''ನಿಮ್ದೆ ಕಥೆ'' ಹೇಳಲು ನಿಮ್ಮ ಮುಂದೆ ಬರುತ್ತಿದ್ದಾರೆ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್...!

By ಫಿಲ್ಮಿಬೀಟ್ ಡೆಸ್ಕ್

ಗಾಂಧಿನಗರಕ್ಕೆ ಆಗಾಗ ಹೊಸಬರ ತಂಡ ಬರುವುದು, ಸಿನಿಮಾ ಮಾಡುವುದು ಕಾಮನ್. ಆದರೆ, ಹೀಗೆ ಸಿದ್ಧವಾಗುವ ಎಲ್ಲ ಸಿನಿಮಾಗಳು ಗೆಲ್ಲುತ್ತವೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಈ ಸಿನಿ ಪ್ರಪಂಚನೇ ಹಾಗೇ. ಒಂದ್ ರೀತಿ ಅದೃಷ್ಟದ ಆಟ ಇದ್ದಾಂಗೆ. ಗೆದ್ದೋನು ಗೆದ್ದ, ಬಿದ್ದೋನು ಬಿದ್ದ. ಆದರೂ ಕೂಡ ಸಿನಿಮಾ ಮಾಡೋರು ಮಾಡುತ್ತಾನೇ ಇರುತ್ತಾರೆ. ಇದಕ್ಕೆ ನಿಮ್ದೆ ಕಥೆ ಮತ್ತೊಂದು ಉದಾಹರಣೆ.

ಹೌದು, ನಿಮ್ದೆ ಕಥೆ. ತೆರೆಗೆ ಬರಲು ಸಿದ್ಧವಾಗುತ್ತಿರುವ ಮತ್ತೊಂದು ಹೊಸಬರ ಚಿತ್ರ. ವಿಶೇಷ ಅಂದರೆ ಲವ್ ಮಾಕ್ಟೈಲ್ ಖ್ಯಾತಿಯ ಅಭಿಲಾಷ್ ದಳಪತಿ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಷಿಕಾ ಶೆಟ್ಟಿ ನಾಯಕಿಯಾಗಿ ಇವರಿಗೆ ಜೊತೆಯಾಗಿದ್ದಾರೆ.

The post-production of Nimde Kathe starring Abhilash of Love Mocktail fame is nearly complete

ಸಿಎಸ್ ರಾಘವೇಂದ್ರ ಈ ಚಿತ್ರದ ನಿರ್ದೇಶಕರು. ಹಾಸ್ಯ ಕಥೆಗೆ ಸಸ್ಪೆನ್ಷ್‌ ಅಂಶವನ್ನು ಸೇರಿಸಿ ಪ್ರೇಕ್ಷಕರಿಗೆ ಬೇಕಾದ ಮನರಂಜನೆಯನ್ನು ನೀಡುವ ಪ್ರಯತ್ನವನ್ನು ನಿರ್ದೇಶಕ ಸಿಎಸ್ ರಾಘವೇಂದ್ರ ಇಲ್ಲಿ ಮಾಡಿದ್ಧಾರೆ. ಬೆಂಗಳೂರು ಮತ್ತು ಮೈಸೂರು ಸುತ್ತ ಮುತ್ತ 40 ದಿನಗಳ ಕಾಲ ಚಿತ್ರದ ಚಿತ್ರೀಕರಣವನ್ನೂ ಮಾಡಲಾಗಿದ್ದು, ಚಿತ್ರದ ಚಿತ್ರೀಕರಣ ಸದ್ಯಕ್ಕೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಸದ್ಯಕ್ಕೆ ಭರದಿಂದ ನಡೆಯುತ್ತಿದೆ. ಮುಕ್ತಾಯದ ಹಂತವನ್ನೂ ತಲುಪಿದೆ.

ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಹೀಗೆ ಅನೇಕರು ಈ ನಿಮ್ದೆ ಕಥೆ ಚಿತ್ರದ ಭಾಗವಾಗಿದ್ಧಾರೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಈ ನಿಮ್ದೆ ಕಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಪ್ರವೀಣ್ ನಿಕೇತನ್ ಅವರ ಸಂಗೀತದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ. ಇನ್ನೂ ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ಸುನಿಲ್ ಎಸ್ ಅವರ ಸಂಕಲನವಿದೆ.

The post-production of Nimde Kathe starring Abhilash of Love Mocktail fame is nearly complete

ಇನ್ನೂ ಬ್ಲೂ ಸ್ಕೈ ಸ್ಟುಡಿಯೋಸ್ ಆಡಿಯೋ ಸಂಸ್ಥೆಯಡಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಆಲೋಚನೆ ಮಾಡಿರುವ ಚಿತ್ರತಂಡ, ಬೇಕಿರುವ ತಯಾರಿಯನ್ನು ಸದ್ಯಕ್ಕೆ ಮಾಡಿಕೊಳ್ಳುತ್ತಿದೆ. ಉಳಿದಂತೆ ಸದ್ಯದಲ್ಲಿಯೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಪ್ಲ್ಯಾನ್ ಕೂಡ ಮಾಡಿರುವ ಚಿತ್ರತಂಡ ಪ್ರಚಾರದ ಕೆಲಸಗಳಿಗೆ ಕೂಡ ಚಾಲನೆ ನೀಡಲಿದೆ. ಇದೇ ವರ್ಷ ಅಂದ್ರೆ 2024 ನವೆಂಬರ್ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ.

ಒಟ್ನಲ್ಲಿ ಲವ್ ಮಾಕ್ಟೇಲ್ ಚಿತ್ರದಲ್ಲಿನ ಇವರ ಪಾತ್ರಕ್ಕೆ ಕನ್ನಡಿಗರು ತೋರಿದ ಪ್ರೀತಿಯಿಂದ ಪುಳಕಿತಗೊಂಡಿರುವ ಅಭಿಲಾಷ್ ದಳಪತಿ ಸದ್ಯಕ್ಕೆ ನಾಯಕನಾಗಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ಧಾರೆ. ನಿಮ್ದೆ ಕಥೆ ಚಿತ್ರದ ಮೂಲಕ ನಿಮ್ಮ ಎದುರು ಶೀಘ್ರದಲ್ಲಿಯೇ ಬರಲಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಅಭಿಲಾಷ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ, ನಿಮ್ದೆ ಕಥೆ ಚಿತ್ರ ಹೇಗೆ ಮೂಡಿ ಬಂದಿದೆ ಎಂಬ ಪ್ರಶ್ನೆಗೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.

More from Filmibeat

Read more about: sandalwood release filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X