ಈಗಲೇ ಹೇಳ್ತಿದ್ದೀವಿ 'ದಿ ವಿಲನ್' ಚಿತ್ರದ ಅವಧಿ ಇಷ್ಟೊಂದಿದೆ!

By Naveen

Recommended Video

The Villain : ದಿ ವಿಲನ್, ಕನ್ನಡ ಸಿನಿಮಾದ ಅವಧಿ ಎಷ್ಟಿರಬಹುದು ಊಹಿಸಿ? | Filmibeat Kannada

ಇವತ್ತು ಒಂದು ಸಿನಿಮಾ ಗೆಲ್ಲೋಕ್ಕೆ ಅದರ ಅವಧಿ ತುಂಬ ಮುಖ್ಯ. ಚಿತ್ರದ ಅವಧಿ ಸ್ವಲ್ಪ ಹೆಚ್ಚಾದರೂ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕ ಸೀಟ್ ನಿಂದ ಎದ್ದು ಸೀದಾ ಹೊರಗೆ ಹೋಗಿ ಬಿಡುತ್ತಾನೆ.

ನಾಟಕ ಆಗಿರಬಹುದು, ಸಿನಿಮಾ ಆಗಿರುಬಹುದು ಈಗ ಅವುಗಳ ಪ್ರದರ್ಶನದ ಅವಧಿ ತಗ್ಗಿದೆ. ಈಗ ಬರುತ್ತಿರುವ ಸಿನಿಮಾಗಳ ಪೈಕಿ ಬಹುಪಾಲು ಚಿತ್ರಗಳು 2 ಗಂಟೆ 30 ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲ. ಆದರೆ, 'ದಿ ವಿಲನ್' ಚಿತ್ರದ ಪ್ರದರ್ಶನ ಅವಧಿ ಅದಕ್ಕೂ ಹೆಚ್ಚಿಗೆ ಇದೆ.

ಬಜೆಟ್, ಸ್ಟಾರ್ ಕಾಸ್ಟ್, ಕ್ರೇಜ್ ಹೀಗೆ ಪ್ರತಿ ವಿಷಯಗಳಲ್ಲಿ ಬೇರೆ ಸಿನಿಮಾಗಳಿಂತ ಮುಂದೆ ನಿಂತಿರುವ 'ದಿ ವಿಲನ್' ಈಗ ಅದರ ಅವಧಿಯಲ್ಲಿಯೂ ಎಲ್ಲರನ್ನು ಮೀರಿಸಿದೆ. ಮುಂದೆ ಓದಿ...

175 ನಿಮಿಷ 34 ಸೆಕೆಂಡ್

175 ನಿಮಿಷ 34 ಸೆಕೆಂಡ್

'ದಿ ವಿಲನ್' ಇಡೀ ಚಿತ್ರದ ಅವಧಿ 175 ನಿಮಿಷ 34 ಸೆಕೆಂಡ್ ಇದೆ. ಅಂದರೆ, ಸಿನಿಮಾದ ಸಮಯ ಬರೋಬ್ಬರಿ 2 ಗಂಟೆ 55 ನಿಮಿಷ ಚಿತ್ರ ಇದೆ. ಒಂದು ಚಿತ್ರಕ್ಕೆ 2 ಗಂಟೆ 55 ನಿಮಿಷ ತುಂಬ ದೊಡ್ಡದಲ್ಲ ಆದರೆ, ಇಂದು ಬರುತ್ತಿರುವ ಚಿತ್ರಗಳಿಗೆ ಹೋಲಿಸಿದರೆ ಈ ಸಮಯ ತುಂಬ ಹೆಚ್ಚಿದೆ.

ಪ್ರೇಕ್ಷಕರನ್ನು ಕೂರಿಸುವ ಶಕ್ತಿ ಇರಬೇಕು

ಪ್ರೇಕ್ಷಕರನ್ನು ಕೂರಿಸುವ ಶಕ್ತಿ ಇರಬೇಕು

ಈಗಿನ ಕಾಲದಲ್ಲಿ ಒಂದು ಸಿನಿಮಾ 2 ಗಂಟೆಯ ಮೇಲೆ ಹೋಗುತ್ತಿದೆ ಎನ್ನುವಾಗಲೇ ಅನೇಕರು ಆಕಳಿಸಲು ಶುರು ಮಾಡುತ್ತಾರೆ. ಹೀಗಿರುವಾಗ, 2 ಗಂಟೆ 55 ನಿಮಿಷ ಹೊಂದಿರುವ 'ದಿ ವಿಲನ್' ಬೋರ್ ಆಗಬಾರದು ಎಂದರೆ, ಚಿತ್ರದ ಕಥೆ ತುಂಬ ಗಟ್ಟಿಯಾಗಿರಬೇಕು. ಇನ್ನೊಂದು ಕಡೆ ಇಬ್ಬರು ಸ್ಟಾರ್ ಗಳು ಚಿತ್ರದಲ್ಲಿ ಇರುವುದು ಸಮಯ ಹೆಚ್ಚಾಗಲು ಕಾರಣ ಇರಬಹುದು.

ಯೂ ಎ ಸರ್ಟಿಫಿಕೇಟ್ ಸಿಕ್ಕಿದೆ

ಯೂ ಎ ಸರ್ಟಿಫಿಕೇಟ್ ಸಿಕ್ಕಿದೆ

'ದಿ ವಿಲನ್' ಸಿನಿಮಾ ಸೆನ್ಸಾರ್ ಆಗಿದ್ದು, ಯೂ/ಎ ಸರ್ಟಿಫಿಕೇಟ್ ಸಿಕ್ಕಿದೆ. ಸೆನ್ಸಾರ್ ಮಂಡಳಿ ನೀಡಿರುವ ಸರ್ಟಿಫಿಕೇಟ್ ನಲ್ಲಿ ಚಿತ್ರದ ಅವಧಿ ಎಷ್ಟಿದೆ ಎಂಬುದನ್ನು ತಿಳಿಸಲಾಗಿದೆ. ಚಿತ್ರದ ಸೆನ್ಸಾರ್ ಪ್ರಮಾಣ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರೇಮ್ ಸೆನ್ಸಾರ್ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.

ಗಣೇಶ ಹಬ್ಬಕ್ಕೆ ರಿಲೀಸ್ ಡೇಟ್ ಅನೌನ್ಸ್

ಗಣೇಶ ಹಬ್ಬಕ್ಕೆ ರಿಲೀಸ್ ಡೇಟ್ ಅನೌನ್ಸ್

ಸಿನಿಮಾದ ಬಿಡುಗಡೆಯ ದಿನಾಂಕ ಗಣೇಶ ಹಬ್ಬದ ದಿನ ಅನೌನ್ಸ್ ಆಗಲಿದೆ. ಮುಂಚೆ ಈ ಚಿತ್ರವನ್ನು ಹಬ್ಬಕ್ಕೆ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದ ಪ್ರೇಮ್ ಈಗ ಹಬ್ಬದ ವಿಶೇಷವಾಗಿ ಬಿಡುಗಡೆಯ ದಿನಾಂಕ ಘೋಷಿಸಲಿದ್ದಾರೆ. ಮೂಲಗಳ ಪ್ರಕಾರ ಚಿತ್ರ ಇದೇ ತಿಂಗಳ 27ಕ್ಕೆ ರಿಲೀಸ್ ಆಗಲಿದೆ.

3 ಮೈನ್ ಥಿಯೇಟರ್

3 ಮೈನ್ ಥಿಯೇಟರ್

ಕೆಲವು ಸಿನಿಮಾಗಳಿಗೆ ಒಂದು ಗಾಂಧಿನಗರದ ಒಂದು ಚಿತ್ರಮಂದಿರ ಸಿಗುವುದು ಕಷ್ಟ ಆಗುತ್ತದೆ. ಆದರೆ, ಮೂರು ಮೈನ್ ಥಿಯೇಟರ್ ಗಳಲ್ಲಿ 'ದಿ ವಿಲನ್' ಸಿನಿಮಾ ರಿಲೀಸ್ ಆಗಲಿದೆ. ಸಂತೋಷ್, ಅದರ ಪಕ್ಕದ ನರ್ತಕಿ ಹಾಗೂ ತ್ರಿವೇಣಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

1000 ಚಿತ್ರಮಂದಿರಗಳಲ್ಲಿ

1000 ಚಿತ್ರಮಂದಿರಗಳಲ್ಲಿ

'ದಿ ವಿಲನ್' ಚಿತ್ರವನ್ನು ಸಾವಿರ ಥಿಯೇಟರ್ ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಧೈರ್ಯ ಹಾಗೂ ಸಾಹಸಕ್ಕೆ ಶೋ ಮ್ಯಾನ್ ಮುಂದಾಗಿದ್ದಾರೆ. ಈ ರೀತಿ ಬೇರೆ ಭಾಷೆಗಳ ದೊಡ್ಡ ಚಿತ್ರಗಳಿಗೆ 'ದಿ ವಿಲನ್' ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ದೇಶ ವಿದೇಶದಲ್ಲಿಯೂ 'ದಿ ವಿಲನ್' ಸಿನಿಮಾ ಬಿಡುಗಡೆ ಆಗಲಿದೆ.

ಹಬ್ಬ, ಅಬ್ಬರ ಎರಡೂ ಶುರುವಾಗಿದೆ

ಹಬ್ಬ, ಅಬ್ಬರ ಎರಡೂ ಶುರುವಾಗಿದೆ

ಈಗಾಗಲೇ ಅನೇಕ ಚಿತ್ರಮಂದಿರಗಳಲ್ಲಿ 'ದಿ ವಿಲನ್' ಪೋಸ್ಟರ್ ಗಳು ರಾರಾಜಿಸುತ್ತಿವೆ. ಮಾಗಡಿ ರಸ್ತೆಯ ಜಿಟಿ ಮಾಲ್ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿಕೊಂಡಿದ್ದಾರೆ. ನಿಜಕ್ಕೂ ಸಿನಿಮಾ ರಿಲೀಸ್ ದಿನ ಶಿವಣ್ಣ ಹಾಗೂ ಸುದೀಪ್ ಇಬ್ಬರು ಅಭಿಮಾನಿಗಳಿಗೆ ಹಬ್ಬದ ದಿನವಾಗಲಿದೆ.

More from Filmibeat

English summary
Actor Sudeep and Shivarajkumar starrer kannada movie 'The Villain' duration is 2 hour 55 minutes. The movie likely release on september 27th 2018. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X