For Quick Alerts
  ALLOW NOTIFICATIONS  
  For Daily Alerts

  ಎನ್.ಟಿ.ಆರ್ ಕಟ್ಟಿಬೆಳೆಸಿದ ಪಕ್ಷದ ಉಳಿವು ಈ ಒಬ್ಬ ನಟನಿಂದ ಮಾತ್ರ ಸಾಧ್ಯ.!

  |

  ತೆಲುಗು ದೇಶಂ ಪಕ್ಷ (ಟಿಡಿಪಿ) ಆಂಧ್ರಪ್ರದೇಶದ ಪ್ರಾದೇಶಿಕ ರಾಜಕೀಯ ಪಕ್ಷ. 1982ರಲ್ಲಿ ತೆಲುಗು ಸೂಪರ್ ಸ್ಟಾರ್ ನಟ ಎನ್.ಟಿ.ಆರ್ ಕಟ್ಟಿದ ಪಕ್ಷ. ಪಕ್ಷ ಕಟ್ಟಿದ 9 ತಿಂಗಳಲ್ಲೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಎನ್.ಟಿ.ಆರ್ ಅಧಿಕಾರ ಸ್ವೀಕಾರ ಮಾಡಿದ್ದರು.

  ಈ ಮೂಲಕ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ಸೇತರ ಆದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಎನ್.ಟಿ.ಆರ್ ಪಾತ್ರರಾಗಿದ್ದಾರೆ. ಒಟ್ಟು ಮೂರು ಬಾರಿ ಎನ್.ಟಿ.ಆರ್ ಮುಖ್ಯಮಂತ್ರಿಯಾಗಿದ್ದರು. ಎನ್.ಟಿ.ಆರ್ ನಿಧನದ ಬಳಿಕ ಟಿಡಿಪಿ ಪಕ್ಷದ ಚುಕ್ಕಾಣಿ ಹಿಡಿದ ಚಂದ್ರಬಾಬು ನಾಯ್ಡು ಎರಡು ಬಾರಿ ಮುಖ್ಯಮಂತ್ರಿಯಾಗಿ ಆಂಧ್ರಪ್ರದೇಶ ಮುನ್ನಡೆಸಿದ್ದಾರೆ.

  ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ರೆಡ್ಡಿ ಪ್ರಮಾಣವಚನ ಸ್ವೀಕಾರ

  ಆಂಧ್ರಪ್ರದೇಶದ ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಸತತ 37 ವರ್ಷದಿಂದ ಶಕ್ತಿಯುತವಾಗಿ ಪಕ್ಷವಾಗಿ ಗುರುತಿಸಿಕೊಂಡಿದ್ದ ಟಿಡಿಪಿ, 2019ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡಿದೆ. ಈ ಸೋಲು ನೋಡಿದ ರಾಜಕೀಯ ತಜ್ಞರು ಟಿಡಿಪಿ ಪಕ್ಷ ಅವನತಿಯತ್ತ ಸಾಗಿದೆ, ಈ ಪಕ್ಷ ಉಳಿಯಬೇಕಾದರೇ ಆ ಒಬ್ಬ ನಟ ನಟನಿಂದ ಮಾತ್ರ ಸಾಧ್ಯ ಎನ್ನುತ್ತಿದ್ದಾರೆ. ಯಾರದು? ಮುಂದೆ ಓದಿ....

  ಯಂಗ್ ಟೈಗರ್ ಬೇಕು.!

  ಯಂಗ್ ಟೈಗರ್ ಬೇಕು.!

  ಜಗನ್ ಮೋಹನ್ ರೆಡ್ಡಿ ಭರ್ಜರಿ ಗೆಲುವು, ಚಂದ್ರಬಾಬು ನಾಯ್ಡು ಸೋಲು ನೋಡಿದ್ರೆ ಟಿಡಿಪಿ ಪಕ್ಷ ಇದರಿಂದ ವಾಪಸ್ ಆಗುವುದು ಕಷ್ಟ ಎನ್ನಲಾಗುತ್ತಿದೆ. ಆದರೆ ಜೂನಿಯರ್ ಎನ್.ಟಿ.ಆರ್ ಟಿಡಿಪಿ ಪಕ್ಷಕ್ಕೆ ಸಮರ್ಥ ನಾಯಕ. ಅವರು ಮನಸ್ಸು ಮಾಡಿದ್ರೆ ಮತ್ತೆ ತಾತನಂತೆ ಪಕ್ಷವನ್ನ ಬಲಪಡಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

  ಟಿಡಿಪಿಗೆ ಮರುಜನ್ಮ ಸಿಗುತ್ತೆ

  ಟಿಡಿಪಿಗೆ ಮರುಜನ್ಮ ಸಿಗುತ್ತೆ

  ಒಂದು ವೇಳೆ ಜೂನಿಯರ್ ಎನ್.ಟಿ.ಆರ್ ತೆಲುಗು ದೇಶಂ ಪಕ್ಷದ ಚುಕ್ಕಾಣಿ ಹಿಡಿದರೆ ಜನರು ಕೂಡ ಹಳೆಯ ತಪ್ಪುಗಳನ್ನ ಕ್ಷಮಿಸಿಬಿಡುತ್ತಾರೆ. ನಿನ್ನಿಂದ ಮಾತ್ರ ಈ ಪಕ್ಷವನ್ನ ಉಳಿಸಲು ಸಾಧ್ಯ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಚಿರಂಜೀವಿಗಿಂತ ಹೀನಾಯ ಸ್ಥಿತಿ ತಲುಪಿದ ಪವನ್ ಕಲ್ಯಾಣ್

  ಎನ್.ಟಿ.ಆರ್ ಬಗ್ಗೆ ಒಲವಿದೆ

  ಎನ್.ಟಿ.ಆರ್ ಬಗ್ಗೆ ಒಲವಿದೆ

  ಹೀಗಂತ ಕಾಟಾಚಾರಕ್ಕೆ ಹೇಳುತ್ತಿಲ್ಲ. ಟಿಡಿಪಿ ಪಕ್ಷಕ್ಕೆ ಎನ್.ಟಿ.ಆರ್ ಸಾರಥಿಯಾಗಬೇಕು ಎಂದು ಕೇಳಲಾದ ಪ್ರಶ್ನೆಗೆ ಸುಮಾರು 41 ಸಾವಿರ ಜನ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಶೇಕಡಾ 79 ರಷ್ಟು ಜನ ಎನ್.ಟಿ.ಆರ್ ಬರಲಿ ಎಂದು ಹೇಳುತ್ತಿದ್ದರೆ, 21 ರಷ್ಟು ಜನ ಮಾತ್ರ ಎನ್.ಟಿ.ಆರ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಪ್ರಚಾರದ ವೇಳೆಯೂ ಗೆಲುವು ಸಿಕ್ಕಿದೆ

  ಪ್ರಚಾರದ ವೇಳೆಯೂ ಗೆಲುವು ಸಿಕ್ಕಿದೆ

  ಈ ಹಿಂದಿನ ಚುನಾವಣೆಗಳಲ್ಲಿ ಜೂನಿಯರ್ ಎನ್.ಟಿ.ಆರ್ ಟಿಡಿಪಿ ಪಕ್ಷದ ಕೆಲವು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಆ ವೇಳೆ ಎನ್.ಟಿ.ಆರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆ ಅಭ್ಯರ್ಥಿಗಳು ಗೆದ್ದಿರುವ ಉದಾಹರಣೆಯೂ ಇದೆ.

  ಬಾಲಕೃಷ್ಣ ಕಥೆ ಏನು?

  ಬಾಲಕೃಷ್ಣ ಕಥೆ ಏನು?

  ಹಾಗ್ನೋಡಿದ್ರೆ ಎನ್.ಟಿ.ಆರ್ ಅವರ ಮಗ ನಟ ಬಾಲಕೃಷ್ಣ ಕೂಡ ಟಿಡಿಪಿ ಪಕ್ಷದಲ್ಲಿದ್ದಾರೆ. ಹಿಂದೂಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಾಲಕೃಷ್ಣ ಎರಡು ಸಲ ಗೆದ್ದಿದ್ದಾರೆ. ಆದರೆ, ಬಾಲಕೃಷ್ಣ ಅವರ ಮುಂಗೋಪ, ಸ್ವಭಾವಕ್ಕೆ ನಾಯಕತ್ವದ ಕಷ್ಟ ಎನ್ನಲಾಗುತ್ತಿದೆ. ಆದರೆ ಜೂನಿಯರ್ ಎನ್.ಟಿ.ಆರ್ ಗೆ ರಾಜಕೀಯ ಆಸಕ್ತಿ ಇದ್ಯಾ? ಇದ್ದರೂ ಟಿಡಿಪಿ ಪಕ್ಷದ ಚುಕ್ಕಾಣಿ ಹಿಡಿಯುತ್ತಾರಾ? ಕಾದು ನೋಡಬೇಕಿದೆ.

  English summary
  Telugu desam party has losed in assembly election and lok sabha election in 2019. in future The only actor can save ntr's tdp party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X