For Quick Alerts
  ALLOW NOTIFICATIONS  
  For Daily Alerts

  ಯಶ್ ಕೆ ಜಿ ಎಫ್ ಸಿನಿಮಾ ತಡವಾಗಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

  By Pavithra
  |
  ಕೆಜಿಎಫ್ ಸಿನಿಮಾ ರಿಲೀಸ್ ಲೇಟ್ ಆಗ್ತಿರೋದು ಇದೇ ಕಾರಣದಿಂದ | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಬಿಡುಗಡೆ ಆಗದೆ ವರ್ಷ ಕಳೆದು ಹೋಯ್ತು. ಡಿಸೆಂಬರ್ ನಲ್ಲೇ ಚಿತ್ರ ರಿಲೀಸ್ ಆಗುತ್ತೆ ಅಂತ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯೂ ಆಗಿದ್ದಾಯ್ತು. ಇನ್ನು ಸಿನಿಮಾದ ಚಿತ್ರೀಕರಣ ಬಾಕಿ ಇದೆ ಎನ್ನುತ್ತಿದ್ದಾರೆ ನಿರ್ದೇಶಕರು ಮತ್ತು ರಾಕಿಂಗ್ ಸ್ಟಾರ್ ಯಶ್.

  ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಿರುವ ಸಿನಿಮಾ ತಂಡ 'ಕೆ ಜಿ ಎಫ್' ಚಿತ್ರವನ್ನ ಎರಡು ಭಾಗವಾಗಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಕೆ ಜಿ ಎಫ್ ಸಿನಿಮಾ ಬಿಡುಗಡೆ ಯಾವಾಗ ಅನ್ನುವುದು ಅಭಿಮಾನಿಗಳ ಪ್ರಶ್ನೆ ಆಗಿದೆ.

  ಅಪರಾಧ ಮುಕ್ತ ಸಮಾಜಕ್ಕಾಗಿ ಪಣತೊಟ್ಟ ರಾಕಿಂಗ್ ಸ್ಟಾರ್ಅಪರಾಧ ಮುಕ್ತ ಸಮಾಜಕ್ಕಾಗಿ ಪಣತೊಟ್ಟ ರಾಕಿಂಗ್ ಸ್ಟಾರ್

  ಸಿನಿಮಾ ಯಾಕೆ ತಡವಾಗುತ್ತಿದೆ. ಹುಟ್ಟುಹಬ್ಬದಂದು ಕೆಲವೇ ದಿನಗಳಲ್ಲಿ ಶೇವ್ ಮಾಡಿ ಕೆ ಜಿ ಎಫ್ ಚಾಪ್ಟರ್ 1 ಶೂಟಿಂಗ್ ಮುಗಿಸುತ್ತೇವೆ ಎಂದಿದ್ದರು ಯಶ್ ಆದರೆ ಇನ್ನೂ ಕೂಡ ಶೇವ್ ಮಾಡಿಲ್ಲ ಹಾಗಾದರೇ ಚಿತ್ರೀಕರಣ ಮುಗಿದಿಲ್ವಾ? ಅಷ್ಟಕ್ಕೂ 'ಕೆ ಜಿ ಎಫ್' ಸಿನಿಮಾ ಚಿತ್ರೀಕರಣ ತಡವಾಗಲೂ ಕಾರಣವೇನು? ಇಲ್ಲಿದೆ ಅಸಲಿ ಕಾರಣ ಮುಂದೆ ಓದಿ.

  ಇನ್ನೂ ಬಾಕಿ ಇದೆ 'ಕೆ ಜಿ ಎಫ್' ಚಿತ್ರೀಕರಣ

  ಇನ್ನೂ ಬಾಕಿ ಇದೆ 'ಕೆ ಜಿ ಎಫ್' ಚಿತ್ರೀಕರಣ

  ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ 'ಕೆ ಜಿ ಎಫ್' ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದು ಚಾಪ್ಟರ್2 ಶೂಟಿಂಗ್ ಪ್ರಾರಂಭ ಆಗಬೇಕಿತ್ತು. ಆದರೆ 'ಕೆ ಜಿ ಎಫ್' ಚಾಪ್ಟರ್ 1 ನದ್ದೇ ಶೇಕಡ 20% ರಷ್ಟು ಚಿತ್ರೀಕರಣ ಬಾಕಿ ಇದೆ.

  ಚಿತ್ರೀಕರಣ ತಡವಾಗಲು ಇದೆ ಕಾರಣ

  ಚಿತ್ರೀಕರಣ ತಡವಾಗಲು ಇದೆ ಕಾರಣ

  ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ನಂತರ 'ಕೆ ಜಿ ಎಫ್' ಸಿನಿಮಾದ ಉಳಿದ ಭಾಗ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂದೆ ವಿಧಿವಶರಾದರು ಅದೇ ಕಾರಣದಿಂದ ಚಿತ್ರೀಕರಣ ಮಾಡಲು ಸಾಧ್ಯವಾಗಿಲ್ಲ.

  ಚಿತ್ರೀಕರಣ ಆರಂಭ ಯಾವಾಗ

  ಚಿತ್ರೀಕರಣ ಆರಂಭ ಯಾವಾಗ

  ಕಳೆದ ತಿಂಗಳಲ್ಲಿ ನಿರ್ದೇಶಕರ ತಂದೆ ತೀರಿಕೊಂಡ ಕಾರಣದಿಂದ ಚಿತ್ರೀಕರಣ ಶುರುವಾಗಿಲ್ಲ . ಮೂಲಗಳ ಪ್ರಕಾರ ಇದೇ ತಿಂಗಳಲ್ಲಿ ಶೂಟಿಂಗ್ ಆರಂಭ ಮಾಡಿ ಆದಷ್ಟು ಬೇಗ ಕುಂಬಳಕಾಯಿ ಹೊಡೆಯಲಿದ್ದಾರೆ.

  ಸಿನಿಮಾ ಯಾವಾಗ ರಿಲೀಸ್

  ಸಿನಿಮಾ ಯಾವಾಗ ರಿಲೀಸ್

  ಯಶ್ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಫ್ಯಾನ್ಸ್ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ 'ಕೆ ಜಿ ಎಫ್' ಬಿಡುಗಡೆ ಆಗುವುದು ಯಾವಾಗ ಎನ್ನುವುದು. ಮೊದಲೇ ಚಿತ್ರತಂಡ ಹೇಳಿದಂತೆ ಸಿನಿಮಾಗಾಗಿ ಸಾಕಷ್ಟು ಸೆಟ್ ಗಳನ್ನ ಹಾಕಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಹೆಚ್ಚು ಆದ್ದರಿಂದ ಎಲ್ಲವೂ ಫೈನಲ್ ಆದ ನಂತರವೇ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ.

  ಅಭಿಮಾನಿಗಳಲ್ಲಿ ಶುರುವಾಯ್ತು ಯಜಮಾನ ಸಿನಿಮಾ ಕ್ರೇಜ್ಅಭಿಮಾನಿಗಳಲ್ಲಿ ಶುರುವಾಯ್ತು ಯಜಮಾನ ಸಿನಿಮಾ ಕ್ರೇಜ್

  English summary
  The shooting of Kannada movie 'KGF' is delayed. Filming was stopped due to director Prashant Neil's father passed away february month. KGF Rocking starring Yash Star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X