ಅಪ್ಪ-ಮಗಳ ಭಾವನಾತ್ಮಕ ಕಥೆ '' ಸಿ'', ಗಮನ ಸೆಳೆಯುತ್ತಿದೆ ಟೀಸರ್..!

By ಫಿಲ್ಮಿಬೀಟ್ ಡೆಸ್ಕ್

ಚಿತ್ರರಂಗದಲ್ಲಿ ಮೊದಲಿಂದ ಗುರುತಿಸಿಕೊಂಡವರು, ಸಿನಿಮಾದಲ್ಲಿದವರ ಮಕ್ಕಳು ಮಾತ್ರ ಸಿನಿಮಾರಂಗಕ್ಕೆ ಬರಬೇಕೆಂಬ ಅಲಿಖಿತ ನಿಯಮ ಹಿಂದೊಮ್ಮೆ ಇತ್ತು. ಆದರೆ ಬದಲಾದ ಕಾಲದಲ್ಲಿ ಈ ಓಬಿರಾಯನ ಕಾಲದ ಡೈಲಾಗುಗಳು ಈಗೀಗ ಮೂಲೆಗೆ ಸೇರಿವೆ. ಯಾಕಂದ್ರೆ ಈಗ ಟ್ಯಾಲೆಂಟ್ ಒಂದೇ ಮಾನದಂಡ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗಕ್ಕೆ ಅನೇಕರು ಕನಸನ್ನೊತ್ತು ಬರುತ್ತಿದ್ಧಾರೆ. ಈ ಸಾಲಿಗೆ ಈಗ ಕಿರಣ್ ಸುಬ್ರಮಣಿ ಕೂಡ ಸೇರಿಕೊಂಡಿದ್ದಾರೆ.

ಹೌದು, ಕಿರಣ್ ಸುಬ್ರಮಣಿ.. ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದಿರುವ ಪ್ರತಿಭಾವಂತ. ತಮ್ಮ ಮೊದಲ ಪ್ರಯತ್ನ 'ಸಿ' ಚಿತ್ರವನ್ನು ನಿರ್ದೇಶಿಸುವುದಲ್ಲದೇ ಚಿತ್ರದ ಮುಖ್ಯ ಪಾತ್ರವನ್ನೂ ನಿರ್ವಹಿಸಿರುವ ಕಿರಣ್ ಸದ್ಯಕ್ಕೆ ತಮ್ಮ ಕನಸಿನ ಕೂಸು ' ಸಿ' ಪರಿಚಯವನ್ನು ಕನ್ನಡಿಗರಿಗೆ ಮಾಡಿಸಿದ್ದಾರೆ. ಟೀಸರ್ ಅನಾವರಣಗೊಳಿಸಿದ್ದಾರೆ.

the-teaser-of-a-new-kannada-film-c-has-been-released

ಅಪ್ಪ ಮತ್ತು ಮಗಳ ನಡುವಿನ ಭಾವನಾತ್ಮಕವಾದ ಕಥೆ ಈ 'ಸಿ' ಚಿತ್ರದಲ್ಲಿದೆ. ಕಣ್ಣು ಕಾಣದ ಮಗಳ ಆಸೆ ನೆರವೇರಿಸಲು ತಂದೆ ನಡೆಸುವ ಹೋರಾಟಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಕಿರಣ್ ಸುಬ್ರಮಣಿ ಮಾಡಿದ್ದಾರೆ. ಮೆಡಿಕಲ್ ಮಾಫಿಯಾ ಮೇಲೆ ಬೆಳುಕು ಚೆಲ್ಲುವ ಪ್ರಯತ್ನವನ್ನೂ ಮಾಡಿದ್ದಾರೆ.

ಬೇಬಿ ಸಾನ್ವಿ ಚಿತ್ರದಲ್ಲಿ ಕಿರಣ್ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀಧರ್ ರಾಮ್, ಪ್ರಶಾಂತ್ ನಟನಾ, ಆರ್ಯ, ಮಜಾ ಭಾರತ ಪಾಟೀಲ್, ಮಧುಮಿತಾ, ಚೈತ್ರಾ, ನಿರ್ಮಲಾ ನಂದನ್ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ. ಮಗನ ಮೇಲಿನ ಪ್ರೀತಿ ಮತ್ತು ಸಿನಿಮೋತ್ಸಾಹ ಕಂಡು ಕಿರಣ್ ತಂದೆ ಎ.ಜಿ.ಸುಬ್ರಮಣಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಸೂರ್ಯ ಮತ್ತು ವಿರೇಶ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಎ.ಬಿ.ಮುರಳಿಧರನ್ ಸಂಗೀತ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದರ ಜೊತೆ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕೂಡ ಕೆಲಸ ಮಾಡಿದ್ಧಾರೆ.ನವೀನ್ ಸುಂದರ್ ರಾವ್, ವಿನಯ್ ರಾಜ್ ಹಾಗೂ ಚಿಕ್ಕಣ್ಣ ಮೂವರು ಸೇರಿ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ಧಾರೆ.

the-teaser-of-a-new-kannada-film-c-has-been-released

ಅಂದ್ಹಾಗೇ ಕಿರಣ್ ಸುಬ್ರಮಣಿಗೆ ಇದು ಮೊದಲ ಪ್ರಯತ್ನವಾದರೂ, ಸಿನಿಮಾದ ಅಕ್ಷರಾಭ್ಯಾಸವನ್ನೂ ಅನೇಕರ ಬಳಿ ಕಿರಣ್ ಮಾಡಿದ್ದಾರೆ. ಹಗಲಿರುಳು ಸಿನಿಮಾವನ್ನೇ ಧ್ಯಾನಿಸಿದ್ಧಾರೆ. ಇವರ ಈ ಶ್ರಮಕ್ಕೆ ಪೂರಕವಾಗಿ ಈಗಾಗಲೇ ಹಿಂದೆ ಬಿಡುಗಡೆ ಮಾಡಲಾಗಿದ್ದ 'ಕಂದ ಕಂದ' ಹಾಡು ಪ್ರೇಕ್ಷಕರ ಗಮನವನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಶೇಷ ಎಂದರೆ ಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಹೀಗೆ ಹಾಡಿನ ಬೆನ್ನಲ್ಲೇ ಈಗ ಬಿಡುಗಡೆ ಮಾಡಲಾದ ಟೀಸರ್ ಕೂಡ ನಿಧಾನಕ್ಕೆ ಎಲ್ಲರ ಚಿತ್ತವನ್ನೂ ಕದಿಯುತ್ತಿದೆ. ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಸದ್ಯಕ್ಕೆ ಟೀಸರ್ ಮೂಲಕ ಪ್ರಚಾರದ ಅಂಗಳಕ್ಕೆ ತಮ್ಮ ಚಿತ್ರ ''ಸಿ''ಯನ್ನು ಕರೆತಂದಿರುವ ಚಿತ್ರತಂಡ ಇದೇ ಆಗಸ್ಟ್ 23ಕ್ಕೆ ಚಿತ್ರವನ್ನು ಕರುನಾಡಿನೆಲ್ಲೆಡೆ ಬಿಡುಗಡೆ ಮಾಡುವ ಯೋಜನೆಯನ್ನೂ ಹಾಕಿಕೊಂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X