'ಮ್ಯಾಕ್ಸ್' ಟ್ರೇಲರ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್, ಚಿತ್ರದುರ್ಗದಲ್ಲಿ ಮ್ಯಾಕ್ಸಿಮಮ್ ಮನರಂಜನೆ...!

ಈ ವರ್ಷ ಕಳಾಹೀನವಾಗಿ, ನಿಸ್ತೇಜಗೊಂಡು ನೆಲಕ್ಕೊರಗಿದ್ದ ಕನ್ನಡ ಚಿತ್ರರಂಗ ಒಂದು ಕಡೆ ಭೀಮ ಮತ್ತೊಂದು ಕಡೆ ಕೃಷ್ಣಂ ಪ್ರಣಯ ಸಖಿ ಚಿತ್ರದ ಗೆಲುವಿನಿಂದ ದುಬ್ಬುಕ್ಕಂತಾ ಎದ್ದು ನಿಂತಿತ್ತು. ಆ ನಂತರ ಬಂದ ಭೈರತಿ ರಣಗಲ್ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಬಲ ತುಂಬಿತ್ತು. ಈಗ ಉಪೇಂದ್ರ ನಿರ್ದೇಶನದ ಯುಐ ತೆರೆಗೆ ಬಂದಿದೆ. ಎಲ್ಲೆಡೆ ಚಿತ್ರಕ್ಕೆ ಮೊದಲ ದಿನ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. ಅರ್ಥವಾಗದಿದ್ದರೂ ಅರ್ಥವಾದಂತೆ, ಅರ್ಥವಾದರೂ ಅರ್ಥವಾಗದಂತೆ ಒಬ್ಬೊಬ್ಬರು ಒಂದೊಂದು ರೀತಿಯ ವಿಮರ್ಶೆಯನ್ನು ನೀಡುತ್ತಿದ್ಧಾರೆ. ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಸೈನ್ಯ ರಣೋತ್ಸಾಹದಿಂದ ಸಿದ್ಧವಾಗುತ್ತಿದೆ. ಚಿತ್ರ ಇದೇ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಹೀಗಿರುವಾಗ ಸಡಗರ-ಸಂಭ್ರಮಕ್ಕೆ ಮುನ್ನುಡಿ ಬರೆಯಲು ಅಣಿಯಾದ ಸುದೀಪ್ ಮತ್ತು ಅವರ ಮ್ಯಾಕ್ಸ್ ಚಿತ್ರದ ಸದಸ್ಯರು ಚಿತ್ರದ ಟ್ರೇಲರ್‌ನ ಇದೇ ಡಿಸೆಂಬರ್ 22ರಂದು ಬೆಳ್ಳಿಗ್ಗೆ 11-08ಕ್ಕೆ ಬಿಡುಗಡೆ ಮಾಡುತ್ತಿರುವ ಖುಷಿಯ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ಧಾರೆ.

The trailer of Kichcha Sudeep s highly anticipated movie MAX will drop on this date Details inside

ಸಹಜವಾಗಿ ಈ ವಿಚಾರವನ್ನು ತಿಳಿದು ಅಭಿಮಾನಿಗಳು ಕಾತುರಗೊಂಡಿದ್ದಾರೆ. ಮ್ಯಾಕ್ಸ್ ಟ್ರೇಲರ್‌ ಹೇಗಿರಬಹುದು, ಯಾವೆಲ್ಲ ವಿಚಾರ ಟ್ರೇಲರ್‌ನಲ್ಲಿ ಬಹಿರಂಗವಾಗಬಹುದು ಎಂದು ಕುತೂಹಲದ ಕಣ್ಣಿನಿಂದ ಡಿಸೆಂಬರ್ 22ರ ಶುಭ ಮುಂಜಾನೆಗೆ ಕಾದು ಕುಳಿತಿದ್ದಾರೆ. ಇನ್ನೂ.. ಮ್ಯಾಕ್ಸ್ ಚಿತ್ರದ ಮ್ಯಾಕ್ಸಿಮಮ್ ಮನರಂಜನೆಯ ಚಿಕ್ಕ ಸ್ಯಾಂಪಲ್‌ನ ಕೋಟೆ ನಗರಿಯ ಕನ್ನಡಿಗರು ಅವತ್ತು ಅಂದರೆ ಡಿಸೆಂಬರ್ 22ರಂದು ಮೊದಲು ಕಣ್ತುಂಬಿಕೊಳ್ಳಲಿದ್ದಾರೆ. ಮ್ಯಾಕ್ಸ್ ಚಿತ್ರದ ಮೆಗಾ ಕಾರ್ಯಕ್ರಮಕ್ಕೆ ಅಸಂಖ್ಯಾತ-ಅಗಣಿತ ಸುದೀಪಿಯನ್ಸ್ ಸಾಕ್ಷಿಯಾಗಲಿದ್ದಾರೆ.

ಅಂದ್ಹಾಗೇ ಹೌದು, ಸುದೀಪ್ .. ಅದ್ಯಾವಾಗ 'ಮ್ಯಾಕ್ಸ್' ಎಂಬ ಚಿತ್ರ ಶುರು ಮಾಡಿದರೋ, ಆ ಕ್ಷಣದಿಂದನೇ ಈ ಚಿತ್ರದ ಸುತ್ತ ಮುತ್ತ ಕುತೂಹಲ ಗರಿಗೆದರಿತ್ತು. ಇನ್ನೂ.. ಒಂದು ತಿಂಗಳ ಹಿಂದೆ ಬಿಡುಗಡೆಯಾದ ಟೀಸರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಆ ನಂತರ ಬಂದ ಚಿಕ್ಕ ತುಣುಕು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಈಗ ಟ್ರೇಲರ್ ಸರದಿ.

ಇನ್ನುಳಿದಂತೆ ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಬೆಳ್ಳಿ ತೆರೆಯಲ್ಲಿ ಧಗಧಗಿಸಲಿರುವ ಮ್ಯಾಕ್ಸ್‌ನಲ್ಲಿ ಮ್ಯಾಕ್ಸಿಮಮ್ ಸಂಖ್ಯೆಯಲ್ಲಿ ಇರುವುದು ಕನ್ನಡಿಗರೇ. ಉದಾಹರಣೆಗೆ ಸುಕೃತಾ ವಾಗ್ಲೇ, ಸಂಯುಕ್ತ ಹೊರನಾಡು, ಉಗ್ರಂ ಮಂಜು. ಅನಿರುದ್ಧ್ ಭಟ್. ಇನ್ನೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.ಕಲಾ ನಿರ್ದೇಶಕ ಶಿವಕುಮಾರ್ ಅವರದ್ದಾದರೆ, ಶೇಖರ್ ಚಂದ್ರ ಚಿತ್ರವನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಇರುವ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ‌ಕೂಡ ಇದ್ದಾರೆ. ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇನ್ನೂ 'ತುಪಾಕಿ'.. 'ಕಬಾಲಿ'.. 'ಅಸುರನ್'.. 'ಕರ್ಣನ್'.. 'ನಾರಪ್ಪ'.. ಹೀಗೆ ಒಂದಕ್ಕಿಂತ ಒಂದು ಚಿತ್ರಗಳನ್ನೂ ತಮಿಳಿನಲ್ಲಿ ನಿರ್ಮಾಣ ಮಾಡಿರುವ ಕಲಿಪುಲಿ ಎಸ್ ತನು ಈ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ. ಇನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮತ್ತು ವಿತರಣೆಯಲ್ಲಿ ಕೂಡ ಹೆಸರುವಾಸಿಯಾದ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಕರುನಾಡಿನೆಲ್ಲೆಡೆ ಬಿಡುಗಡೆ ಮಾಡಲಿದೆ. ಇನ್ನು ಮ್ಯಾಕ್ಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ರನ್‌ಟೈಮ್ 2 ಗಂಟೆ 23 ನಿಮಿಷ ಎಂದು ಹೇಳಲಾಗುತ್ತಿದೆ.

ಇನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್​ನಡೆದಿರುವುದು ವಿಶೇಷ. ಒಟ್ನಲ್ಲಿ ಸದ್ಯಕ್ಕೆ ಸುದೀಪ್ ಅವರ ಮಹತ್ವಕಾಂಕ್ಷೆಯ ಚಿತ್ರ ಮ್ಯಾಕ್ಸ್ ಈ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದುರ್ಗದಲ್ಲಿ ಕಿಚ್ಚನ ಉತ್ಸವ ನಡೆಯಲಿದೆ. ಮ್ಯಾಕ್ಸ್ ಮೆರವಣಿಗೆಗೆ ಚಾಲನೆ ಸಿಗಲಿದೆ.

More from Filmibeat

Read more about: max kichcha sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X