'ದಿ ಟೆರರಿಸ್ಟ್' ಸಿನಿಮಾದ ಶೂಟಿಂಗ್ ಮುಗಿಸಿದ ರಾಗಿಣಿ
ನಟಿ ರಾಗಿಣಿ ದ್ವಿವೇದಿ ಈಗ 'ದಿ ಟೆರರಿಸ್ಟ್' ಎಂಬ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾದ ಚಿತ್ರೀಕರಣ ಈಗ ಮುಗಿದಿದೆ. ಇತ್ತೀಚಿಗಷ್ಟೆ ಸಿನಿಮಾಗೆ ಕುಂಬಳ ಕಾಯಿ ಒಡೆಯಲಾಗಿದೆ. ಈ ವೇಳೆ ಇಡೀ ಚಿತ್ರತಂಡ ಒಟ್ಟಿಗೆ ನಿಂತು ಫೋಟೋ ತೆಗೆದುಕೊಂಡಿದೆ.
'ದಿ ಟೆರರಿಸ್ಟ್' ಸಿನಿಮಾವನ್ನು ಪಿ.ಸಿ.ಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. 'ರಾಗ' ಸಿನಿಮಾದ ನಂತರ ಪಿ.ಸಿ.ಶೇಖರ್ ಮಾಡುತ್ತಿರುವ ಚಿತ್ರ ಇದಾಗಿದೆ. ಇದೊಂದು ಮಹಿಳಾ ಪ್ರದಾನ ಸಿನಿಮಾವಾಗಿದ್ದು, ಪಿ.ಸಿ.ಶೇಖರ್ ಮೊದಲ ಬಾರಿಗೆ ಈ ರೀತಿಯ ಸಿನಿಮಾಗೆ ಕೈ ಹಾಕಿದ್ದಾರೆ. ಪ್ರಚಲಿತ ಸಮಸ್ಯೆಗಳ ಮೇಲೆ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆಯಂತೆ. ಸಿನಿಮಾದ ಹೆಸರಿಗೆ ತಕ್ಕಂತೆ ಭಯೋತ್ಪಾದನೆ ಕುರಿತ ಚಿತ್ರ ಇದಾಗಿದೆ.

ಅಲಂಕಾರ್ ಸಂತಾನಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಿನಿಮಾವನ್ನು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡುವ ಕನಸು ಅವರಿಗೆ ಇದೆಯಂತೆ. ಇನ್ನು ಚಿತ್ರಕ್ಕೆ ವೈದಿ ಕ್ಯಾಮರಾ ಹಿಡಿದಿದ್ದಾರೆ. ಚಿನ್ ಸಂಭಾಷಣೆ ಬರೆದಿದ್ದಾರೆ. ಡಿಸೆಂಬರ್ ನಲ್ಲಿ ಶುರುವಾದ ಚಿತ್ರ ಚಿತ್ರೀಕರಣ ಏಪ್ರಿಲ್ ನಲ್ಲಿ ಮುಗಿದಿದೆ.


Click it and Unblock the Notifications











