»   » ಸುದೀಪ್ ಹೊಸ ಕಂಪನಿ ಹೆಸರು The Stage 360

ಸುದೀಪ್ ಹೊಸ ಕಂಪನಿ ಹೆಸರು The Stage 360

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರು ಸದಾ ಏನೋ ಒಂದು ಹೊಸತನ್ನು ಮಾಡುತ್ತಲೇ ಇರುತ್ತಾರೆ. ನಟನೆ, ನಿರ್ದೇಶನ, ರಿಯಾಲಿಟಿ ಶೋ ಹೀಗೆ ಅವರು ಏನೇ ಮಾಡಿದರೂ ತಮ್ಮದೇ ಆದಂತಹ ಛಾಪು ಮೂಡಿಸುತ್ತಿರುವುದು ಗೊತ್ತೇ ಇದೆ. ಈಗ ಹೊಸ ಕ್ಷೇತ್ರಕ್ಕೆ ಸುದೀಪ್ ಅಡಿಯಿಡುತ್ತಿದ್ದಾರೆ.

ತಮ್ಮದೇ ಆದಂತಹ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಆರಂಭಿಸುತ್ತಿದ್ದಾರೆ. ಅದಕ್ಕೆ The Stage 360 ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಹೇಳಿಕೊಂಡಿದ್ದಾರೆ. "ಹಲವಾರು ತಿಂಗಳುಗಳ ಕಾಲ ಉತ್ತಮ ಕೆಲಸ ಮಾಡಿದೆ ನಮ್ಮ ತಂಡ...ಕಡೆಗೆ ನಮ್ಮ ಇವೆಂಟ್ ಕಂಪನಿ Stage 360ಯನ್ನು ಆರಂಭಿಸುತ್ತಿದ್ದೇವೆ" ಎಂದಿದ್ದಾರೆ.


ನವೆಂಬರ್ 16ಕ್ಕೆ The Stage 360 ಕಂಪನಿ ಆರಂಭವಾಗಲಿದೆ. ಈಗಾಗಲೆ ವೆಬ್ ಸೈಟನ್ನೂ ಕಿಚ್ಚ ಸುದೀಪ್ ತೆರೆದಿದ್ದೂ ಈಗಾಗಲೆ ಕೌಂಟ್ ಡೌನ್ ಶುರುವಾಗಿದೆ. ಈ ಕಂಪನಿಯ ಜವಾಬ್ದಾರಿಯನ್ನು ಸುದೀಪ್ ಅವರ ಪತ್ನಿ ಪ್ರಿಯಾ ಅವರು ನೋಡಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಶೋ, ಕ್ರೀಡಾ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮ, ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮ, ಪ್ರಚಾರ ಕಾರ್ಯಕ್ರಮ, ಸಭೆ ಸಮಾರಂಭ, ಪ್ರದರ್ಶನ ಮೇಳ, ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.

ಅದರಲ್ಲೂ ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸಿದಾಗಲೆಲ್ಲಾ ಪ್ರತಿ ಬಾರಿಯೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಲೇ ಇರುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸುದೀಪ್ ಅವರು ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಆರಂಭಿಸಿದ್ದಾರೆ. ಈ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಸೇವೆ ಕೊಡುವುದರ ಜೊತೆಗೆ ಸಾಕಷ್ಟು ಹಣವನ್ನೂ ಮಾಡಬಹುದು.

ಸುದೀಪ್ ಅವರ ಸಲಹೆ ಸೂಚನೆಗಳು ಇದ್ದೇ ಇರುತ್ತವೆ. ಈ ಕಂಪನಿಯ ನಿರ್ವಹಣೆಗಾಗಿ ಸುದೀಪ್ ಯುವ ತಂಡವನ್ನೇ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಭೆ ಸಮಾರಂಭಗಳಿರಬಹುದು, ದೊಡ್ಡ ಮಟ್ಟದ ಕಾರ್ಯಕ್ರಮಗಳಿರಬಹುದು ಅವನ್ನು ನಿರ್ವಹಿಸುವ ಸಾಧ್ಯತೆಗಳಿವೆ. (ಒನ್ಇಂಡಿಯಾ ಕನ್ನಡ)

<blockquote class="twitter-tweet blockquote"><p>After many months of gud wrk by my team..finally launching my event company 'Stage360' on th 16th of this month..'<a href="http://t.co/j7HrAalI4p">http://t.co/j7HrAalI4p</a>'</p>— Kichcha Sudeepa (@KicchaSudeep) <a href="https://twitter.com/KicchaSudeep/statuses/397012011256516609">November 3, 2013</a></blockquote> <script async src="//platform.twitter.com/widgets.js" charset="utf-8"></script>

English summary
Kichcha Sudeep is launching an events management company on 16th November. Sudeep tweeted that, "After many months of gud wrk by my team..finally launching my event company 'Stage360' on th 16th of this month.. 'http://Www.thestage360.com '
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada