ವಿವಾದದ ನಡುವೆಯೂ ಕಲೆಕ್ಷನ್ ನಲ್ಲಿ 'ದಿ ವಿಲನ್' ದಾಖಲೆ!

Recommended Video

Thevillain :ವಿವಾದದ ನಡುವೆಯೂ ಕಲೆಕ್ಷನ್ ನಲ್ಲಿ ದಾಖಲೆ! | FILMIBEAT KANNADA

ಪ್ರೇಮ್ ನಿರ್ದೇಶನದ, ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟನೆಯ 'ದಿ ವಿಲನ್' ಸಿನಿಮಾ ಈಗ ವಿವಾದ ಮೂಲಕ ಚರ್ಚೆಗೆ ಕಾರಣವಾಗಿದೆ. ಆದರೆ, ಇನ್ನೊಂದು ಕಡೆ ಸಿನಿಮಾದ ಕಲೆಕ್ಷನ್ ಕೂಡ ಅಚ್ಚರಿ ಪಡುವಂತೆ ಮಾಡಿದೆ.

ನಿನ್ನೆ ಅದ್ದೂರಿಯಾಗಿ 'ದಿ ವಿಲನ್' ಸಿನಿಮಾ ಬಿಡುಗಡೆಯಾಗಿತ್ತು. ರಾಜ್ಯದ 500ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ತೆರೆಗೆ ಬಂದಿತ್ತು. ಆದರೆ, ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬಂದವರ ಪೈಕಿ ಬಹುಪಾಲು ಜನರು ಅದನ್ನು ಇಷ್ಟ ಪಡಲಿಲ್ಲ.

'ದಿ ವಿಲನ್' ಸಿನಿಮಾಗೆ ಏನೇ ಪ್ರತಿಕ್ರಿಯೆ ಸಿಕ್ಕಿದ್ದರೂ, ವಿವಾದ ಶುರುವಾಗಿದ್ದರೂ, ಅಭಿಮಾನಿಗಳ ಅಸಮಾಧಾನ ಮೂಡಿದ್ದರೂ ಈ ಎಲ್ಲವೂಗಳ ಮಧ್ಯೆ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. ಮುಂದೆ ಓದಿ..

ಮೊದಲ ದಿನ 20 ಕೋಟಿ

ಮೊದಲ ದಿನ 20 ಕೋಟಿ

'ದಿ ವಿಲನ್' ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಹೌಸ್ ಫುಲ್ ಪ್ರದರ್ಶನದ ಪರಿಣಾಮ ಸಿನಿಮಾ ಮೊದಲ ದಿನವೇ 20 ಕೋಟಿ 50 ಲಕ್ಷ ಕಲೆಕ್ಷನ್ ಮಾಡಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಪ್ರೇಮ್ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಇದು ದಾಖಲೆ

ಕನ್ನಡದಲ್ಲಿ ಇದು ದಾಖಲೆ

ಕನ್ನಡದಲ್ಲಿ ಯಾವ ಸಿನಿಮಾ ಕೂಡ ಈ ಮಟ್ಟದ ಗಳಿಕೆಯನ್ನು ಒಂದೇ ದಿನದಲ್ಲಿ ಮಾಡಿಲ್ಲ. ಮೊದಲ ದಿನವೇ 20 ಕೋಟಿ 50 ಲಕ್ಷ ಕಲೆಕ್ಷನ್ ಮಾಡುವ ಮೂಲಕ 'ದಿ ವಿಲನ್' ಬಾಕ್ಸ್ ಆಫೀಸ್ ನಲ್ಲಿ ಮೇಲುಗೈ ಸಾಧಿಸಿದೆ. 'ರಾಜಕುಮಾರ', 'ಚಕ್ರವರ್ತಿ', 'ಹೆಬ್ಬುಲಿ' ಸಿನಿಮಾಗಳ ದಾಖಲೆಯನ್ನು 'ದಿ ವಿಲನ್' ಮುರಿದಿದೆ.

ಕಲೆಕ್ಷನ್ ಬಗ್ಗೆ ಜಗ್ಗೇಶ್ ಭವಿಷ್ಯ

ಕಲೆಕ್ಷನ್ ಬಗ್ಗೆ ಜಗ್ಗೇಶ್ ಭವಿಷ್ಯ

ಚಿತ್ರದ ಕಲೆಕ್ಷನ್ ಬಗ್ಗೆ ನಿನ್ನೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ''ದಿ ವಿಲನ್' ಅಬ್ಬರ ನೋಡಿ ಪರಭಾಷೆ ಚಿತ್ರಗಳು ಎದರಿದೆ. ಕನ್ನಡ ಚಿತ್ರವೊಂದರ ಸದ್ದು ಕೇಳಿ ಹೆಮ್ಮೆಯಾಯಿತು'' ಎಂದಿರುವ ಅವರು ಸಿನಿಮಾ ಒಂದು ವಾರಕ್ಕೆ 50 ಕೋಟಿ ಗಳಿಕೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಲೆಕ್ಷನ್ ಹೀಗೆ ಇರುತ್ತದೆಯೇ?

ಕಲೆಕ್ಷನ್ ಹೀಗೆ ಇರುತ್ತದೆಯೇ?

ಮೊದಲ ದಿನದ ನಂತರ 'ದಿ ವಿಲನ್' ಸಿನಿಮಾದ ಕಲೆಕ್ಷನ್ ಅದೇ ರೀತಿ ಇರುತ್ತದೆಯೇ ಎಂಬ ಅನುಮಾನ ಮೂಡಿದೆ. ಒಂದು ಕಡೆ ಸಿನಿಮಾ ತುಂಬ ಜನರಿಗೆ ಇಷ್ಟ ಆಗಿಲ್ಲ, ಮತ್ತೊಂದು ಕಡೆ ಸಿನಿಮಾದ ಸೃಷ್ಟಿ ಮಾಡಿರುವ ವಿವಾದದಿಂದ ಕಲೆಕ್ಷನ್ ಗೆ ಪೆಟ್ಟಾದರೂ ಆಗಬಹುದು.

More from Filmibeat

English summary
Actor Shiva Rajkumar and Sudeep's 'The Villain' kannada movie collected 20 crore on 1st day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X