ಹೊಸ ಪಯಣ ಶುರು; 'ದಿ ವಿಲನ್' ಬೆಡಗಿ ಮದುವೆ ಫೋಟೊಗಳು ವೈರಲ್

ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

ಸದ್ಯ ಆಮಿ ಜಾಕ್ಸನ್ ತಮ್ಮ ಎರಡನೇ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ಎಡ್ ವೆಸ್ಟ್‌ವಿಕ್‌ನನ್ನು ಆಕೆ ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಟಲಿಯ ಅಮಾಲ್ಫಿ ತೀರದಲ್ಲಿ ನಡೆದಿದೆ. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರು ಮಾತ್ರ ಭಾಗಿ ಆಗಿದ್ದರು.

The Villain actress Amy Jackson Ties the Knot with Ed Westwick in Italy see pics

ನಾಯಕಿ ಆಮಿ ಜಾಕ್ಸನ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. "ಈಗಷ್ಟೇ ಹೊಸ ಪಯಣ ಶುರುವಾಗಿದೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಮದುವೆ ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ನವ ಜೋಡಿಗೆ ಶುಭ ಕೋರುತ್ತಿದ್ದಾರೆ. ಎರಡು ವರ್ಷಗಳಿಂದ ಇಬ್ಬರೂ ಪ್ರೇಮ ಪಾಶಕ್ಕೆ ಸಿಲುಕಿದ್ದರು.

2015ರಲ್ಲಿ ನಟಿ ಆಮಿ ಉದ್ಯಮಿ ಜಾರ್ಜ್‌ ಪನಯಿಟೊ ಎಂಬಾತನ ಜೊತೆ ಡೇಟಿಂಗ್ ನಡೆಸಿದ್ದರು. ಗರ್ಭಿಣಿ ಕೂಡ ಆಗಿದ್ದರು. ಬಳಿಕ ಮದುವೆ ಆಗಲು ನಿರ್ಧರಿಸಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮದುವೆಗೂ ಮುನ್ನ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿದ್ದರು. ಆದರೆ ಬಳಿಕ ಇಬ್ಬರೂ ದೂರಾಗಿದ್ದರು.

ಜಾರ್ಜ್‌ನಿಂದ ದೂರಾದ ಬಳಿಕ ಆಮಿ ಇನ್‌ಸ್ಟಾಗ್ರಾಮ್‌ನಲ್ಲಿ ಆತನ ಫೋಟೊಗಳನ್ನೆಲ್ಲಾ ಡಿಲೀಟ್ ಮಾಡಿದ್ದರು. ಬಳಿಕ ಎಡ್ ವೆಸ್ಟ್‌ವಿಕ್‌ ಜೊತೆ ಆಮಿ ಸುತ್ತಾಡುತ್ತಿರುವ ಫೋಟೊಗಳು ವೈರಲ್ ಆಗಿತ್ತು. ಇಬ್ಬರೂ ಕಿಸ್ ಮಾಡುತ್ತಿರುವ ಫೋಟೊ ನೋಡಿದ ಮೇಲೆ ಮದುವೆ ಆಗುವುದು ಖಚಿತ ಎಂದು ವರದಿಗಳಾಗಿತ್ತು. ಇದೀಗ ಇಬ್ಬರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

The Villain actress Amy Jackson Ties the Knot with Ed Westwick in Italy see pics

ಬ್ರಿಟನ್ ಮೂಲದ ಮಾಡೆಲ್ ಆಮಿ ಜಾಕ್ಷನ್ 'ಮದ್ರಾಸಿಪಟ್ಟಿಣಂ' ಎನ್ನುವ ತಮಿಳು ಚಿತ್ರದಲ್ಲಿ ನಟಿಸಿದ್ದರು. ಆ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ತೆಲುಗು, ಹಿಂದಿ ಚಿತ್ರಗಳಲ್ಲಿ ಮಿಂಚಿದ್ದರು. ತಮಿಳಿನ 'ತಾಂಡವಂ', ತೆಲುಗಿನ 'ಯವಡು' ಆಕೆ ನಟಿಸಿದ ದಕ್ಷಿಣದ ಸಿನಿಮಾಗಳು. ಬಾಲಿವುಡ್‌ನಲ್ಲಿ 'ಸಿಂಗ್ ಈಸ್ ಬ್ಲಿಂಗ್‌', 'ಅಭಿನೇತ್ರಿ', 'ತೆರಿ', 'ಫೀಕ್ರಿ ಅಲಿ', 'ದೇವಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಶಿವಣ್ಣ ಹಾಗೂ ಸುದೀಪ್ ಒಟ್ಟಿಗೆ ನಟಿಸಿದ 'ದಿ ವಿಲನ್' ಚಿತ್ರ ಭಾರೀ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿದರೂ ಪ್ರೇಮ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಅದ್ಧೂರಿ ಚಿತ್ರಕ್ಕೆ ಆಮಿ ಜಾಕ್ಸನ್ ಅವರನ್ನು ನಾಯಕಿಯಾಗಿ ಕರೆತಂದಿದ್ದರು. ಚಿತ್ರದಲ್ಲಿ ಸೀತಾ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.

ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ '2.0' ಚಿತ್ರದಲ್ಲಿ ಸಹ ಆಮಿ ಜಾಕ್ಸನ್ ನಟಿಸಿದ್ದರು. ಸದ್ಯ ತಮಿಳಿನ ಮಿಷನ್: ಚಾಪ್ಟರ್-1 ಹಾಗೂ ಕ್ರ್ಯಾಕ್ ಎನ್ನುವ ಹಿಂದಿ ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್, ಬ್ರೇಕಪ್ ಎಲ್ಲಾ ಕಾಮನ್ ಎನ್ನುವಂತಾಗಿದೆ. ಯೂರೋಪ್‌ನಂತಹ ದೇಶಗಳಲ್ಲಿ ಇದು ಹೊಸದೇನು ಅಲ್ಲ. ಆಪ್ತರು ಶುಭ ಹಾರೈಸುತ್ತಿದ್ದಾರೆ.

More from Filmibeat

English summary
AmyJackson and Ed Westwick share their official wedding photos;
Read more about: amy jackson hollywood sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X