twitter
    For Quick Alerts
    ALLOW NOTIFICATIONS  
    For Daily Alerts

    'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು

    |

    ಸಿನಿಮಾಗೆ ಸಂಭಾಷಣೆ ಬಹು ಮುಖ್ಯ. ಪಾತ್ರಗಳು ಹೇಳುವ ಮಾತುಗಳು ನೋಡುಗರನ್ನು ಕಟ್ಟಿ ಕುರಿಸುವ ಶಕ್ತಿ ಹೊಂದಿರುತ್ತದೆ. ಅದರಲ್ಲಿಯೂ ಸ್ಟಾರ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೆ ಹೆಜ್ಜೆ ಮಹತ್ವ ಇರುತ್ತದೆ.

    'ದಿ ವಿಲನ್' ಸಿನಿಮಾದಲ್ಲಿ ಕೂಡ ಸಖತ್ ಪಂಚಿಂಗ್ ಡೈಲಾಗ್ ಗಳು ಇದೆ. ಮಳವಳ್ಳಿ ಸಾಯಿಕೃಷ್ಣ ಬರವಣಿಗೆ ಮತ್ತೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಹಿಂದೆ 'ಜೋಗಿ' ಸಿನಿಮಾಗೆ ಒಳ್ಳೆ ಒಳ್ಳೆಯ ಸಾಲು ಬರೆದಿದ್ದ ಅವರು ಈಗಲೂ ಅದನ್ನು ಮುಂದುವರೆಸಿದ್ದಾರೆ.

    'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು! 'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    ಮಾಸ್ ಡೈಲಾಗ್ ಗಳು, ರಾಮಾಯಣ ಮಹಾಭಾರತ ಹಿನ್ನೆಲೆಯ ಸಂಭಾಷಣೆಗಳು, ತಾಯಿಯ ಬಗ್ಗೆ ಇರುವ ಮಾತುಗಳು ಹೀಗೆ ಸಿನಿಮಾದಲ್ಲಿ ಇರುವ ಅನೇಕ ಡೈಲಾಗ್ ಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಅಂತಹ ಕೆಲವು ಸಂಭಾಷಣೆಗಳು ಮುಂದಿವೆ ಓದಿ...

    ಶಿವರಾಜ್ ಕುಮಾರ್ ಸಂಭಾಷಣೆಗಳು

    ಶಿವರಾಜ್ ಕುಮಾರ್ ಸಂಭಾಷಣೆಗಳು

    ''ನಾನ್ ಸೈಲೆಂಟ್ ಆಗಿ ಇದ್ದರೆ ರಾಮ, ವೈಲೆಂಟ್ ಆದ್ನೋ ರಾವಣ''

    ''ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಆ ಭೇಟೆ ನಂದೇ'' -ಶಿವರಾಜ್ ಕುಮಾರ್ ಸಂಭಾಷಣೆ

    ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!

    ಸುದೀಪ್ ಸಂಭಾಷಣೆಗಳು

    ಸುದೀಪ್ ಸಂಭಾಷಣೆಗಳು

    ''ಆನೆ ಬಂತೊಂದ್ ಆನೆ.. ಯಾವ್ ಊರು ಆನೆ ಬಿಜಾಪುರದ್ ಆನೆ. ಇಲ್ಲಿಗೆ ಯಾಕೆ ಬಂತು. ರಾವಣನ ಕಥೆ ಹೇಳೋಕ್ಕೆ ಬಂತು.''

    ''ದೇಶಕ್ಕೆ ಒಬ್ಬರೆ ರಾಷ್ಟ್ರಪತಿ. ಅದೇ ರೀತಿ ಜಗತ್ತಿಗೆ ಒಬ್ಬನೇ ಅಧಿಪತಿ ಇರಬೇಕು ಅದು ನಾನಾಗಿರಬೇಕು''

    'ದಿ ವಿಲನ್' ಬಿಡುಗಡೆ: ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಪ್ರೇಮ್ ಆಕ್ರೋಶ'ದಿ ವಿಲನ್' ಬಿಡುಗಡೆ: ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಪ್ರೇಮ್ ಆಕ್ರೋಶ

    ರಾಮ - ರಾವಣ

    ರಾಮ - ರಾವಣ

    ''ರಾಮ ತಂದೆಗಾಗಿ ವನವಾಸಕ್ಕೆ ಹೋದ, ರಾವಣ ತಾಯಿಗಾಗಿ ಶಿವನಿಂದ ಆತ್ಮಲಿಂಗವನ್ನೇ ಪಡೆದ. ರಾಮ ತಂದೆಗೆ ತಕ್ಕ ಮಗ, ರಾವಣ ತಾಯಿಗೆ ತಕ್ಕ ಮಗ.''

    ತಾಯಿಯ ಬಗ್ಗೆಯ ಸಂಭಾಷಣೆ

    ತಾಯಿಯ ಬಗ್ಗೆಯ ಸಂಭಾಷಣೆ

    ''ತಾಯಿಗಿಂತ ಮಗ ಬೇಗ ಸತ್ತು ಹೋದರೆ, ಆಕೆಯ ಆಯಸ್ಸನ್ನು ತೆಗೆದುಕೊಂಡು ಹೋಗುತ್ತಾನೆ. ಆದರೆ, ತಾಯಿ ಮಗನಿಗಿಂತ ಬೇಗ ಸತ್ತು ಹೋದ್ರೆ ಆಯಸ್ಸು ಕೊಟ್ಟು ಹೋಗುತ್ತಾಳೆ.''

    English summary
    Actor Shivaraj kumar and Sudeep starrer 'The Villain' kannada movie best dialogues.
    Thursday, October 18, 2018, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X