'ದಿ ವಿಲನ್'ಗಳ ಮುಂದೆ ನಿಲುವ ಧೈರ್ಯ ಮಾಡಿದ 'ಟೆರರಿಸ್ಟ್'
Recommended Video

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಟ್ಟಿಗೆ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್'. ಈ ಚಿತ್ರ ಅಕ್ಟೋಬರ್ 18ಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಆದರೆ, ಈಗ ಈ ಚಿತ್ರದ ಎದುರು ಮತ್ತೊಂದು ಸಿನಿಮಾ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.
ಪ್ರೇಮ್ ನಿರ್ದೇಶನ ಎಂದ ಮೇಲೆ ರಾಜ್ಯಾದ್ಯಂತ ಬಾರಿ ಕ್ರೇಜ್ ಇದ್ದೇ ಇರುತ್ತೇ. ಅದೇ ರೀತಿ 'ದಿ ವಿಲನ್' ಚಿತ್ರಕ್ಕೆ ಸಹ ಬಾರಿ ಕ್ರೇಜ್ ಇದೆ. ವಿಶ್ವಾದ್ಯಂತ 1000ಕ್ಕೂ ಹೆಚ್ಚು ಸ್ಪ್ರೀನ್ ಗಳಲ್ಲಿ ಬಿಡುಗಡೆಯಗುತ್ತಿರುವ 'ದಿ ವಿಲನ್' ಗಾಂಧಿನಗರದಲ್ಲೇ ಮೂರು ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯಗುತ್ತಿದೆ.
ಈ ಚಿತ್ರಕ್ಕಿರುವ ಕ್ರೇಜ್ ನ ಪರಿಣಾಮವಾಗಿ ಬೇರೆ ಯಾವ ಚಿತ್ರಗಳು ಅಂದು ಬಿಡುಗಡೆಯಗುವುದಿಲ್ಲ ಎಂದು ಸಿನಿ ಪಂಡಿತರು ಲೆಕ್ಕ ಹಾಕಿದ್ದರು. ಆದರೆ, ಅವರ ಲೆಕ್ಕ ಇದೀಗ ತಲೆಕೆಳಗಾಗಿದೆ. ರಾಗಿಣಿ ಅಭಿನಯದ 'ಟೆರರಿಸ್ಟ್' ಚಿತ್ರ ಅದೇ ದಿನ ಬಿಡುಗಡೆಯಗುತ್ತಿದೆ.

ಇಲ್ಲಿ ಮೊದಲ ಬಾರಿಗೆ ರಾಗಿಣಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದು, ಪೋಸ್ಟರ್ ಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಪಿ.ಸಿ.ಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು 'ದಿ ವಿಲನ್' ಜೊತೆ ರಿಲೀಸ್ ಆಗುತ್ತಿರುವ ನಿರ್ದೇಶಕರ ಸಾಹಸವನ್ನ ನಿಜಕ್ಕೂ ಮೆಚ್ಚುಬೇಕು.


Click it and Unblock the Notifications











