ಐರಾ- ಯಥರ್ವ್‌ಗೆ ಬೊಂಬಾಟ್ ಗಿಫ್ಟ್ ಕಳಿಸಿದ 'ಕಲ್ಕಿ' ಮಾಮ ಪ್ರಭಾಸ್; ಇಬ್ರು ಫುಲ್ ಖುಷ್

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಅಬ್ಬರಿಸುತ್ತಿದ್ದಾರೆ. ಇಬ್ಬರ ನಡುವೆ ನಡುವೆ ಆತ್ಮೀಯ ಒಡನಾಟವಿದೆ. ಆಗಾಗ್ಗೆ ಪಾರ್ಟಿಗಳಲ್ಲಿ ಭೇಟಿ ಆಗುತ್ತಿರುತ್ತಾರೆ. 'ಸಲಾರ್' ಸಿನಿಮಾ ಮುಹೂರ್ತ ಸಮಾರಂಭಕ್ಕೆ ಯಶ್ ವಿಶೇಷ ಅತಿಥಿಯಾಗಿ ಹೋಗಿದ್ದರು.

ಸದ್ಯ ಯಶ್ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮತ್ತೊಂದು ಕಡೆ ಪ್ರಭಾಸ್ 'ಕಲ್ಕಿ 2898 AD' ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ತೆರೆಗೆ ಬರಲಿದೆ. ಜೂನ್ 27ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ಭೈರವ ಆಗಿ ಪ್ರಭಾಸ್ ನಟಿಸಿದ್ದಾರೆ.

The team of Prabhas starrer Kalki 2898 AD sends gift to Yash s children Ayra Yatharv

ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ದಿಶಾ ಪಟಾನಿ, ಕಮಲ್ ಹಾಸನ್ ಸಹ 'ಕಲ್ಕಿ 2898AD' ಚಿತ್ರದಲ್ಲಿ ನಟಿಸಿದ್ದಾರೆ. ನಾಗ್‌ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಹೀರೊ ಭೈರವನ ಜೊತೆ ಬುಜ್ಜಿ ಹೆಸರಿನ ಚಿಕ್ಕ ರೋಬೊ, ಅದಕ್ಕೊಂದು ವಾಹನವೂ ಇರಲಿದೆ. ಭೈರವ ಅದೇ ವಾಹನ ಏರಿ ಸುತ್ತಾಡಲಿದ್ದಾನೆ. ಬಹಳ ಸ್ಟೈಲಿಶ್ ಆಗಿ ಈ ವಾಹನ ತಯಾರಿಸಲಾಗಿದೆ. ಸದ್ಯ ಆ ಕಾರನ್ನು ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಬುಜ್ಜಿ ವಾಹನದ ಮಾದರಿಯ ಪುಟ್ಟ ಗೊಂಬೆಯನ್ನು ನಟ ರಾಮ್‌ಚರಣ್ ಹಾಗೂ ಉಪಾಸನಾ ಮಗಳು ಕ್ಲಿಂಕಾರಗೆ ಚಿತ್ರತಂಡ ನೀಡಿತ್ತು. ಅದೇ ತರಹದ ಉಡುಗೊರೆ ಈಗ ಯಶ್- ರಾಧಿಕಾ ಪಂಡಿತ್ ಮಕ್ಕಳಾದ ಐರಾ ಹಾಗೂ ಯಥರ್ವ್‌ಗೆ ತಲುಪಿದೆ. ಈ ವಿಚಾರವನ್ನು ಸ್ವತಃ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಬಹಳ ವಿಭಿನ್ನವಾಗಿ 'ಕಲ್ಕಿ 2898 AD' ಚಿತ್ರತಂಡ ಪ್ರಚಾರ ಮಾಡುತ್ತಿದೆ.

The team of Prabhas starrer Kalki 2898 AD sends gift to Yash s children Ayra Yatharv

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿ ದತ್ ಬಹಳ ಅದ್ಧೂರಿಯಾಗಿ 'ಕಲ್ಕಿ 2898 AD' ಚಿತ್ರ ನಿರ್ಮಿಸಿದ್ದಾರೆ. 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ ಎಂದು ಹೇಳಲಾಗುತ್ತಿದೆ. ಕೇವಲ ಬುಜ್ಜಿ ವಾಹನಕ್ಕೆ 7 ಕೋಟಿ ರೂ. ವ್ಯಯಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕೆಲ ದಿನಗಳ ಹಿಂದೆ ಅದ್ಧೂರಿ ಕಾರ್ಯಕ್ರಮ ನಡೆಸಿ ಬುಜ್ಜಿಯನ್ನು ಚಿತ್ರತಂಡ ಪರಿಚಯಿಸಿತ್ತು.

ಬುಜ್ಜಿ ಗೊಂಬೆ ಜೊತೆಗೆ ಸಣ್ಣ ಪತ್ರವನ್ನು ಚಿತ್ರತಂಡ ಕಳುಹಿಸಿಕೊಟ್ಟಿದೆ. ರಾಧಿಕಾ ಪಂಡಿತ್ ಫೋಟೊ ಸಮೇತ ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಚಿತ್ರಕ್ಕಾಗಿ ಆ ವಿಶೇಷ ಕಾರ್‌ ಅನ್ನು ಮಹೀಂದ್ರಾ ರಿಸರ್ಚ್ ವ್ಯಾಲಿ ಹಾಗೂ ಜಯಮ್ ಆಟೋಮೋಟಿವ್ ಜಂಟಿಯಾಗಿ ನಿರ್ಮಿಸಿವೆ. 3 ಚಕ್ರಗಳ ಈ ವಾಹನದಲ್ಲಿ ಒಬ್ಬರು ಮಾತ್ರ ಕುಳಿತು ಪ್ರಯಾಣಿಸಬಹುದಾಗಿದೆ. ನಾಗಚೈತನ್ಯಾ ಇತ್ತೀಚೆಗೆ ಈ ಕಾರ್ ಏರಿ ಸುತ್ತಾಡಿದ ವಿಡಿಯೋ ವೈರಲ್ ಆಗಿತ್ತು.

ಸದ್ಯ ಸಿನಿಮಾ ಪ್ರಚಾರಕ್ಕಾಗಿ ಈ ವಾಹನವನ್ನು ಚೆನ್ನೈಗೆ ಕೊಂಡೊಯ್ಯಲಾಗಿದೆ. ಅಭಿಮಾನಿಗಳು ಈ ವಾಹನದ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅವಕಾಶವಿದೆ. ಶೀಘ್ರದಲ್ಲೇ ಇದು ಬೆಂಗಳೂರಿಗೆ ಬರಲಿದೆ. ಪ್ರಭಾಸ್‌ಗೆ ಆಪ್ತರಾಗಿರುವ ಯಶ್ ಚಲಾಯಿಸುತ್ತಾರಾ ಕಾದು ನೋಡಬೇಕಿದೆ. ಕ್ಲಿಂಕಾರ, ಐರಾ-ಯಥರ್ವ್ ಬಳಿಕ ಇದೇ ರೀತಿಯ ಬುಜ್ಜಿ ಬೊಂಬೆಯನ್ನು ಆಲಿಯಾ ಭಟ್ ಮಗಳು ರಾಹಾಗೂ ಕಳುಹಿಸುವ ಸಾಧ್ಯತೆಯಿದೆ. ಅಂದಹಾಗೆ ಜೂನ್ 10ಕ್ಕೆ 'ಕಲ್ಕಿ 2898 AD' ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

More from Filmibeat

English summary
Telugu actor Prabhas gifts to Yash-radhika's children;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X