

    |

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬಿಜೆಪಿ ಶಾಸಕರು, ಸಚಿವರು ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ ಮಾತ್ರವಲ್ಲದೆ ಆರು ವಾರಗಳ ಕಾಲ ತೆರಿಗೆ ವಿನಾಯಿತಿ ಸಹ ಘೋಷಿಸಿದ್ದಾರೆ.

    Recommended Video

    James America | ವಿದೇಶದಲ್ಲೂ ಜೋರಾಯ್ತು ಅಪ್ಪು ಜೇಮ್ಸ್ ಜಾತ್ರೆ

    ಸಚಿವರ ಸಿ.ಟಿ.ರವಿ ಅವರೂ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ಎಲ್ಲರೂ ನೋಡಬೇಕೆಂದಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಂದು (ಮಾರ್ಚ್ 15) ರಂದು ಎಲ್ಲ ಶಾಸಕರು, ಸಚಿವರಿಗೆ ಮಂತ್ರಿ ಮಾಲ್‌ನಲ್ಲಿ ಸಿನಿಮಾ ವೀಕ್ಷಣೆಗೆ ವಿಶೇಷ ಶೋ ಆಯೋಜನೆ ಮಾಡಿದ್ದಾರೆ.

    'ದಿ ಕಾಶ್ಮೀರ್ ಫೈಲ್ಸ್' ನೈಜ ಇತಿಹಾಸವೆ? ಇತಿಹಾಸದ ಒಂದು ಮುಖವೆ?'ದಿ ಕಾಶ್ಮೀರ್ ಫೈಲ್ಸ್' ನೈಜ ಇತಿಹಾಸವೆ? ಇತಿಹಾಸದ ಒಂದು ಮುಖವೆ?

    ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ತಮ್ಮ ಜಿಲ್ಲೆಯಲ್ಲಿ ಉಚಿತವಾಗಿ ಪ್ರದರ್ಶಿಸುವುದಾಗಿ ಘೋಷಿಸಿದ್ದಾರೆ!

    The Kashmir Files Movie To Be Showed Free In Vijayapura District

    ''ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆ ಹೊಂದಿರುವ ಈ ಸಿನಿಮಾ ಒಂದು ರೀತಿ ಎಲ್ಲ ಹಿಂದುಗಳಿಗೆ ಜಾಗೃತಿ ಮೂಡಿಸುತ್ತಿದೆ. ನಾವು ಎಚ್ಚರಗೊಳ್ಳದಿದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತಿದೆ ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕು'' ಎಂದಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ: ಕೊಟ್ಟ ಕಾರಣವೇನು? 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ: ಕೊಟ್ಟ ಕಾರಣವೇನು?

    ''ವಿಜಯಪುರ ಜಿಲ್ಲೆಯಲ್ಲಿ ಸಿನಿಮಾ ಬಿಡುಗಡೆ ಮಾಡಿರಲಿಲ್ಲ. ಕೆಲವು ಚಿತ್ರಮಂದಿರಗಳ ಮಾಲೀಕರು ಸಿನಿಮಾ ಬಿಡುಗಡೆ ಮಾಡಲು ಹೆದರುತ್ತಿದ್ದರು. ನಾನು ಚಿತ್ರಮಂದಿರ ಮಾಲೀಕರ ಬಳಿ ಮಾತನಾಡಿ ಅವರ ಮನವೊಲಿಸಿದ್ದೇನೆ. ಸಿನಿಮಾವು ಬಿಡುಗಡೆ ಆಗಲಿದೆ. ಅಷ್ಟು ಮಾತ್ರವಲ್ಲದೆ ಸತತ ಒಂದು ವಾರಗಳ ಕಾಲ ಮಧ್ಯಾಹ್ನದ ಶೋ ಅನ್ನು ಉಚಿತವಾಗಿ ಪ್ರದರ್ಶಿಸುವಂತೆ ಸೂಚಿಸಿದ್ದೇನೆ. ಉಚಿತ ಶೋನ ಹಣವನ್ನು ನಾನೇ ಭರಿಸಲಿದ್ದೇನೆ'' ಎಂದು ಯತ್ನಾಳ್ ಹೇಳಿದ್ದಾರೆ.

    ''ಮುಂದಿನ ವಾರ 'ದಿ ಕಶ್ಮೀರ್ ಫೈಲ್ಸ್' ಸಿನಿಮಾ ವಿಜಯಪುರದಲ್ಲಿ ಬಿಡುಗಡೆ ಆಗಲಿದೆ. ನಮ್ಮ ಜಿಲ್ಲೆಯ ಜನಗಳೆಲ್ಲರೂ ಆ ಸಿನಿಮಾ ನೋಡಬೇಕು. ಹೀಗೆ ನಾವು ಎಲ್ಲವನ್ನೂ ಮರೆಯುತ್ತಾ ಸಾಗಿದರೆ ನಮ್ಮ ಮುಂದಿನ ಭವಿಷ್ಯ ಹೇಗಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ನಾವು ಜನ ಆ ಸಿನಿಮಾ ನೋಡಬೇಕು'' ಎಂದು ಯತ್ನಾಳ್ ಹೇಳಿದ್ದಾರೆ.

    ಕರ್ನಾಟಕದಲ್ಲಿ ಈಗಾಗಲೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮಧ್ಯ ಪ್ರದೇಶ, ಗುಜರಾತ್ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ದೊರೆತಿದೆ. ಮಧ್ಯ ಪ್ರದೇಶದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲೆಂದೇ ಪೊಲೀಸರಿಗೆ ವಿಶೇಷ ರಜೆಯನ್ನು ಮಂಜೂರು ಮಾಡಲಾಗಿದೆ.

    ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿದೆ. ಇದೊಂದು 'ಪ್ರೊಪಾಗ್ಯಾಂಡಾ' ಸಿನಿಮಾ ಎಂದು ಕೆಲವರು ಹೇಳಿದರೆ, ಇದು ನಿಜ ಇತಿಹಾಸ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಾರೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿದೆ.

    English summary
    The Kashmir Files movie to be showed in Vijayapura district for for free. BJP MLA Yathnal announce for one week every afternoon show will be free.
    Tuesday, March 15, 2022, 10:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X