ರೆಡಿಯಾಗಿರಿ.. ಬರ್ತಿದೆ 'ದಿ ವಿಲನ್' ಚಿತ್ರದ ಮೂರನೇ ಹಾಡು
ಒಂದೊಂದೆ ಹಾಡುಗಳು ಮೂಲಕ 'ದಿ ವಿಲನ್' ಸಿನಿಮಾ ದಿನೇ ದಿನೇ ಕ್ರೇಜ್ ಜಾಸ್ತಿ ಮಾಡುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ ಮೂರನೇ ಹಾಡಿನ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ.
'ದಿ ವಿಲನ್' ಸಿನಿಮಾದ ಮೂರನೇ ಹಾಡಿನ ರಿಲೀಸ್ ಡೇಟ್ ಅನ್ನು ಪ್ರೇಮ್ ಈಗ ತಾನೇ ಹೇಳಿದ್ದಾರೆ. ಚಿತ್ರದ ಹೊಸ ಹಾಡು ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ. ಹಾಡಿನ ಪೋಸ್ಟರ್ ಜಲಕ್ ಅನ್ನು ಸದ್ಯ ರಿವೀಲ್ ಮಾಡಿದ್ದು, ಈ ಹಾಡಿನಲ್ಲಿ ಶಿವಣ್ಣ, ಸುದೀಪ್ ಹಾಗೂ ಆಮಿ ಜಾಕ್ಸನ್ ಮೂವರು ಇದ್ದಾರೆ. ವಿಶೇಷ ಅಂದರೆ, ಈ ಹಾಡಿನಲ್ಲಿ ರಾಜ್ ಕುಮಾರ್ ಅವರ ಗೆಟಪ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ಎರಡು ಹಾಡು ಕಂಪ್ಲೀಟ್ ಮಾಸ್ ಆಗಿದ್ದು, ಈ ಹಾಡು ಕೊಂಚ ಕ್ಲಾಸ್ ಆಗಲಿದೆಯಾ ಎನ್ನುವ ಕುತೂಹಲ ಇದೆ. ಅಂದಹಾಗೆ, ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮೊದಲ ಬಾರಿಗೆ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಮ್ಯೂಸಿಕ್ ನೀಡುತ್ತಿದ್ದಾರೆ.

ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 11 ರಂದು ನಡೆಯಲಿದೆ. ಜೊತೆಗೆ ಆಗಸ್ಟ್ 17 ರಂದು ದುಬೈನಲ್ಲಿ ಆಡಿಯೋ ರಿಲೀಸ್ ವಿಶೇಷ ಕಾರ್ಯಕ್ರಮವನ್ನು ಮಾಡುವ ಪ್ಲಾನ್ ಇದೆಯಂತೆ. ವಿಶೇಷ ಅಂದರೆ, ರಜನಿಕಾಂತ್ ಅವರ '2.0' ಚಿತ್ರದ ಆಡಿಯೋ ಬಿಡುಗಡೆಯಾದ ವೇದಿಕೆಯಲ್ಲಿಯೇ 'ದಿ ವಿಲನ್' ಹಾಡುಗಳು ಹೊರ ಬರಲಿದೆ.


Click it and Unblock the Notifications











