ಗಾಂಧಿನಗರದಲ್ಲಿರುವ ಮಹೇಶ್ ಬಾಬು ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್‌ನಲ್ಲಿ ದರ್ಶನ್ಗಿಲ್ಲ ಜಾಗ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್‌ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಉದಾಹರಣೆಗೆ ಮಹೇಶ್ ಬಾಬು.
ಹೌದು, ಆಂಧ್ರದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಕೇವಲ ಚಿತ್ರರಂಗ ಒಂದೇ ಆದಾಯದ ಮೂಲ ಅಲ್ಲ. ಬೇರೆ ಬೇರೆ ಕಡೆ ಮಹೇಶ್ ಬಾಬು ಹಣ ಹೂಡಿದ್ದಾರೆ. ಇವರದ್ದೇ ಆದ ರೆಸ್ಟೋರೆಂಟ್ ಹೈದರಾಬಾದ್‌ನಲ್ಲಿದೆ. ''The Humbl Co'' ಎಂಬ ಬಟ್ಟೆಯ ಬ್ರ್ಯಾಂಡ್ ಕೂಡ ಇದೆ. ಇನ್ನು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಕೂಡ ಹೈದರಾಬಾದ್‌ನಲ್ಲಿ ಮಹೇಶ್ ಬಾಬು ಹೊಂದಿದ್ದಾರೆ.

ಇಂಥಾ ಮಹೇಶ್ ಬಾಬು ಸದ್ಯ ತಮ್ಮ ಈ ಎಎಂಬಿ ಮಲ್ಟಿಪ್ಲೆಕ್ಸ್‌ನ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ. ಸುಪ್ರಸಿದ್ಧ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿಯೇ ಈ ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್ ಲೋಕಾರ್ಪಣೆಯಾಗಿದೆ.
ಈ ಮಲ್ಟಿಪ್ಲೆಕ್ಸ್ ಕುರಿತು ಸದ್ಯ ಹಲವಡೆ ಚರ್ಚೆ ನಡೆಯುತ್ತಿದ್ದು ಮಲ್ಟಿಪ್ಲೆಕ್ಸ್‌ನ ಒಳವಿನ್ಯಾಸ ಹಲವರ ಕಣ್ಣು ಕುಕ್ಕುತ್ತಿದೆ. ಆಸನದ ವ್ಯವಸ್ಥೆ ಮತ್ತು ಸೌಂಡ್ ಬಗ್ಗೆಯೂ ಕೂಡ ಚರ್ಚೆಗಳಾಗುತ್ತಿವೆ. ಇನ್ನು ಮಹೇಶ್ ಬಾಬು ಪಕ್ಕಾ ವ್ಯಾಪಾರಸ್ಥ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡಿಗರನ್ನು ಆಕರ್ಷಿಸಲು ತಮ್ಮ ಈ ಎಎಂಬಿ ಕಪಾಲಿಯಲ್ಲಿ ಕನ್ನಡಕ್ಕೆ ಮಹತ್ವ ನೀಡಿದ್ದಾರೆ. ಕನ್ನಡ ಚಿತ್ರರಂಗದ ತಾರೆಯರ ಭಾವಚಿತ್ರಗಳನ್ನು ಕೂಡ ಹಾಕಿದ್ದಾರೆ.ಆದರೆ ತಮ್ಮ ಈ ಗ್ಯಾಲರಿಯಲ್ಲಿ ಮಹೇಶ್ ಬಾಬು ದರ್ಶನ್‌ಗೆ ಜಾಗ ನೀಡಿಲ್ಲ.
ಹೌದು, ಅಸಲಿಗೆ ಎಎಂಬಿ ಕಪಾಲಿ ಮಲ್ಟಿಪ್ಲೆಕ್ಸ್‌ನಲ್ಲಿ ಆರ್ಟಿಸ್ಟ್ ಗ್ಯಾಲರಿ ಇದೆ. ಈ ಗ್ಯಾಲರಿಯಲ್ಲಿ ಇಂದಿನ ಜನಪ್ರಿಯ ತಾರೆಯರ ಫೋಟೊಗಳನ್ನು ಹಾಕಲಾಗಿದೆ. ಶಿವರಾಜ್ ಕುಮಾರ್.. ಸುದೀಪ್.. ಉಪೇಂದ್ರ.. ಯಶ್.. ಗಣೇಶ್.. ರಿಷಬ್ ಶೆಟ್ಟಿ.. ಧ್ರುವ ಸರ್ಜಾ... ಶ್ರೀಮುರಳಿ.. ರಕ್ಷಿತ್ ಶೆಟ್ಟಿ.. ಭಾವ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ.. ದರ್ಶನ್ ಫೋಟೊ ಮಾತ್ರ ಇಲ್ಲಿ ಕಾಣೆಯಾಗಿದೆ.
ಈ ವಿಚಾರವನ್ನು ''ಡೆಡ್ಲಿ ಸೋಮ''ಖ್ಯಾತಿಯ ಕನ್ನಡದ ನಿರ್ದೇಶಕ ರವಿ ಶ್ರೀವತ್ಸ ಗಮನಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಮಹೇಶ್ ಬಾಬು ಅವರ ಗಮನಕ್ಕೆ ಈ ವಿಚಾರ ತರುವ ಪ್ರಯತ್ನವನ್ನು ರವಿ ಶ್ರೀವತ್ಸ ಮಾಡಿದ್ದಾರೆ. ಮಹೇಶ್ ಬಾಬು ಅವರೇ ನಿಮಗೆ ಬೆಂಗಳೂರಿಗೆ ಸ್ವಾಗತ ಎಂದು ಹೇಳಿರುವ ರವಿ ಶ್ರೀವತ್ಸ ನಾನು ಎಎಂಬಿ ಸ್ಕ್ರೀನ್ಸ್ಗೆ ಭೇಟಿ ನೀಡಿದ್ದೆ. ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ. ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಆದರೆ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ದರ್ಶನ್ ಅವರ ಫೋಟೊ ಮಿಸ್ ಆಗಿದೆ, ಇದು ನೋಡಿ ಬೇಸರವಾಯ್ತು ಎಂದಿದ್ದಾರೆ. ತಪ್ಪಾಗಿದೆ, ತಿದ್ಕೋಳ್ಳಿ ಎಂಬ ಮನವಿಯನ್ನು ಕೂಡ ಮಾಡಿದ್ದಾರೆ.

ಸದ್ಯ ರವಿ ಶ್ರೀವತ್ಸ ಅವರ ಈ ಟ್ವಿಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಅಭಿಮಾನಿಗಳ ಅಸಹನೆ ಅಸಮಾಧಾನಕ್ಕೂ ಕೂಡ ಕಾರಣವಾಗಿದೆ. ಕೆಲವರು ಮತ್ತೊಂದು ಕಡೆ ''ಕುರುಕ್ಷೇತ್ರ'' ಚಿತ್ರದ ಪೋಸ್ಟರ್ ಹಾಕಿದ್ದಾರೆ ಎಂದು ಹೇಳಿದರೆ ಇನ್ನು ಕೆಲವರು ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆ ಫೋಟೊ ಹಾಕಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ಎಎಂಬಿ ಕಪಾಲಿ ಸಿನಿಮಾಸ್‌ನ ಆಡಳಿತ ಮಂಡಳಿಯ ನಿಲುವುನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.


Click it and Unblock the Notifications










