ಅವನ್ಯಾವನೋ ದರ್ಶನ್ ಹೀಗೆ ಸಾಯಲಿ ; ಹಿಡಿಶಾಪ ಹಾಕಿದ ರೇಣುಕಾ ಸ್ವಾಮಿ ಪೋಷಕರು..!

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಮತ್ತು ವಿವಾದಕ್ಕೂ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಆದರೆ.. ಈ ಬಾರಿಯ ವಿವಾದ ದರ್ಶನ್‌ಗೆ ಮುಳುವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿದೆ. 06 ದಿನಗಳ ಕಾಲ ದಾಸನನ್ನ ಪೊಲೀಸರ ವಶಕ್ಕೆ ಕಳಿಸಲಾಗಿದೆ.

ಇನ್ನೂ ಇತ್ತ ದರ್ಶನ್ ಮತ್ತು ಅವನ ಸಹಚರರ ವಿಕೃತ ಮನಸ್ಥಿತಿಗೆ ಕೊನೆಯುಸಿರೆಳೆದ ರೇಣುಕಾಸ್ವಾಮಿ ಅವರ ಮನೆಯಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಮುಂದೆ ಬಾಳಿ ಬದುಕಬೇಕಿದ್ದ ಮಗನನ್ನ ಅನ್ಯಾಯವಾಗಿ ಕೊಂದವರ ವಿರುದ್ಧ ರೋಷಾಗ್ನಿ ಉಕ್ಕಿ ಹರಿದಿದೆ. ರೇಣುಕಾ ಸ್ವಾಮಿ ತಂದೆ-ತಾಯಿ ಮತ್ತು ಪತ್ನಿಯ ಆರ್ತನಾದ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.

the-parents-of-renuka-swamy-who-was-brutally-murdered-cursed-kannada-actor-darshan

ವೀರಶೈವ-ಲಿಂಗಾಯತ ಸಂಪ್ರದಾಯದಂತೆ, ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ಎದೆಯೆತ್ತರಕ್ಕೆ ಬೆಳೆದ ಮಗನನ್ನ ಮಣ್ಣಲ್ಲಿ ಮಣ್ಣು ಮಾಡುವಾಗ ಬಿಕ್ಕಿದ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ್ ಶಿವಣ್ಣ ಗೌಡರ್ ಮತ್ತು ತಾಯಿ ರತ್ನ ಪ್ರಭ ನನ್ನ ಮಗನನ್ನ ಕೊಂದಂತೆ ಅವನನ್ನು ಸಾಯಿಸಿಬಿಡಿ, ದರ್ಶನ್​ನನ್ನ ಸಾಯಿಸಿ ಬಿಡಿ ಎಂದಿದ್ದಾರೆ.

ಅವನು ಸಾಯಬೇಕು. ಮುಖಕ್ಕೆ, ಎದೆಗೆ ಮರ್ಮಾಂಗಕ್ಕೆ ಹೊಡೆದಿದ್ದಾರೆ. ಏನೋ ಇದು ಮಾನವೀಯತೆ. ಆಫೀಸ್​ಗೆ ಹೋದವನನ್ನ ಗೊತ್ತಿಲ್ಲದಾಗೆ ಕರ್ಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗನನ್ನ ಯಾವ ಸ್ಥಿತಿಗೆ ತಂದಿದ್ದಾರೆ ಅದೇ ಸ್ಥಿತಿಗೆ ದರ್ಶನ್​​ನನ್ನ ತರಬೇಕು ಎಂದು ಹೇಳಿದ್ದಾರೆ. ಅಸಂಖ್ಯಾತ.. ಅಗಣಿತ.. ಅಭಿಮಾನಿಗಳಿಂದ ಆರಾಧ್ಯದೈವ ಎಂದು ಕರೆಯಲ್ಪಡುವ ದರ್ಶನ್‌ಗೆ ಹಿಡಿ ಶಾಪ ಹಾಕಿದ್ದಾರೆ.

the-parents-of-renuka-swamy-who-was-brutally-murdered-cursed-kannada-actor-darshan

ರೇಣುಕಾಸ್ವಾಮಿ ಮೃತದೇಹದಲ್ಲಿ 15 ಕಡೆ ಗಾಯ

ರೇಣುಕಾಸ್ವಾಮಿ ದೇಹದ ಮೇಲೆ ಸುಮಾರು 15 ಕಡೆ ಗಾಯವಾಗಿರುವುದು ರಿವೀಲ್ ಆಗಿದೆ. 15 ಕಡೆ ಹಲ್ಲೆಯಾಗಿದೆ ಅಂತಾ ಪೊಲೀಸರಿಗೆ ವೈದ್ಯರು ಮಾಹಿತಿ ಕೊಟ್ಟಿದ್ದಾರೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯದ ಗುರುತು ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲ್ಲೆಯ ಸ್ವರೂಪ ಬೆಳಕಿಗೆ ಬಂದಿದೆ. ಇನ್ನು 2-3 ದಿನಗಳಲ್ಲಿ ಮರಣೋತ್ತರ ಪರೀಕ್ಷಾ ವರದಿ ಅಧಿಕೃತವಾಗಿ ಪೊಲೀಸರ ಕೈ ಸೇರಿದೆ. ಮರಣೋತ್ತರ ಪರೀಕ್ಷೆ ಬಳಿಕ ರೇಣುಕಾಸ್ವಾಮಿ ತಂದೆ ತಾಯಿಯಿಂದ ಸಹಿ ಪಡೆಯಲಾಗಿದೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು.

More from Filmibeat

English summary
The parents of Renuka Swamy, who was brutally murdered, cursed Kannada actor Darshan."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X