'ದಿ ವಿಲನ್' ಆಲ್ಬಂ ನಲ್ಲಿ ಸದ್ದು ಗದ್ದಲದ ಜೊತೆಗೆ ಮೆಲೋಡಿಗೂ ಜಾಗವಿದೆ
Recommended Video

'ದಿ ವಿಲನ್' ಸಿನಿಮಾದ ಮೂರು ಹಾಡುಗಳು ಸದ್ಯ ಬಿಡುಗಡೆಯಾಗಿವೆ. ಒಂದು ಕಡೆ ಸಿನಿಮಾದ ಹಾಡುಗಳು ಯೂ ಟ್ಯೂಬ್ ನಲ್ಲಿ ಅಬ್ಬರಿಸುತ್ತಿವೆ. ಇನ್ನೊಂದು ಕಡೆ ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸದ್ಯ ಬಿಡುಗಡೆಯಾಗಿರುವ ಮೂರೂ ಹಾಡುಗಳು ಮಾಸ್ ಆಗಿವೆ. ಮೊದಲೆರಡು ಹಾಡುಗಳಿಗಿಂತ ಮೂರನೇ ಹಾಡು ಡಿಫರೆಂಟ್ ಆಗಿದ್ದರು, ಕಂಪ್ಲೀಟ್ ಮೆಲೋಡಿಯಾಗಿ ಇಲ್ಲ. ಆದರೆ, ಈ ಚಿತ್ರದ ನಾಲ್ಕನೇ ಹಾಡು ಆ ಕೊರಗನ್ನು ನೀಗಿಸಲು ಬರುತ್ತಿದೆ.
ಚಿತ್ರದ ನಾಲ್ಕನೇ ಹಾಡಿನ ವಿವರವನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಮುಂದಿನ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.

ಅದಕ್ಕೂ ವಿಶೇಷ ಏನೆಂದರೆ, ಈ ಹಾಡು ಶ್ರೇಯಾ ಘೋಷಾಲ್ ಹಾಗೂ ಅರ್ಮನ್ ಮಲ್ಲಿಕ್ ಅವರ ಕಾಂಬಿನೇಶನ್ ನಲ್ಲಿ ಬರಲಿದೆ. ಇವರಿಬ್ಬರು ಹಾಡಿರುವ ಹಾಡು ಎಂದರೆ ಇದು ಪಕ್ಕಾ ಮೆಲೋಡಿ ಹಾಡು ಎಂದು ಉಹಿಸಿಬಿಡಬಹುದು.

ಅಂದಹಾಗೆ, ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದೆ. ಪ್ರೇಮ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆಯಾಗುತ್ತಿರುವ ನಾಲ್ಕನೇ ಹಾಡು ಶಿವಣ್ಣ ಅವರದ್ದ ಅಥವಾ ಸುದೀಪ್ ಅವರದ್ದ ಎಂಬ ಕುತೂಹಲ ಇದೆ.


Click it and Unblock the Notifications











