For Quick Alerts
  ALLOW NOTIFICATIONS  
  For Daily Alerts

  ಶುರುವಾಯ್ತು 'ದಿ ವಿಲನ್' ಟಿಕೆಟ್ ಬುಕ್ಕಿಂಗ್ : ಒಂದು ಟಿಕೆಟ್ ರೇಟ್ ಎಷ್ಟು?

  |
  TheVillain : ದಿ ವಿಲನ್ ಫೈನಲ್ ಟಿಕೆಟ್ ಬೆಲೆ ಇಷ್ಟಿದೆ ನೋಡಿ..! | FILMIBEAT KANNADA

  ಇಂದಿನಿಂದ 'ದಿ ವಿಲನ್' ಸಿನಿಮಾದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಒಂದು ವಾರ ಮುಂಚಿತವಾಗಿ ಸಿನಿಮಾದ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಬುಕ್ ಮೈ ಶೋ ಗೆ ಇದೀಗ 'ದಿ ವಿಲನ್' ಆಗಮನವಾಗಿದೆ.

  'ದಿ ವಿಲನ್' ಈ ವರ್ಷದ ಬಹು ನಿರೀಕ್ಷಿತ ಚಿತ್ರ. ಈ ಚಿತ್ರ ಸೃಷ್ಟಿ ಮಾಡಿರುವ ಕ್ರೇಜ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಈ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದಾರೆ.

  ವಿಡಿಯೋ : 'ದಿ ವಿಲನ್' ಎಲ್ಲ ಹಾಡಿನ ಝಲಕ್ ನೋಡಿ

  ಪ್ರಾರಂಭದಲ್ಲಿ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಅಕ್ಟೋಬರ್ 2 ರಿಂದ ಶುರು ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಡುಗಡೆಯ ಒಂದು ವಾರ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಶುರು ಮಾಡಲು ನಿರ್ಧಾರ ಮಾಡಲಾಗಿತ್ತು. ಅದೇ ರೀತಿ ಇಂದಿನಿಂದ ಟಿಕೆಟ್ ಗಳು ಮಾರಾಟ ಆಗುತ್ತಿವೆ. ಮುಂದೆ ಓದಿ...

  ಇಂದಿನಿಂದ ಬುಕ್ಕಿಂಗ್

  ಇಂದಿನಿಂದ ಬುಕ್ಕಿಂಗ್

  ಅಕ್ಟೋಬರ್ 18 ರಂದು 'ದಿ ವಿಲನ್' ಸಿನಿಮಾ ಬಿಡುಗಡೆಯಾಗುತ್ತಿದೆ. ಇಂದಿನಿಂದ ಚಿತ್ರದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸದ್ಯಕ್ಕೆ ಬೆಂಗಳೂರಿನ ಆರೇಳು ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್ ನೀಡಲು ಪ್ರಾರಂಭ ಮಾಡಲಾಗಿದೆ.

  ಟಿಕೆಟ್ ಬೆಲೆ ಎಷ್ಟು?

  ಟಿಕೆಟ್ ಬೆಲೆ ಎಷ್ಟು?

  ಸಾಮಾನ್ಯವಾಗಿ ಈ ರೀತಿಯ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುವಾಗ ಟಿಕೆಟ್ ಬೆಲೆ ಎಷ್ಟು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. 'ದಿ ವಿಲನ್' ಟಿಕೆಟ್ ಗೆ ಕೂಡ ಸಿಕ್ಕಾಪಟ್ಟೆ ಟಿಮ್ಯಾಂಡ್ ಇದ್ದು, ಒಂದು ಟಿಕೆಟ್ ಬೆಲೆ 400 ರೂಪಾಯಿ, 300 ರೂಪಾಯಿ ಆಗಿದೆ.

  'ವಿಲನ್' ಗೆ ಟ್ವಿಸ್ಟ್: ಶರತ್ ಲೋಹಿತಾಶ್ವ ರಾವಣ, ಕಥೆ ಹೀಗಿರಬಹುದು.?

  ಸಂತೋಷ್ ಚಿತ್ರಮಂದಿರದಲ್ಲಿ ಇಲ್ಲ

  ಸಂತೋಷ್ ಚಿತ್ರಮಂದಿರದಲ್ಲಿ ಇಲ್ಲ

  'ದಿ ವಿಲನ್' ಗಾಂಧಿನಗರದ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಈ ಪೈಕಿ ಸಂತೋಷ್ ಚಿತ್ರಮಂದಿರದ ಕೂಡ ಒಂದಾಗಿತ್ತು. ಆದರೆ, ಈಗ ಸಂತೋಷ್ ಚಿತ್ರಮಂದಿರದಲ್ಲಿ 'ದಿ ಟೆರರಿಸ್ಟ್' ಸಿನಿಮಾ ರಿಲೀಸ್ ಆಗುತ್ತಿದೆ. ನರ್ತಕಿ ಥಿಯೇಟರ್ ನಲ್ಲಿ 'ದಿ ವಿಲನ್' ಬರೋದು ಪಕ್ಕಾ ಆಗಿದೆ.

  ಸಾವಿರ ಸ್ಕ್ರೀನ್ ಗಳಲ್ಲಿ ವಿಲನ್?

  ಸಾವಿರ ಸ್ಕ್ರೀನ್ ಗಳಲ್ಲಿ ವಿಲನ್?

  ಈ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು, ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮ್ ತಿಳಿಸಿದ್ದರು. ಆದರೆ, ಸದ್ಯಕ್ಕೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೂ, ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವುದು ಗ್ಯಾರೆಂಟಿ.

  'ಮಜಾ ಟಾಕೀಸ್' ನಲ್ಲಿ ಪ್ರೇಮ್

  ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ನಿರ್ದೇಶಕ ಪ್ರೇಮ್ ಹಾಗೂ ಅರ್ಜುನ್ ಜನ್ಯ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಹೋಗಿದ್ದು, ಆ ಸಂಚಿಕೆ ಈ ವಾರ ಪ್ರಸಾರ ಆಗುತ್ತಿದೆ. 'ಮಜಾ ಟಾಕೀಸ್' ನ ಕುರಿ ಪ್ರತಾಪ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

  English summary
  Actor Shivarajkumar and Sudeep starrer Kannada Movie 'The Villain' advance ticket booking started from today (october 11th). The movie will be releasing on september 27th 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X