'ದಿ ವಿಲನ್' ಮೂರನೇ ಹಾಡಿಗೂ ಮುಂಚೆ ಬಂತು ಲಿರಿಕ್ಸ್
Recommended Video

ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬರಲಿರುವ 'ದಿ ವಿಲನ್' ಸಿನಿಮಾ ಹಾಡುಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಈಗಾಗಲೇ ವಿಲನ್ ಗಳ ಎರಡು ಸಾಂಗ್ ರಿಲೀಸ್ ಆಗಿದ್ದು, ಸಖತ್ ಹವಾ ಹುಟ್ಟುಹಾಕಿದೆ.
ಈಗ 'ದಿ ವಿಲನ್' ಚಿತ್ರದ ಮೂರನೇ ಹಾಡು ಯಾವಾಗ ಎಂಬುದನ್ನ ನಿರ್ದೇಶಕ ಪ್ರೇಮ್ ಹೇಳಿದ್ದರು. ಆಗಸ್ಟ್ 4 ರಂದು ದಿ ವಿಲನ್ ಚಿತ್ರದ ಮೂರನೇ ಹಾಡು ಬಿಡುಗಡೆಯಾಗುತ್ತಿದೆ.

ಈ ಹಾಡು ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ಆ ಹಾಡಿನ ಸಾಹಿತ್ಯ ಬಹಿರಂಗವಾಗಿದೆ. ಹೌದು, ಸ್ವತಃ ನಿರ್ದೇಶಕ ಪ್ರೇಮ್ ಅವರೇ ಮೂರನೆ ಹಾಡಿನ ಲಿರಿಕ್ಸ್ ಬಿಟ್ಟುಕೊಟ್ಟಿದ್ದಾರೆ.
''ಅವ್ವಂಗೆ ಕೇಳು ಇಲ್ಲ, ಅಪ್ಪಂಗು ಹೇಳು ಇಲ್ಲ...ಲವ್ ಆಗೋಯ್ತೇ ನಿನ್ ಮೇಲೆ'' ಎಂದು ಹಾಡು ಆರಂಭವಾಗಲಿದೆ. ಈ ಸಾಹಿತ್ಯವನ್ನ ಕೇಳುತ್ತಿದ್ದರೇ ಮೂರನೇ ಹಾಡು ರೊಮ್ಯಾಂಟಿಕ ಸಾಂಗ್ ಎನ್ನುವುದು ಪಕ್ಕಾ ಆಗುತ್ತಿದೆ.
ವಿಶೇಷ ಅಂದ್ರೆ ಈ ಹಾಡನ್ನ ಕೂಡ ನಿರ್ದೇಶಕ ಪ್ರೇಮ್ ಅವರೇ ರಚಿಸಿದ್ದಾರೆ ಮತ್ತು ಅವರ ಧ್ವನಿಯಲ್ಲೇ ಮೂಡಿ ಬಂದಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೆ ಈ ಹಾಡು ಯೂಟ್ಯೂಬ್ ನಲ್ಲಿ ತೆರೆಕಾಣಲಿದೆ.
ಇನ್ನು ಕಂಪ್ಲೀಟ್ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವ ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನಲ್ಲಿ ನೆರವೇರಿಸಲು ಪ್ಲಾನ್ ಮಾಡಲಾಗುತ್ತಿದೆ. ವರಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ಬಿಡುಗಡೆ ಮಾಡಲು ಸಿದ್ಥತೆ ನಡೆಯುತ್ತಿದೆ.


Click it and Unblock the Notifications











