For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಆಲ್ಬಂ ನಲ್ಲಿ ಸದ್ದು ಗದ್ದಲದ ಜೊತೆಗೆ ಮೆಲೋಡಿಗೂ ಜಾಗವಿದೆ

  By Naveen
  |
  TheVillain : ದಿ ವಿಲನ್ ಸಿನಿಮಾದ ನಾಲ್ಕನೇ ಹಾಡು ಕೇಳೋಕೆ ರೆಡಿ ಆಗಿ..! | Filmibeat Kannada

  'ದಿ ವಿಲನ್' ಸಿನಿಮಾದ ಮೂರು ಹಾಡುಗಳು ಸದ್ಯ ಬಿಡುಗಡೆಯಾಗಿವೆ. ಒಂದು ಕಡೆ ಸಿನಿಮಾದ ಹಾಡುಗಳು ಯೂ ಟ್ಯೂಬ್ ನಲ್ಲಿ ಅಬ್ಬರಿಸುತ್ತಿವೆ. ಇನ್ನೊಂದು ಕಡೆ ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ಸದ್ಯ ಬಿಡುಗಡೆಯಾಗಿರುವ ಮೂರೂ ಹಾಡುಗಳು ಮಾಸ್ ಆಗಿವೆ. ಮೊದಲೆರಡು ಹಾಡುಗಳಿಗಿಂತ ಮೂರನೇ ಹಾಡು ಡಿಫರೆಂಟ್ ಆಗಿದ್ದರು, ಕಂಪ್ಲೀಟ್ ಮೆಲೋಡಿಯಾಗಿ ಇಲ್ಲ. ಆದರೆ, ಈ ಚಿತ್ರದ ನಾಲ್ಕನೇ ಹಾಡು ಆ ಕೊರಗನ್ನು ನೀಗಿಸಲು ಬರುತ್ತಿದೆ.

  '2.0' ಚಿತ್ರ ಸದ್ದು ಮಾಡಿದ್ದ ಜಾಗದಲ್ಲಿ 'ದಿ ವಿಲನ್' ಹಾಡುಗಳ ಅಬ್ಬರ '2.0' ಚಿತ್ರ ಸದ್ದು ಮಾಡಿದ್ದ ಜಾಗದಲ್ಲಿ 'ದಿ ವಿಲನ್' ಹಾಡುಗಳ ಅಬ್ಬರ

  ಚಿತ್ರದ ನಾಲ್ಕನೇ ಹಾಡಿನ ವಿವರವನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಮುಂದಿನ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.

  ಅದಕ್ಕೂ ವಿಶೇಷ ಏನೆಂದರೆ, ಈ ಹಾಡು ಶ್ರೇಯಾ ಘೋಷಾಲ್ ಹಾಗೂ ಅರ್ಮನ್ ಮಲ್ಲಿಕ್ ಅವರ ಕಾಂಬಿನೇಶನ್ ನಲ್ಲಿ ಬರಲಿದೆ. ಇವರಿಬ್ಬರು ಹಾಡಿರುವ ಹಾಡು ಎಂದರೆ ಇದು ಪಕ್ಕಾ ಮೆಲೋಡಿ ಹಾಡು ಎಂದು ಉಹಿಸಿಬಿಡಬಹುದು.

  ಅಂದಹಾಗೆ, ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದೆ. ಪ್ರೇಮ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆಯಾಗುತ್ತಿರುವ ನಾಲ್ಕನೇ ಹಾಡು ಶಿವಣ್ಣ ಅವರದ್ದ ಅಥವಾ ಸುದೀಪ್ ಅವರದ್ದ ಎಂಬ ಕುತೂಹಲ ಇದೆ.

  English summary
  Kannada actor Shivarajkumar and Sudeep's 'The Villain' movie 4th song will be releasing on 15th. Shreya Ghoshal and armaan malik sang this song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X