ಟೈಟಲ್ ಕಾಂಟ್ರವರ್ಸಿ, ನೈಸ್ ರೋಡ್‌ನಲ್ಲಿದ್ದ ಧರ್ಮ ಈಗ ನೈಟ್ ರೋಡ್‌ನಲ್ಲಿ, ಪ್ರತ್ಯಕ್ಷ..!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ಒಂದಿಲ್ಲೊಂದು ಪ್ರಯತ್ನಗಳು ಆಗ್ತಾನೇ ಇರುತ್ತಾವೆ. ಕೆಲವು ಚಿತ್ರದ ಟೈಟಲ್‌ನಿಂದ ಗಮನ ಸೆಳೆದರೆ ಇನ್ನೂ ಕೆಲವು ಚಿತ್ರದ ಟ್ರೇಲರ್‌ ಮತ್ತು ಹಾಡುಗಳಿಂದ ಗಮನ ಸೆಳೆಯುತ್ತವೆ. ಇದಕ್ಕೆ ಮತ್ತೊಂದು ಉದಾಹರಣೆ ನೈಸ್ ರೋಡ್.

ಹೌದು, ನೈಸ್ ರೋಡ್.. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ. ಆರಂಭದಿಂದ ಕೂತುಹಲವನ್ನು ಹುಟ್ಟು ಹಾಕುತ್ತಾನೇ ಬಂದ ಈ ಚಿತ್ರಕ್ಕೆ ನೈಸ್ ರೋಡ್ ಚಿತ್ರಕ್ಕೆ ಹಿಂದೆ ನೈಸ್ ರೋಡ್ ಕಂಪನಿಯವರಿಂದನೇ ವಿರೋಧ ವ್ಯಕ್ತವಾಗಿತ್ತು. ಚಿತ್ರದ ಶೀರ್ಷಿಕೆ ಬದಲಿಸುವಂತೆ ಆ ಸಂಸ್ಥೆ ಪಟ್ಟು ಹಿಡಿದಿತ್ತು. ಅದ್ರಂತೆ ಈಗ ಚಿತ್ರದ ಟೈಟಲ್‌ನ ಚಿತ್ರತಂಡ ಬದಲಿಸಿದೆ. ನೈಸ್ ರೋಡ್ ಬದಲು ತಮ್ಮ ಚಿತ್ರಕ್ಕೆ ನೈಟ್ ರೋಡ್ ಎಂದು ಹೆಸರಿಟ್ಟಿದೆ. ಸಿನಿಮಾ ತಂಡದವರು ಈ ಸಿನಿಮಾಗೂ ನೈಸ್ ರೋಡ್ ಗು ಯಾವುದೇ ಸಂಬಂಧವಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಆದ್ದರಿಂದ ಕೊನೆಗೆ ಸಿನಿಮಾ ಟೈಟಲ್ ಬದಲಿಸಲು ನಿರ್ಧರಿಸಿ ಈಗ ನೈಟ್ ರೋಡ್ ಇಟ್ಟಿರುವುದಾಗಿ ಚಿತ್ರತಂಡ ಹೇಳಿದೆ.

The title of Kannada Film Nice Road has been changed to Night Road

ಈ ನೈಟ್ ರೋಡ್ ಚಿತ್ರವನ್ನು ಪುನರ್ ಗೀತಾ ಸಿನಿಮಾಸ್ ಎಂಬ ಬ್ಯಾನರಿನಲ್ಲಿ ಗೋಪಾಲ್ ಹಳೆಪಾಳ್ಯ ಅವರು ನಿರ್ಮಿಸಿ ತಾವೇ ನಿರ್ದೇಶನವನ್ನು ಮಾಡಿದ್ದಾರೆ, ಈ ಚಿತ್ರವನ್ನು N ರಾಜು ಗೌಡರು ಅರ್ಪಿಸಿದ್ದಾರೆ, ಸಂಗೀತ ಸತೀಶ್ ಆರ್ಯನ್, ಛಾಯಾಗ್ರಾಹಣ ಪ್ರವೀಣ್ ಶೆಟ್ಟಿ, ಜೀವನ್ ಪ್ರಕಾಶ್ ಸಂಕಲನ ಮಾಡಿದ್ದು,
ಧರ್ಮ, ಜ್ಯೋತಿ ರೈ, ಗಿರಿಜಲೋಕೇಶ್ ಗೋವಿಂದೇಗೌಡ(gg), ರವಿಕಿಶೋರ್, ಮಂಜು ರಂಗಾಯಣ, ಪ್ರಭು, ಸಚ್ಚಿ,ಮಂಜು ಕೃಷ್, ರೇಣು ಶಿಕಾರಿ, ಸುನೇತ್ರ, ಚಂದ್ರ ಮೂರ್ತಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ನೈಟ್ ರೋಡ್ ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂತುಕೊಂಡು ನೋಡುವಂತೆ ಮಾಡುತ್ತದೆ ಸಿನಿಮಾದ ಕೊನೆವರೆಗೂ ತನ್ನ ಸಸ್ಪೆನ್ಸ್ ಅನ್ನು ಬಿಟ್ಟು ಕೊಡದೆ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ಚಿತ್ರ ತಂಡದವರ ಅಭಿಪ್ರಾಯ. ಸಿನಿಮಾವನ್ನು ಇದೆ ತಿಂಗಳು ಕೊನೆ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

More from Filmibeat

Read more about: title sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X