ತವರೂರಲ್ಲಿ ಕಿಚ್ಚನ ಕ್ರೇಜ್ : ಶಿವಮೊಗ್ಗದ 3 ಚಿತ್ರಮಂದಿರಗಳಲ್ಲಿ 'ದಿ ವಿಲನ್'
Recommended Video

'ದಿ ವಿಲನ್' ಸಿನಿಮಾದ ಕ್ರೇಜ್ ಕರ್ನಾಟಕದ ತುಂಬ ತುಂಬಿಕೊಂಡಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಸಹ ಸಿನಿಮಾದ ಅಬ್ಬರ ಈಗಾಗಲೇ ಶುರುವಾಗಿದೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಹೇಳಿ ಕೇಳಿ ನಟ ಸುದೀಪ್ ಅವರ ತವರೂರು. ಹೀಗಿರುವಾಗ ಅಲ್ಲಿನ ಅಭಿಮಾನಿಗಳ ಸಂಭ್ರಮ ಇದೀಗ ಡಬ್ಬಲ್ ಆಗಿದೆ. ಇದರ ಪರಿಣಾಮ ನಗರದ ಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಲಕ್ಷ್ಮಿ ಚಿತ್ರಮಂದಿರ, ಮಂಜುನಾಥ ಚಿತ್ರಮಂದಿರ ಹಾಗೂ ಭರತ್ ಸಿನಿಮಾಸ್ ಈ ಮೂರು ಕಡೆ 'ದಿ ವಿಲನ್' ಪ್ರದರ್ಶನ ಆಗುತ್ತಿದೆ. ಶಿವಮೊಗ್ಗ ನಗರದಲ್ಲಿ ಇರುವ ಏಳೆಂಟು ಚಿತ್ರಮಂದಿರಗಳ ಪೈಕಿ ಮೂರು ಥಿಯೇಟರ್ ಗಳನ್ನು 'ದಿ ವಿಲನ್' ಆಕ್ರಮಿಸಿಕೊಂಡಿದ್ದಾನೆ.

ಚಿತ್ರಮಂದಿರಗಳ ಮುಂದೆ ಒಂದು ವಾರದ ಹಿಂದೆಯೇ ಹಬ್ಬ ಪ್ರಾರಂಭವಾಗಿದೆ. ಲಕ್ಷ್ಮಿ ಚಿತ್ರಮಂದಿರದ ತುಂಬ ಕಟ್ ಔಟ್ ಗಳು ರಾಜಾಜಿಸುತ್ತಿವೆ. ಶಿವಮೊಗ್ಗದ ಅಭಿಮಾನಿಗಳು ಬೈಕ್ ರಾಲಿ ಸೇರಿದಂತೆ ಕೆಲ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದಾರೆ.

ಅಂದಹಾಗೆ, ಮೈಸೂರು, ಹೊಸಪೇಟೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಸುಮಾರು ಜಿಲ್ಲೆಗಳಲ್ಲಿ ಇಂದು ಮಧ್ಯರಾತ್ರಿ 12 ಗಂಟೆಯಿಂದ 'ದಿ ವಿಲನ್' ಶೋ ಶುರು ಆಗಲಿದೆ. ಬೆಂಗಳೂರಿನ ಸಾಕಷ್ಟು ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಪ್ರಾರಂಭ ಮಾಡಲಾಗುತ್ತಿದೆ.


Click it and Unblock the Notifications











