For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ಶಿವಣ್ಣ 'ಕವಚ' ಚಿತ್ರತಂಡ

  By Pavithra
  |

  ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಾಕಷ್ಟು ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆಯಷ್ಟೇ ಚಿತ್ರತಂಡ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡೆದಿದೆ.

  'ಕವಚ' , ಮಲೆಯಾಳಂ ನ 'ಒಪ್ಪಂ' ಸಿನಿಮಾದ ರೀಮೇಕ್ ಚಿತ್ರ ಆಗಿದ್ದು ಚಿತ್ರದಲ್ಲಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇಶಾ ಕೊಪ್ಪಿಕರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಆಕ್ಟ್ ಮಾಡಿದ್ದು, ಮತ್ತೋರ್ವ ನಾಯಕಿ ಇತಿ ಆಚಾರ್ಯ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ

  'ಕವಚ' ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಕುರುಡನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ ವಶಿಷ್ಠ ಸಿಂಹ, ತಬಲಾ ನಾಣಿ, ಲಯೇಂದ್ರ, ರವಿಕಾಳೆ ಇನ್ನೂ ಅನೇಕರು ಅಭಿನಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಜೊತೆಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಾಸು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸುಧೀಂದ್ರ 'ಕವಚ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಸೇರಿದಂತೆ ಮೈಸೂರು ಊಟಿಯಲ್ಲಿ ಶೂಟಿಂಗ್ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಟೀಂ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಸಿದ್ದತೆ ಮಾಡಿಕೊಳ್ಳುತ್ತಿದೆ.

  English summary
  The shooting of Kannada cinema kavacha is complete. vasu is Directed the movie Shivaraj Kumar, Vasishtha Simha is acting in film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X