ಡಿಸೆಂಬರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ನಿರೀಕ್ಷೆಯ ಚಿತ್ರಗಳಿವು

ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ತೆರೆಗೆ ಬರಲು ಸಾಕಷ್ಟು ಚಿತ್ರಗಳು ಸಿದ್ಧವಾಗಿವೆ. ಅದರಲ್ಲೂ ಅನೇಕ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ರಾರಾಜಿಸಲು ಸಜ್ಜಾಗುತ್ತಿವೆ. ಈಗಾಗಲೆ ಸ್ಯಾಂಡಲ್ ವುಡ್ ನ್ ನಲ್ಲಿ ನಿರೀಕ್ಷೆಯನ್ನು ಮೂಡಿಸಿ ಚಿತ್ರಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಅನೇಕ ಚಿತ್ರಗಳು ರಿಲೀಸ್ ಆಗುತ್ತಿವೆ.

ಸ್ಟಾರ್ ನಟರ ಅನೇಕ ಚಿತ್ರಗಳ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ಪೋಸ್ಟ್ ಪೊನ್ ಆದರೂ ಸಾಕಷ್ಟು ಚಿತ್ರಗಳು ಅಭಿಮಾನಿಗಳನ್ನು ರಂಜಿಸಲು ಬರ್ತಿವೆ. ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಚಿತ್ರಗಳು ಸೇರಿದಂತೆ ಈಗಾಗಲೆ ಒಂದಿಷ್ಟು ಸಿನಿಮಾಗಳು ಗಾಂಧಿನಗರದಲ್ಲಿ ಸದ್ದು ಮಾಡುತ್ತಿವೆ. ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿರುವ ನಿರೀಕ್ಷೆಯ ಚಿತ್ರಗಳ ಲಿಸ್ಟ್ ಹೀಗಿದೆ.

ರಿಷಬ್ ಶೆಟ್ಟಿಯ 'ಕಥಾ ಸಂಗಮ'

ರಿಷಬ್ ಶೆಟ್ಟಿಯ 'ಕಥಾ ಸಂಗಮ'

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ಕಥಾ ಸಂಗಮ' ಸಿನಿಮಾ ಮುಂದಿನ ತಿಂಗಳು ಪ್ರಾರಂಭದಲ್ಲೆ ತೆರೆಗೆ ಬರುತ್ತೆ. ಹೌದು, ಡಿಸೆಂಬರ್ 6ಕ್ಕೆ ಕಥಾ ಸಂಗಮ ಸಿನಿಮಾ ರಿಲೀಸ್ ಆಗುತ್ತಿದೆ.ಕಥಾ ಸಂಗಮ ಏಳು ಕಥೆಗಳ ಸಂಗಮ. ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಏಳು ಸಿನಿಮಾಟೋಗ್ರಾಫರ್ ಗಳು ಕೆಲಸ ಮಾಡಿದ ಸಿನಿಮಾ. ರಿಷಬ್ ಶೆಟ್ಟಿ ನಿರ್ಮಾಣದ ಜೊತೆಗೆ ಅಭಿನಯ ಕೂಡ ಮಾಡಿದ್ದಾರೆ. ಈಗಾಗಲೆ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ.

'ಒಡೆಯ'ನಾಗಿ ಬರ್ತಿದ್ದಾರೆ ದರ್ಶನ್

'ಒಡೆಯ'ನಾಗಿ ಬರ್ತಿದ್ದಾರೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ಒಡೆಯ' ಚಿತ್ರ ಕೂಡ ಮುಂದಿನ ತಿಂಗಳು ತೆರೆಗೆ ಬರುತ್ತಿದೆ. ಒಡೆಯನ ಅಬ್ಬರ ನೋಡಲು ಬಾರಿ ಕುತೂಹಲದಿಂದ ಕಾಯುತ್ತಿರುವ ಡಿ ಬಾಸ್ ಅಭಿಮಾನಿಗಳ ಮುಂದೆ ಮುಂದಿನ ತಿಂಗಳು 12ಕ್ಕೆ ಬರ್ತಿದ್ದಾರೆ. ಎಂ.ಡಿ ಶ್ರೀಧರ್ ನಿರ್ದೇಶನವಿರುವ ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ಒಡೆಯ ತಮಿಳಿನ ಸೂಪರ್ ಹಿಟ್ 'ವೀರಂ' ಚಿತ್ರದ ರಿಮೇಕ್.

ಸುದೀಪ್-ಸಲ್ಮಾನ್ 'ದಬಾಂಗ್-3'

ಸುದೀಪ್-ಸಲ್ಮಾನ್ 'ದಬಾಂಗ್-3'

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ ದಬಾಂಗ್-3 ಸಿನಿಮಾ ವರ್ಷದ ಕೊನೆಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೆ ಚಿತ್ರತಂಡ ಅನೌನ್ಸ್ ಮಾಡಿರುವ ಪ್ರಕಾರ ಚಿತ್ರ ಡಿಸೆಂಬರ್ 20ಕ್ಕೆ ದೇಶದಾದ್ಯಂತ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ದಬಾಂಗ್-3 ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಸಿನಿಮಾವೊಂದು ದೊಡ್ಡ ಮಟ್ಟಕ್ಕೆ ಕನ್ನಡದಲ್ಲಿ ತೆರೆಗೆ ಬರುತ್ತಿದೆ. ಚಿತ್ರಕ್ಕೆ ಸಲ್ಮಾನ್ ಖಾನ್ ಅವರೇ ಡಬ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ ಕೊನೆಯಲ್ಲಿ ಶ್ರೀಮನ್ನಾರಾಯಣ

ಡಿಸೆಂಬರ್ ಕೊನೆಯಲ್ಲಿ ಶ್ರೀಮನ್ನಾರಾಯಣ

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕೂಡ ಮುಂದಿನ ತಿಂಗಳು ತೆರೆಗೆ ಬರುತ್ತಿದೆ. 'ಅವನೇ ಶ್ರೀಮನ್ನಾರಾಯಣ' ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಮೇಲೆ ನಿರೀಕ್ಷೆಯ ಮಟ್ಟ ದುಪ್ಪಟ್ಟಾಗಿದೆ. ಇದೇ ತಿಂಗಳು 28ಕ್ಕೆ ಚಿತ್ರದ ಟ್ರೈಲರ್ ತೆರೆಗೆ ಬರುತ್ತಿದೆ. ಭಾರಿ ನಿರೀಕ್ಷೆ ಹುಟ್ಟುಹಾಕಿರುವ 'ಅವನೇ ಶ್ರೀಮನ್ನಾರಾಯಣ' ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಚಿತ್ರಾಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಮತ್ತೊಮ್ಮೆ ಇಡೀ ಭಾರತೀಯ ಚಿತ್ರರಂಗವೆ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತ ಎನ್ನುವ ಕುತೂಹಲ ಕನ್ನಡ ಚಿತ್ರಪ್ರಿಯರಲ್ಲಿ ಮನೆ ಮಾಡಿದೆ.

More from Filmibeat

English summary
Most expected movies Odeya, Katha Sangama, Dabangg-3 and Avane Srimannarayana will release on next month December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X