ಅಕ್ಟೋಬರ್ ಮೊದಲ ವಾರದಿಂದಲೇ 'ದಿ ವಿಲನ್' ಬುಕ್ಕಿಂಗ್ ಆರಂಭ.!
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ದಿ ವಿಲನ್'. ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜೆಯ ದಿನದಂದು 'ದಿ ವಿಲನ್' ದೇಶದಾದ್ಯಂತ ಬಿಡುಗಡೆ ಆಗಲಿದೆ.
'ದಿ ವಿಲನ್' ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ತುದಿಗಾಲಲ್ಲಿದ್ದಾರೆ. 'ದಿ ವಿಲನ್' ಚಿತ್ರಕ್ಕೆ ಕ್ರೇಜ್ ಹಾಗೂ ಡಿಮ್ಯಾಂಡ್ ಹೆಚ್ಚಿರುವ ಕಾರಣ, ಎರಡು ವಾರಗಳ ಮುಂಚಿತವಾಗಿ ಅಡ್ವಾನ್ಸ್ ಬುಕ್ಕಿಂಗ್ ತೆರೆಯಲು ನಿರ್ಧರಿಸಲಾಗಿದ್ಯಂತೆ.

ಮೂಲಗಳ ಪ್ರಕಾರ, ಅಕ್ಟೋಬರ್ 2 (ಗಾಂಧಿ ಜಯಂತಿ) ರಿಂದಲೇ 'ದಿ ವಿಲನ್' ಟಿಕೆಟ್ ಗಳಿಗೆ ಬುಕ್ಕಿಂಗ್ ಶುರುವಾಗಲಿದ್ಯಂತೆ. 'ದಿ ವಿಲನ್' ಚಿತ್ರವನ್ನ ಮೊದಲ ದಿನವೇ ನೋಡಬೇಕು ಎಂಬ ಇಚ್ಛೆ ಇರುವವರು ಬುಕ್ಕಿಂಗ್ ಓಪನ್ ಆದ ಕೂಡಲೆ ಸೀಟ್ ಗಳ ಮೇಲೆ ಟವಲ್ ಹಾಕಿದರೆ ಒಳಿತು.
ದೇಶದಾದ್ಯಂತ ಸಾವಿರ ಥಿಯೇಟರ್ ಗಳಲ್ಲಿ 'ದಿ ವಿಲನ್'ನ ಬಿಡುಗಡೆ ಮಾಡಲು ನಿರ್ದೇಶಕ ಪ್ರೇಮ್ ಓಡಾಡುತ್ತಿದ್ದಾರೆ. ಈಗಾಗಲೇ 'ದಿ ವಿಲನ್' ಚಿತ್ರದ ವಿತರಣೆ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.
ತನ್ವಿ ಪ್ರೊಡಕ್ಷನ್ಸ್ ಮೂಲಕ ಸಿ.ಆರ್.ಮನೋಹರ್ ನಿರ್ಮಾಣ ಮಾಡಿರುವ 'ದಿ ವಿಲನ್' ಚಿತ್ರದಲ್ಲಿ ಸುದೀಪ್, ಶಿವಣ್ಣ, ಮಿಥುನ್ ಚಕ್ರವರ್ತಿ, ಆಮಿ ಜಾಕ್ಸನ್, ಶ್ರೀಕಾಂತ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ.
ಬಹು ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಚಿತ್ರಕ್ಕೆ ಓಪನ್ನಿಂಗ್ ಹೇಗೆ ಸಿಗುತ್ತೆ ಅನ್ನೋದೇ ಸದ್ಯದ ಕುತೂಹಲ.


Click it and Unblock the Notifications











