twitter
    For Quick Alerts
    ALLOW NOTIFICATIONS  
    For Daily Alerts

    ರಿಲೀಸ್ ಗೂ ಮುಂಚೆಯೇ ಸೌತ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ 'ದಿ ವಿಲನ್'

    By Bharath Kumar
    |

    Recommended Video

    ರಿಲೀಸ್ ಗೂ ಮುನ್ನ ಸೌತ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ 'ದಿ ವಿಲನ್' | Filmibeat Kannada

    ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ಚಿತ್ರಗಳಲ್ಲಿ ಕನ್ನಡದ 'ದಿ ವಿಲನ್' ಸಿನಿಮಾ ಮೊದಲ ಸಾಲಿನಲ್ಲಿ ನಿಂತಿದೆ. ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ಪಾಲಿಗೆ ಹೊಸ ದಾಖಲೆ ಸೃಷ್ಠಿಸುವತ್ತಾ ಸಾಗಿದೆ.

    ಪ್ರತಿಯೊಂದು ಹಂತದಲ್ಲೂ ಸದ್ದು ಮಾಡುತ್ತಿರುವ 'ದಿ ವಿಲನ್' ಮಾರುಕಟ್ಟೆಯಲ್ಲೂ ಒಳ್ಳೆ ವ್ಯವಹಾರ ಮಾಡುತ್ತಿದೆ. ಬಹುಭಾಷೆಗಳಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಬಿಡುಗಡೆಗೆ ಮುಂಚೆಯೇ ಭಾರಿ ಬೇಡಿಕೆ ಇದೆ.

    ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!

    ಇದಕ್ಕೆ ಸಾಕ್ಷಿ ಎಂಬಂತೆ ಈಗ 'ದಿ ವಿಲನ್' ಚಿತ್ರದ ಆಡಿಯೋ ರೈಟ್ ಸೇಲ್ ಆಗಿದೆ. ಹೌದು, ದಾಖಲೆ ಬೆಲೆಗೆ ಪ್ರೇಮ್ ಸಿನಿಮಾದ ಹಾಡುಗಳು ಮಾರಾಟವಾಗಿದ್ದು, ಇದು ಸೌತ್ ಇಂಡಸ್ಟ್ರಿಯಲ್ಲೇ ಅತಿ ಹೆಚ್ಚು ಮೊತ್ತವೆನ್ನಲಾಗಿದೆ. ಹಾಗಿದ್ರೆ, ಎಷ್ಟು ಹಣಕ್ಕೆ ಸೇಲ್ ಆಗಿದೆ.? ಮುಂದೆ ಓದಿ....

    ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಸೇಲ್

    ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಸೇಲ್

    ಮೂಲಗಳ ಪ್ರಕಾರ ಪ್ರೇಮ್ ನಿರ್ದೇಶನ ಮಾಡಿರುವ 'ದಿ ವಿಲನ್' ಸಿನಿಮಾದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಆನಂದ್ ಆಡಿಯೋ ಕಂಪನಿಯವರು ಅತಿ ಹೆಚ್ಚು ಹಣ ನೀಡಿ ಆಡಿಯೋ ಹಕ್ಕು ಖರೀದಿಸಿದ್ದಾರಂತೆ. ಈ ವಿಷ್ಯವನ್ನ ಸ್ವತಃ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.

    'ದಿ ವಿಲನ್' ಸಿನಿಮಾದ ಬಿಡುಗಡೆ ಸುದ್ದಿ ಬಂದೇ ಬಿಟ್ಟಿತು!'ದಿ ವಿಲನ್' ಸಿನಿಮಾದ ಬಿಡುಗಡೆ ಸುದ್ದಿ ಬಂದೇ ಬಿಟ್ಟಿತು!

    1 ಕೋಟಿಗೂ ಅಧಿಕ ಮೊತ್ತ.!

    1 ಕೋಟಿಗೂ ಅಧಿಕ ಮೊತ್ತ.!

    ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ 1.8 ಕೋಟಿ ಕೊಟ್ಟು 'ದಿ ವಿಲನ್' ಆಡಿಯೋ ರೈಟ್ಸ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದು ದಕ್ಷಿಣ ಭಾರತದಲ್ಲೇ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಸಿನಿಮಾ ಎಂಬ ಖ್ಯಾತಿಗೆ ವಿಲನ್ ಪಾತ್ರವಾಗಿದೆಯಂತೆ.

    'ದಿ ವಿಲನ್' ಸಿನಿಮಾದಲ್ಲಿ ಇರಲಿದೆ ಈ ಮೂವರ ತರಲೆ'ದಿ ವಿಲನ್' ಸಿನಿಮಾದಲ್ಲಿ ಇರಲಿದೆ ಈ ಮೂವರ ತರಲೆ

    ಅರ್ಜುನ್ ಜನ್ಯ ಸಂಗೀತ

    ಅರ್ಜುನ್ ಜನ್ಯ ಸಂಗೀತ

    ಅಂದ್ಹಾಗೆ, 'ದಿ ವಿಲನ್' ಸಿನಿಮಾಗೆ ಮ್ಯುಸಿಕ್ ಕಂಪೋಸ್ ಮಾಡುತ್ತಿರುವುದು ಅರ್ಜುನ್ ಜನ್ಯ. ಸದ್ಯ, 'ದಿ ವಿಲನ್' ಮೋಷನ್ ಪೋಸ್ಟರ್ ನಲ್ಲಿ ಜನ್ಯ ಮ್ಯೂಸಿಕ್ ನೋಡಿ ಪ್ರೇಕ್ಷಕರು ಫುಲ್ ಥ್ರಿಲ್ ಆಗಿದ್ದಾರೆ.

    'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು

    6 ವರ್ಷದ ನಂತರ ಪ್ರೇಮ್ ನಿರ್ದೇಶನ

    6 ವರ್ಷದ ನಂತರ ಪ್ರೇಮ್ ನಿರ್ದೇಶನ

    ಶಿವರಾಜ್ ಕುಮಾರ್ ಅಭಿನಯಿಸಿದ್ದ 100ನೇ ಸಿನಿಮಾ 'ಜೋಗಯ್ಯ' ನಂತರ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 6 ವರ್ಷಗಳ ಅಂತರ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ವಿಲನ್ ಇದೇ ವರ್ಷ ತೆರೆಗೆ ಬರುವ ತಯಾರಿಯಲ್ಲಿದೆ.

    English summary
    Shivarajakumar-Sudeep starrer 'The Villain' audio rights has been sold for a whopping 1.08 crores. Anand Audio has bagged the audio rights of the film and has paid 1.08 crores for the audio rights, which is said to be the highest in Kannada film industry.
    Thursday, February 22, 2018, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X