twitter
    For Quick Alerts
    ALLOW NOTIFICATIONS  
    For Daily Alerts

    'ದಿ ವಿಲನ್' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ರೆ ಏನೆಲ್ಲಾ ಆಗಬಹುದು.?

    By Bharath Kumar
    |

    Recommended Video

    TheVillain : ದಿ ವಿಲನ್‌ಗೆ ಯಾವ್ ಸರ್ಟಿಫಿಕೇಟ್ ಸಿಕ್ರೆ ಏನ್ ಲಾಭ..? | Filmibeat Kannada

    ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಈಗ ಸೆನ್ಸಾರ್ ಸರ್ಟಿಫಿಕೇಟ್ ವಿಚಾರಕ್ಕೆ ಸುದ್ದಿಯಲ್ಲಿದೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ದಿ ವಿಲನ್' ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡಿದೆ ಎಂಬ ಮಾತಿದೆ.

    ಇದನ್ನ ಒಪ್ಪದ ನಿರ್ದೇಶಕ ಪ್ರೇಮ್ ರಿವೈಸಿಂಗ್ ಕಮಿಟಿ ಎದುರು ಮತ್ತೆ ದಿ ವಿಲನ್ ಚಿತ್ರವನ್ನ ಇಟ್ಟಿದ್ದು, ಯು/ಎ ಸರ್ಟಿಫಿಕೇಟ್ ಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ವಿಲನ್ ಚಿತ್ರಕ್ಕೆ ಯಾವ ಪ್ರಮಾಣಪತ್ರ ಸಿಗಲಿದೆ ಎಂಬುದು ಇನ್ನು ಗೌಪ್ಯವಾಗಿದೆ.

    ಪ್ರೇಮ್ ಗೆ ಬೇಕಿತ್ತು U ಅಥವಾ U/A, ಆದ್ರೆ ಸೆನ್ಸಾರ್ ನೀಡುತ್ತಿದೆ A ಪ್ರೇಮ್ ಗೆ ಬೇಕಿತ್ತು U ಅಥವಾ U/A, ಆದ್ರೆ ಸೆನ್ಸಾರ್ ನೀಡುತ್ತಿದೆ A

    ಈ ಮಧ್ಯೆ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಗೋದು ಬಹುತೇಕ ಖಚಿತವೆನ್ನಲಾಗಿದೆ. ಆದ್ರೆ, ಪ್ರೇಮ್ ಪ್ರಕಾರ ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡುವುದು ಸರಿಯಲ್ಲ. ಇದರ ಮಧ್ಯೆ ವಿಲನ್ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದ್ರೆ, ಕೆಲವು ಪರಿಣಾಮಗಳು ಚಿತ್ರದ ಮೇಲೆ ಆಗುತ್ತೆ ಎಂಬ ಆತಂಕ ಚಿತ್ರತಂಡವನ್ನ ಕಾಡುತ್ತಿದೆ. ಹಾಗಿದ್ರೆ, 'ದಿ ವಿಲನ್' ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ರೆ ಏನೆಲ್ಲಾ ಆಗಬಹುದು.? ಮುಂದೆ ಓದಿ.....

    'ಎ' ಸರ್ಟಿಫಿಕೇಟ್ ನೀಡಲು ಕಾರಣವೇನು.?

    'ಎ' ಸರ್ಟಿಫಿಕೇಟ್ ನೀಡಲು ಕಾರಣವೇನು.?

    ದಿ ವಿಲನ್.... ಇಬ್ಬರು ಸೂಪರ್ ಸ್ಟಾರ್ ಗಳು ಅಭಿನಯದ ಪಕ್ಕಾ ಕಮರ್ಷಿಯಲ್ ಸಿನಿಮಾ. ಹೀಗಿರುವಾಗ, ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಇದಕ್ಕೆ ಕಾರಣ ಚಿತ್ರದಲ್ಲಿನ ಅತಿಯಾದ ಆಕ್ಷನ್ ಮತ್ತು ನಟಿ ಆಮಿ ಜಾಕ್ಸನ್ ಎನ್ನಲಾಗಿದೆ. ಶಿವಣ್ಣ ಮತ್ತು ಸುದೀಪ್ ಇಬ್ಬರು ಗ್ಯಾಂಗ್ ಸ್ಟರ್ ಗಳಾಗಿದ್ದು, ಸಾಹಸಮಯ ದೃಶ್ಯಗಳು ಹೆಚ್ಚಿವೆಯಂತೆ. ಮತ್ತು ಆಮಿ ಜಾಕ್ಸನ್ ಕೆಲವು ದೃಶ್ಯಗಳಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ಆದ್ದರಿಂದ ಎ ಪ್ರಮಾಣಪತ್ರ ನೀಡಲು ಸೆನ್ಸಾರ್ ಅಧಿಕಾರಿಗಳು ಮುಂದಾಗಿದ್ದಾರಂತೆ.

    'ದಿ ವಿಲನ್' ಚಿತ್ರದ ಲೇಟೆಸ್ಟ್ ಅಪ್ಡೇಟ್ ನೀಡಿದ ಪ್ರೇಮ್'ದಿ ವಿಲನ್' ಚಿತ್ರದ ಲೇಟೆಸ್ಟ್ ಅಪ್ಡೇಟ್ ನೀಡಿದ ಪ್ರೇಮ್

    ವೀಕ್ಷಕರ ಕೊರತೆ ಆಗಬಹುದು

    ವೀಕ್ಷಕರ ಕೊರತೆ ಆಗಬಹುದು

    ಪ್ರೇಮ್ ಲೆಕ್ಕಾಚಾರದಲ್ಲಿ 'ದಿ ವಿಲನ್' ಚಿತ್ರವನ್ನ ಎಲ್ಲ ವರ್ಗದ ಪ್ರೇಕ್ಷಕರು ನೋಡಬಹುದಾದ ಸಿನಿಮಾ. ಒಂದು ವೇಳೆ ಎ ಪ್ರಮಾಣ ಪತ್ರ ನೀಡಿದ್ರೆ, ಅದು ಕೇವಲ ಒಂದು ವರ್ಗದ ಆಡಿಯೆನ್ಸ್ ಗೆ ಸೀಮಿತವಾಗಿಬಿಡುತ್ತೆ. ಇನ್ನು ಫ್ಯಾಮಿಲಿ ವೀಕ್ಷಕರು ಕೂಡ ಥಿಯೇಟರ್ ಗೆ ಬರುವ ಮನಸ್ಸು ಮಾಡಲ್ಲ ಎನ್ನುವುದು ಆತಂಕ.

    ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.?ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.?

    ಬಾಕ್ಸ್ ಆಫೀಸ್ ನಲ್ಲಿ ಪರಿಣಾಮ

    ಬಾಕ್ಸ್ ಆಫೀಸ್ ನಲ್ಲಿ ಪರಿಣಾಮ

    'ಎ' ಪ್ರಮಾಣಪತ್ರ ನೀಡುವುದರಿಂದ ಸಹಜವಾಗಿ ವೀಕ್ಷಕರ ಕೊರತೆ ಎದುರಿಸುವ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಸ್ವಲ್ಪ ಹಿನ್ನಡೆಯಾಗಬಹುದು. ಅಂದ್ರೆ, ಇಬ್ಬರು ಸೂಪರ್ ಸ್ಟಾರ್ ನಟರು ಅಭಿನಯದ ಚಿತ್ರದಿಂದ ದೊಡ್ಡ ಗಳಿಕೆಯನ್ನ ಅಂದಾಜು ಮಾಡಲಾಗಿರುತ್ತೆ. ಇಬ್ಬರ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಲು ಬರ್ತಾರೆ. ಆದ್ರೆ, ಎ ಸರ್ಟಿಫಿಕೇಟ್ ಬಂದಾಗ ಸ್ವಲ್ಪ ಜನ ಬರುವುದಿಲ್ಲ. ಹೀಗಾಗಿ, ನಿರೀಕ್ಷೆಯ ಮಟ್ಟದ ತಲುಪುವಲ್ಲಿ ಆರಂಭಿಕ ಹಿನ್ನಡೆಯಾಗಬಹುದು ಎಂಬ ಭಯ.

    ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್'ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್'

    'ಜೋಗಯ್ಯ' ವೇಳೆಯೂ ಅದೇ ಆಗಿತ್ತು.!

    'ಜೋಗಯ್ಯ' ವೇಳೆಯೂ ಅದೇ ಆಗಿತ್ತು.!

    ಅಂದ್ಹಾಗೆ, ಶಿವರಾಜ್ ಕುಮಾರ್ ನಟನೆ ಹಾಗೂ ಪ್ರೇಮ್ ನಿರ್ದೇಶನ ಮಾಡಿದ್ದ ಜೋಗಯ್ಯ ಚಿತ್ರಕ್ಕೂ ಮೊದಲು ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿತ್ತು. ಕೆಲವು ದೃಶ್ಯಗಳನ್ನ ಮ್ಯೂಟ್ ಮಾಡಿ, ಮತ್ತೆ ಕೆಲವನ್ನ ಕಟ್ ಮಾಡಿದ್ರೆ ಯು/ಎ ಪ್ರಮಾಣ ಪತ್ರ ನೀಡುತ್ತೇವೆ ಎಂದು ಸನ್ಸಾರ್ ತಿಳಿಸಿತ್ತು. ಆಗ ಫ್ಯಾಮಿಲಿ ಆಡಿಯೆನ್ಸ್ ಸಂಖ್ಯೆ ಕುಸಿಯಬಾರದು ಎಂಬ ಕಾರಣಕ್ಕೆ ಪ್ರೇಮ್ ಸೆನ್ಸಾರ್ ಸೂಚನೆಯನ್ನ ಪರಿಗಣಿಸಿದರು. ನಂತರ ಜೋಗಯ್ಯ ಚಿತ್ರಕ್ಕೆ ಯು/ಎ ಸಿಕ್ಕಿತ್ತು. ಈಗ ವಿಲನ್ ಗೂ ಅದೇ ರೀತಿ ಆದ್ರೂ ಅಚ್ಚರಿಯಿಲ್ಲ.

    'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ

    ಸುದೀಪ್ ಚಿತ್ರಕ್ಕೆ 'ಎ' ಸರ್ಟಿಫಿಕೇಟ್

    ಸುದೀಪ್ ಚಿತ್ರಕ್ಕೆ 'ಎ' ಸರ್ಟಿಫಿಕೇಟ್

    ಸುದೀಪ್ ಅಭಿನಯದ ಇತ್ತೀಚಿನ ಯಾವ ಚಿತ್ರಗಳಿಗೂ ಎ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ದಾಖಲೆಗಳ ಪ್ರಕಾರ ಸುದೀಪ್ ಅಭಿನಯಿಸಿದ್ದ ಗೂಳಿ ಚಿತ್ರಕ್ಕೆ ಕೊನೆಯದಾಗಿ ಎ ಪ್ರಮಾಣಪತ್ರ ನೀಡಲಾಗಿತ್ತು. ಆ ಚಿತ್ರದ ನಂತರ ಈಗ ವಿಲನ್ ಗೆ ಎ ಸರ್ಟಿಫಿಕೇಟ್ ಸೀಗೋ ಸಾಧ್ಯತೆ ಇದೆ.

    ಗೌರಿ ಗಣೇಶ್ ಹಬ್ಬಕ್ಕೆ ರಿಲೀಸ್.?

    ಗೌರಿ ಗಣೇಶ್ ಹಬ್ಬಕ್ಕೆ ರಿಲೀಸ್.?

    ಅದೇನೇ ಆಗಲಿ, ಗೌರಿ ಗಣೇಶ್ ಹಬ್ಬದ ಪ್ರಯುಕ್ತ 'ದಿ ವಿಲನ್' ಚಿತ್ರವನ್ನ ತೆರೆಗೆ ತರಬೇಕು ಎನ್ನುವುದು ಪ್ರೇಮ್ ಅವರ ಗುರಿ. ಅದಕ್ಕೆ ಎಲ್ಲ ಸಿದ್ಧತೆಗಳು ಆಗಿವೆ. ಸೆನ್ಸಾರ್ ಪಕ್ಕಾ ಆಗ್ಮೇಲೆ ರಿಲೀಸ್ ದಿನಾಂಕ ಘೋಷಣೆ ಮಾಡ್ತಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದೆ. ಸಿ ಆರ್ ಮನೋಹರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

    English summary
    Recently, the Regional Board of Film Certification saw the 'The Villain' film and has given an 'A' certificate. The RBFC is ready to given an 'U' certificate, if Prem deletes some violent action shots, but Prem is not ready to do and has decided to go to the Revising Committee soon.
    Monday, September 3, 2018, 13:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X