ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.!
Recommended Video

ಕಿಚ್ಚ ಸುದೀಪ್ ಮತ್ತು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ 'ದಿ ವಿಲನ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಮೊದಲ ದಿನ 20 ಕೋಟಿ ಗಳಿಸಿದ್ದ ವಿಲನ್ ಮೊದಲ ನಾಲ್ಕು ದಿನಕ್ಕೆ ದಾಖಲೆಯ ಗಳಿಕೆ ಕಂಡಿದೆ ಎನ್ನಲಾಗಿದೆ.
ಸದ್ಯ ವಿಲನ್ ಗಳಿಕೆ ನೋಡಿದ್ರೆ, ಖಂಡಿತಾ ಇದು ನೂರು ಕೋಟಿ ಕ್ಲಬ್ ಗೆ ಸೇರೋದು ಖಚಿತ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಬಿಡುಗಡೆಯಾದ ಮೇಲೆ ಸಿನಿಮಾ ಕಲೆಕ್ಷನ್ ತುಂಬಾ ದೊಡ್ಡ ಮಟ್ಟದ ಕಡೆ ಸಾಗುತ್ತಿದ್ದರೇ, ನೇರವಾದ ಕಲೆಕ್ಷನ್ ಬಿಟ್ಟು ಇತರೆ ಕಲೆಕ್ಷನ್ ನಲ್ಲೂ ಕೂಡ ವಿಲನ್ ರೆಕಾರ್ಡ್ ಮಾಡಿದೆ.
ಟಿವಿ ಸ್ಯಾಟ್ ಲೈಟ್ ಹಕ್ಕು, ಹಿಂದಿ ಡಬ್ಬಿಂಗ್ ಹಕ್ಕು, ಆಡಿಯೋ ಹಕ್ಕು ಹೀಗೆ ಇದರಿಂದಲೇ ಅತಿ ಹೆಚ್ಚು ಹಣ ಗಳಿಸಿದ್ದಾರೆ. ಇದೆಲ್ಲವನ್ನ ಸ್ವತಃ ನಿರ್ಮಾಪಕರೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಬಾಲಿವುಡ್ ನಲ್ಲಿ ವಿಲನ್ ಗೆ ಎಷ್ಟು ಬೇಡಿಕೆ ಇದೆ. ಮುಂದೆ ಓದಿ......

'ವಿಲನ್' ಸ್ಯಾಟ್ ಲೈಟ್ ಹಕ್ಕು.?
ಇಬ್ಬರು ಸೂಪರ್ ಸ್ಟಾರ್ ಗಳು ಅಭಿನಯಿಸಿದ್ದ ಸಿನಿಮಾದ ಮೇಲೆ ಮೊದಲೇ ನಿರೀಕ್ಷೆ ಹೆಚ್ಚಿತ್ತು. ಟಿವಿ ಹಕ್ಕು ಕೂಡ ದೊಡ್ಡ ಬಜೆಟ್ ಗೆ ಸೇಲ್ ಆಗುತ್ತೆ ಎಂಬ ಭರವಸೆ ಇತ್ತು. ಅದರಂತೆ ದಿ ವಿಲನ್ ಚಿತ್ರದ ಸ್ಯಾಟ್ ಲೈಟ್ ರೈಟ್ಸ್ 6.5 ಕೋಟಿಗೆ ಸೇಲ್ ಆಗಿದೆ. ಇದುವರೆಗೂ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವ ಸಿನಿಮಾ ಇದಾಗಿದೆ. ತುಂಬಾ ಬೇಗ ಟಿವಿ ಹಕ್ಕು ಮಾರಾಟ ಮಾಡಿದ್ದರಿಂದ ಇಷ್ಟು ಬೆಲೆ ಸಿಕ್ತು, ಸ್ವಲ್ಪ ಲೇಟ್ ಆಗಿ ಮಾಡಿದ್ರೆ, ಇನ್ನು ದೊಡ್ಡ ಬೆಲೆ ಅಂದ್ರೆ, 9 ಕೋಟಿವರೆಗೂ ಸಿಕ್ತಿತ್ತು ಎನ್ನುತ್ತಾರೆ ನಿರ್ಮಾಪಕ ಸಿ ಆರ್ ಮನೋಹರ್.

ಹಿಂದಿ ಡಬ್ಬಿಂಗ್ ಹಕ್ಕು ಎಷ್ಟು.?
ದಿ ವಿಲನ್ ಸಿನಿಮಾ ಹಿಂದಿಗೆ ಡಬ್ ಆಗಲಿದೆ. ಈ ಹಿಂದೆಯೇ ಹಿಂದಿ ಡಬ್ಬಿಂಗ್ ಹಕ್ಕಿನ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಸದ್ಯ ನಿರ್ಮಾಪಕರು ಹೇಳುವ ಪ್ರಕಾರ ಇನ್ನು ವಿಲನ್ ಡಬ್ಬಿಂಗ್ ಹಕ್ಕು ಮಾರಾಟವಾಗಿಲ್ಲ. ಆದ್ರೆ, 12 ಕೋಟಿಗೆ ಆಫರ್ ಇದೆಯಂತೆ. ಮಾತುಕತೆ ನಡೆಯುತ್ತಿದೆ ಆದಷ್ಟೂ ಬೇಗ ಡೀಲ್ ಆಗುತ್ತೆ ಎಂದು ಸಂತಸ ಹಂಚಿಕೊಂಡಿದ್ದಾರೆ.

3 ಕೋಟಿಗೆ ಸೇಲ್ ಆಗಿತ್ತು
ಈ ಹಿಂದೆ ಸುದ್ದಿಯಾದಂತೆ ದಿ ವಿಲನ್ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು 3 ಕೋಟಿಗೆ ಸೇಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಸಿ.ಆರ್ ಮನೋಹರ್ ಅದು ಸದ್ಯಕ್ಕೆ ಕ್ಯಾನ್ಸಲ್ ಆಗಿದೆ. ನಮಗೆ ಕೊಡಲು ಇಷ್ಟವಿಲ್ಲ, ಕೋರ್ಟ್ ನಲ್ಲಿ ಈ ಪ್ರಕರಣ ಇದೆ. ತೀರ್ಪು ನಮ್ಮ ಪರವಾಗಿಯೇ ಬರಲಿದೆ. ಹಿಂದಿ ಡಬ್ಬಿಂಗ್ ಹಕ್ಕನ್ನ ನಾವು ಪ್ರತಿಷ್ಠೆಯಾಗಿ ಪರಿಗಣಿಸಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಆಡಿಯೋ ಹಕ್ಕು.?
ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಭರ್ಜರಿ ಸೌಂಡ್ ಮಾಡಿತ್ತು. 'ದಿ ವಿಲನ್' ಸಿನಿಮಾದ ಆಡಿಯೋ ಹಕ್ಕು 1 ಕೋಟಿಗೆ ಸೇಲ್ ಆಗಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಡಿಜಿಟಲ್ ಕಲೆಕ್ಷನ್ ಬಾಕಿ ಇದೆ
ಸದ್ಯ ವಿಲನ್ ಸಿನಿಮಾದಿಂದ ನಿರ್ಮಾಪಕರಿಗೆ ಸುಮಾರು 30 ಕೋಟಿ ಷೇರು ಬಂದಿದೆ ಅಂತೆ. ವಿತರಕರು ಹೇಳುವ ಪ್ರಕಾರ, ನಾವು ನಿರ್ಮಾಪಕರಿಗೆ ಕೊಟ್ಟ ಹಣಕ್ಕಿಂತ ಹೆಚ್ಚು ಬಂದಿದೆ. ಎಲ್ಲರೂ ಲಾಭದಲ್ಲಿ ಇದ್ದೇವೆ ಎನ್ನುತ್ತಾರೆ. ಆದ್ರೆ, ನಿಖರವಾದ ಅಂಕಿ-ಅಂಶಗಳು ಬಹಿರಂಗವಾಗಿಲ್ಲ.


Click it and Unblock the Notifications











