ಬಿಡುಗಡೆಯ ಹೊಸ್ತಿಲಲ್ಲಿ ಪ್ರೇಮ್ ಕಡೆಯಿಂದ ಬಂದ ಹೊಸ ವಿಷ್ಯಗಳು
Recommended Video

ಅಕ್ಟೋಬರ್ ತಿಂಗಳಿನಲ್ಲಿ ದಸರ ಹಬ್ಬ ಇದೆ. ಅದರ ಜೊತೆಗೆ, ಕನ್ನಡ ಚಿತ್ರರಂಗದಲ್ಲಿ ಮುಂದಿನ ತಿಂಗಳಿನಲ್ಲಿ 'ದಿ ವಿಲನ್' ಹಬ್ಬ ನಡೆಯಲಿದೆ. ಸಿನಿಮಾದ ರಿಲೀಸ್ ಡೇಟ್ ಈಗಾಗಲೇ ಫಿಕ್ಸ್ ಆಗಿದ್ದು, ಅಕ್ಟೋಬರ್ 18 ರಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಪ್ರೇಮ್ ಸಿನಿಮಾ ಅಂದರೆ ಅದರ ಕ್ರೇಜ್ ದೊಡ್ಡ ಮಟ್ಟದಲ್ಲಿ ಇರುತ್ತದೆ. ಅದರಲ್ಲಿಯೂ 'ದಿ ವಿಲನ್' ಚಿತ್ರದ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಶಿವರಾಜ್ ಕುಮಾರ್ ಹಾಗೂ ಮತ್ತೊಂದು ಕಡೆ ಸುದೀಪ್ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಅಂದಹಾಗೆ, ಈ ಚಿತ್ರದ ಒಂದಷ್ಟು ವಿಚಾರಗಳು ಈಗ ಹೊರ ಬಂದಿದೆ. ಬಿಡುಗಡೆಯ ಸನಿಹದಲ್ಲಿ ಇರುವ 'ದಿ ವಿಲನ್' ಸಿನಿಮಾದ ಹೊಸ ಹೊಸ ಸುದ್ದಿಗಳು ಮುಂದಿದೆ ಓದಿ..

ಅಕ್ಟೋಬರ್ 2 ರಿಂದ ಟಿಕೆಟ್ ಬುಕ್ಕಿಂಗ್
'ದಿ ವಿಲನ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಅಕ್ಟೋಬರ್ 2 ರಿಂದ ಶುರು ಆಗಲಿದೆ. ಸಿನಿಮಾ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿದ್ದು, 16 ದಿನಗಳ ಮುಂಚೆಯೇ ಬುಕ್ಕಿಂಗ್ ಶುರು ಆಗಲಿದೆ. ಫಸ್ಟ್ ಡೇ 'ದಿ ವಿಲನ್' ನೋಡುವ ಆಸೆ ಇದ್ದರೆ, ಆದಷ್ಟು ಬೇಗ ಟಿಕೆಟ್ ಬುಕ್ ಮಾಡಿ ಬಿಡಿ.

ಮತ್ತೊಂದು ಟೀಸರ್ ಬರುತ್ತೆ
'ದಿ ವಿಲನ್' ಎರಡು ಟೀಸರ್ ಗಳು ಈಗಾಗಲೇ ಬಂದಿದೆ. ಒಂದು ಟೀಸರ್ ನಲ್ಲಿ ಶಿವಣ್ಣ ಮತ್ತೊಂದು ಟೀಸರ್ ನಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಇವುಗಳ ಜೊತೆಗೆ ಮೂರನೇ ಟೀಸರ್ ಸಹ ರಿಲೀಸ್ ಮಾಡುವ ಪ್ಲಾನ್ ಪ್ರೇಮ್ ಅವರದ್ದಾಗಿದೆ. ಅಕ್ಟೋಬರ್ 1 ರಂದು ರಿಲೀಸಿಂಗ್ ಟೀಸರ್ ಹೊಸ ಬರಲಿದ್ದು, ಅದರಲ್ಲಿ ಇಬ್ಬರು ಸ್ಟಾರ್ ಗಳು ಇರಲಿದ್ದಾರೆ.

ಅತಿಥಿ ಪಾತ್ರಗಳಲ್ಲಿ ಇಶಾನ್, ಅಭಿಷೇಕ್
ಸಿನಿಮಾದ ಅತಿಥಿ ಪಾತ್ರಗಳಲ್ಲಿ ಕನ್ನಡದ ಯುವ ನಟರು ನಟಿಸಲಿದ್ದಾರೆ. ಸುದೀಪ್ ಅವರ ಒಂದು ಹಾಡಿನಲ್ಲಿ ನಟ ಇಶಾನ್ ಹಾಗೂ ಅಭಿಷೇಕ್ ನಟಿಸಿದ್ದಾರೆ. ಇಶಾನ್ ನಿರ್ಮಾಪಕ ಸಿ ಆರ್ ಮನೋಹರ್ ಅವರ ಸಹೋದರರಾಗಿದ್ದು, ಈಗಾಗಲೇ 'ರೋಗ್' ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ನಟಿ ರಕ್ಷಿತಾ ಅವರ ಸಹೋದರನಾಗಿದ್ದಾರೆ.

ಮೂರು ಮೈನ್ ಚಿತ್ರಮಂದಿರ
ಕೆಲವು ಸಿನಿಮಾಗಳಿಗೆ ಒಂದು ಗಾಂಧಿನಗರದ ಒಂದು ಚಿತ್ರಮಂದಿರ ಸಿಗುವುದು ಕಷ್ಟ ಆಗುತ್ತದೆ. ಆದರೆ, ಮೂರು ಮೈನ್ ಥಿಯೇಟರ್ ಗಳಲ್ಲಿ 'ದಿ ವಿಲನ್' ಸಿನಿಮಾ ರಿಲೀಸ್ ಆಗಲಿದೆ. ಸಂತೋಷ್, ಅದರ ಪಕ್ಕದ ನರ್ತಕಿ ಹಾಗೂ ಮತ್ತೊಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಚಿತ್ರದ ಕ್ರೇಜ್ ಅನ್ನು ಸಾಬೀತು ಮಾಡುತ್ತಿದೆ.

ಸಾವಿರ ಸ್ಕ್ರೀನ್ ಗಳಲ್ಲಿ ವಿಲನ್
ದೇಶ ವಿದೇಶದಲ್ಲಿಯೂ 'ದಿ ವಿಲನ್' ಸಿನಿಮಾ ಬಿಡುಗಡೆ ಆಗಲಿದೆ. ಸಾವಿರ ಥಿಯೇಟರ್ ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಧೈರ್ಯ ಹಾಗೂ ಸಾಹಸಕ್ಕೆ ಶೋ ಮ್ಯಾನ್ ಮುಂದಾಗಿದ್ದಾರೆ. ಈ ರೀತಿ ಬೇರೆ ಭಾಷೆಗಳ ದೊಡ್ಡ ಚಿತ್ರಗಳಿಗೆ 'ದಿ ವಿಲನ್' ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.


Click it and Unblock the Notifications











