For Quick Alerts
  ALLOW NOTIFICATIONS  
  For Daily Alerts

  ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್

  |

  ಇತ್ತೀಚಿಗಷ್ಟೆ ಹೊಸ ಸಿನಿಮಾವೊಂದರ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಶಿವಣ್ಣ ತಮಾಷೆ ಮಾಡುತ್ತಾ ದರ್ಶನ್ ಅವರಿಗೆ ಸ್ವೀಟ್ ತಿನ್ನಿಸಿದ್ದರು. ಈ ವಿಡಿಯೋ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಅದರ ನಂತರ ಇದೀಗ ಶಿವರಾಜ್ ಕುಮಾರ್ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

  ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್'' ಎಂದು ಡಿ ಬಾಸ್ ದರ್ಶನ್ ಹೇಳಿದ್ದಾರೆ. 'ಒಡೆಯ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಈ ಮಾತು ದರ್ಶನ್ ಬಾಯಿಂದ ಬಂದಿದೆ. ಈ ವರ್ಷ ಹ್ಯಾಟ್ರಿಕ್ ಸಿನಿಮಾ ನೀಡುತ್ತಿದ್ದೀರಿ ಎಂದಾಗ ತಮಗೆ ಹೇಳಿದಾಗ ನಾನಲ್ಲ ಶಿವಣ್ಣ ಹ್ಯಾಟ್ರಿಕ್ ಹೀರೋ ಎಂದು ದರ್ಶನ್ ಹೇಳಿದರು.

  ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ

  ಈ ವರ್ಷ ದರ್ಶನ್ ನಟನೆಯ ಮೂರನೇ ಸಿನಿಮಾ ಬಿಡುಗಡೆ ಆಗುತ್ತಿದೆ. 'ಕುರುಕ್ಷೇತ್ರ', 'ಯಜಮಾನ' ಎರಡೂ ಸಿನಿಮಾಗಳು ನೂರು ದಿನ ಪ್ರದರ್ಶನ ಕಂಡಿವೆ. ಹೀಗಾಗಿ, 'ಒಡೆಯ' ಹಿಟ್ ಆದ್ರೆ, ದರ್ಶನ್ ಹ್ಯಾಟ್ರಿಕ್ ಬಾರಿಸುತ್ತಾರೆ.

  ನಾನು ಅದೇ ಸ್ಪೀಡ್ ನಲ್ಲಿ ಸಿನಿಮಾ ಮಾಡುತ್ತಿದ್ದೇನೆ. 'ಕುರುಕ್ಷೇತ್ರ' ಸಿನಿಮಾ ಈ ವರ್ಷ ಬಿಡುಗಡೆಯಾದ ಕಾರಣ ಮೂರು ಸಿನಿಮಾ ಆಗಿವೆ. ಹಾಗೆ ನೋಡಿದರೆ, ಕಳೆದ ವರ್ಷ ನನ್ನ ಯಾವ ಸಿನಿಮಾ ಬಿಡುಗಡೆಯೇ ಆಗಿಲ್ಲ ಎಂದು ನಕ್ಕರು ದರ್ಶನ್.

  ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

  ಅಂದಹಾಗೆ, ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಎಂ ಡಿ ಶ್ರೀಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸನಾ ತಿಮ್ಮಯ್ಯ ನಾಯಕಿ ಆಗಿದ್ದಾರೆ.

  English summary
  The only hat trick hero is Shiva Rajkumar says Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X