For Quick Alerts
  ALLOW NOTIFICATIONS  
  For Daily Alerts

  ಆ ಊರಿನ ಘಟನೆಯೇ ಸ್ಫೂರ್ತಿ: 'D56' ಸಿನಿಮಾ ಸ್ಟೋರಿ ಅದೇನಾ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 56ನೇ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ಕೊಡದೇ ಈಗಾಗಲೇ ಒಂದು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿದೆ ಚಿತ್ರತಂಡ. 'ಕ್ರಾಂತಿ' ಸಿನಿಮಾ ನಂತರ 'D56' ಸಿನಿಮಾ ರಿಲೀಸ್ ಆಗಲಿದೆ. ಹಂಪಿ ಬಳಿಯ ಹಳ್ಳಿಯೊಂದರಲ್ಲಿ ನಡೆದ ಘಟನೆಯೇ ಈ ಕಥೆಗೆ ಸ್ಪೂರ್ತಿ ಎನ್ನಲಾಗುತ್ತಿದೆ.

  ಸೂಪರ್ ಹಿಟ್ 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ 'D56'ಗೂ ಕೆಲಸ ಮಾಡುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧಾನಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 'ರಾಬರ್ಟ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್‌ನ ಹೊಸ ಲುಕ್‌ನಲ್ಲಿ ತೋರಿಸಿ ತರುಣ್ ಸಕ್ಸಸ್ ಕಂಡಿದ್ದರು. ಇಲ್ಲೂ ಅದೇ ಪ್ರಯತ್ನ ನಡೀತಿದೆ. ಇದು ಬೇರೆಯದ್ದೇ ರೀತಿಯ ಸಿನಿಮಾ ಎಂದು ತಂಡ ಹೇಳುತ್ತಿದೆ.

  ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ ದರ್ಶನ್: ಎಲ್ಲಿಗೆ ಪಯಣ.. ಏನ್ ಸಮಾಚಾರ?ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ ದರ್ಶನ್: ಎಲ್ಲಿಗೆ ಪಯಣ.. ಏನ್ ಸಮಾಚಾರ?

  ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'D56' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಥೀಮ್ ಪೋಸ್ಟರ್ ಸಿಕ್ಕಾಪಟ್ಟೆ ಸದ್ಧು ಮಾಡಿತ್ತು. ಪೋಸ್ಟರ್‌ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯ ಚಿತ್ರವನ್ನು ಹಾಕಿ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ.." ಅಂತ ಬರೆದು ಕುತೂಹಲ ಮೂಡಿಸಿದ್ದರು.

  ಆ ಊರಿನ ಘಟನೆ ಚಿತ್ರಕ್ಕೆ ಸ್ಫೂರ್ತಿ

  ಆ ಊರಿನ ಘಟನೆ ಚಿತ್ರಕ್ಕೆ ಸ್ಫೂರ್ತಿ

  'D56' ಚಿತ್ರಕ್ಕೆ ತರುಣ್ ಸುಧೀರ್ ಜೊತೆ ಸೇರಿ ನಿರ್ದೇಶಕ ಜಡೇಶ್ ಹಂಪಿ ಕಥೆ ಬರೆದಿದ್ದಾರೆ. ಹಂಪಿ ಬಳಿ ತಮ್ಮ ಊರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಘಟನೆಯನ್ನು ಸೇರಿಸಿ, ಒಂದು ಜಬರ್ದಸ್ತ್ ಕಥೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ವತಃ ಜಡೇಶ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಂದಿನ ವ್ಯವಸ್ಥೆಯನ್ನು ಎತ್ತಿ ತೋರಿಸುವಂತಹ ಸಿನಿಮಾ ಇದಾಗಿದ್ದು, ಸಮಾಜಕ್ಕೆ ಸೂಕ್ತವಾದ ಸಂದೇಶ ಕೂಡ ಇದೆ ಎನ್ನಲಾಗಿದೆ.

  ಕೇಕ್ ಕಟ್ ಮಾಡಿ ಕಿಕ್ ಕೊಟ್ಟ ದಾಸ: 'D56' ಸೆಟ್ಟಲ್ಲಿ ಹೊಸ ರೂಲ್ಸ್!ಕೇಕ್ ಕಟ್ ಮಾಡಿ ಕಿಕ್ ಕೊಟ್ಟ ದಾಸ: 'D56' ಸೆಟ್ಟಲ್ಲಿ ಹೊಸ ರೂಲ್ಸ್!

  ಕಥೆ ಕೇಳಿ ಚಾಲೆಂಜಿಂಗ್ ಸ್ಟಾರ್ ಖುಷ್

  ಕಥೆ ಕೇಳಿ ಚಾಲೆಂಜಿಂಗ್ ಸ್ಟಾರ್ ಖುಷ್

  ಲಾಕ್‌ಡೌನ್ ಸಮಯದಲ್ಲಿ ತರುಣ್‌ ಸುಧೀರ್ ಹಾಗೂ ಜಡೇಶ್ ಒಂದೆಡೆ ಸೇರಿ ಬಹಳ ಚರ್ಚೆ ನಡೆಸುತ್ತಿದ್ದರಂತೆ. ಈ ಸಮಯದಲ್ಲೇ ತಮ್ಮ ಹಳ್ಳಿಯಲ್ಲಿ ನಡೆದ ಘಟನೆಗಳನ್ನು ಜಡೇಶ್ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಥ್ರಿಲ್ಲಾದ ತರುಣ್ ಸುಧೀರ್, ಒಂದೊಳ್ಳೆ ಕಥೆೆ ಪೀಠಿಕೆ ಹಾಕಿದ್ದಾರೆ. ಅಲ್ಲಿಂದ ಶುರುವಾಗಿ ಕಥೆ ಒಂದೊಳ್ಳೆ ಶೇಪ್ ಪಡೆದುಕೊಂಡಿದೆ. ನಟ ದರ್ಶನ್ ಈ ಕಥೆ ಕೇಳಿ ಮೆಚ್ಚಿಕೊಂಡು ನಟಿಸಲು ಒಪ್ಪಿದ್ರಂತೆ.

  ಜಡೇಶ್ 'ಗುರು ಶಿಷ್ಯರು' ಬಿಡುಗಡೆಗೆ ಸಿದ್ಧ

  ಜಡೇಶ್ 'ಗುರು ಶಿಷ್ಯರು' ಬಿಡುಗಡೆಗೆ ಸಿದ್ಧ

  ಸೂಪರ್ ಹಿಟ್ 'ಗುರುಶಿಷ್ಯರು' ಟೈಟಲ್‌ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಿರುವುದು ಗೊತ್ತೇಯಿದೆ. ಜಡೇಶ್ ಕೆ. ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತರುಣ್ ಸುಧೀರ್ ಚಿತ್ರದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯೂಸರ್ ಆಗಿದ್ದಾರೆ. ಶರಣ್ ಈ ಚಿತ್ರದಲ್ಲಿ ಪೀಟಿ ಮಾಸ್ತರ್ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 23ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

  ಹೊಸ ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್: 'ಕಾಟೇರ'ನ ತಯಾರಿ ಹೇಗಿದೆ?ಹೊಸ ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್: 'ಕಾಟೇರ'ನ ತಯಾರಿ ಹೇಗಿದೆ?

  ದರ್ಶನ್ ಥಾಲ್ಯಾಂಡ್ ಪ್ರವಾಸ

  ದರ್ಶನ್ ಥಾಲ್ಯಾಂಡ್ ಪ್ರವಾಸ

  ಇನ್ನು ನಟ ದರ್ಶನ್ ಇತ್ತೀಚೆಗೆ ಸ್ನೇಹಿತರ ಜೊತೆ ಥಾಲ್ಯಾಂಡ್‌ಗೆ ತೆರಳಿದ್ದಾರೆ. ಈಗಾಗಲೇ 'D56' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ. 'ಕ್ರಾಂತಿ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ರಾಜ್ಯೋತ್ಸವ ಸಂಭ್ರಮದಲ್ಲಿ ದರ್ಶನ್ ಅಕ್ಷರ 'ಕ್ರಾಂತಿ'ಯ ಕಿಡಿ ಹಚ್ಚಲಿದ್ದಾರೆ. ಥಾಲ್ಯಾಂಡ್‌ನಿಂದ ವಾಪಸ್ ಬಂದಮೇಲೆ 'D56' ಚಿತ್ರದ ಹೊಸ ಶೆಡ್ಯೂಲ್ ಶುರುವಾಗಲಿದೆ.

  English summary
  The Secret of Darshan And Tharun Sudhir D56 Movie. D56 Movie subject, which explores today's system, gives a very relevant message to society.
  Wednesday, September 14, 2022, 10:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X