ಮತ್ತೆ ಟ್ರೆಂಡ್ ಆಯ್ತು 'ದಿ ವಿಲನ್' : ಶಿವಣ್ಣನ ಸಾಹಸಕ್ಕೆ ಮೆಚ್ಚುಗೆಯ ಸುರಿಮಳೆ
'ದಿ ವಿಲನ್' ಸಿನಿಮಾ ಬಿಡುಗಡೆಗೆ ದಿನಗಣನೇ ಶುರುವಾಗಿದೆ. ರಿಲೀಸ್ ಸನಿಹದಲ್ಲಿ ಈಗ ಚಿತ್ರದ ನಾಲ್ಕು ಟೀಸರ್ ಗಳನ್ನು ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಯೂ ಟ್ಯೂಬ್ ನಲ್ಲಿ ಈ ವಿಡಿಯೋ ಈಗ ಟ್ರೆಂಡಿಂಗ್ ನಲ್ಲಿದೆ.
ನಿನ್ನೆ 7 ಸಂಜೆ ಗಂಟೆಗೆ ಬಿಡುಗಡೆಯಾಗಿರುವ ಈ ಟೀಸರ್ ಅನ್ನು 8 ಲಕ್ಷದ 50 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಸದ್ಯ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋವಾಗಿದೆ. ಸುದೀಪ್ ವಿಭಿನ್ನ ಅವತಾರಗಳಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್ ನಲ್ಲಿ ಶಿವಣ್ಣನ 'ಬುಟ್ಬುಡ್ತಿವಾ..' ಡೈಲಾಗ್ ಅಭಿಮಾನಿಗಳ ಫೇವರೇಟ್ ಆಗಿದೆ. ಶಿವಣ್ಣ ಮಾಡಿರುವ ಸಾಹಸ ದೃಶ್ಯಕ್ಕೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಈ ವಯಸ್ಸಿನಲ್ಲಿ ಶಿವಣ್ಣ ಎನರ್ಜಿ ಕಂಡು ಎಲ್ಲರೂ ಬೆರಗಾಗುತ್ತಿದ್ದಾರೆ.
ಸಿನಿಮಾದ ಟೀಸರ್ ಗಳು 'ದಿ ವಿಲನ್' ಚಿತ್ರದ ಕಥೆ ಬಗ್ಗೆ ಕುತೂಹಲ ಹುಟ್ಟಿಸಿದೆ. ಸಿನಿಮಾ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿದೆ.
More from Filmibeat
English summary
Actor Shivarajkumar and Sudeep starring 'The Villain' kannada movie. The movie is directed by Prem.
the villain sudeep shiva rajkumar prem amy jackson teaser sandalwood ದಿ ವಿಲನ್ ಸುದೀಪ್ ಶಿವರಾಜ್ ಕುಮಾರ್ ಪ್ರೇಮ್ ಟೀಸರ್ ಸ್ಯಾಂಡಲ್ ವುಡ್


Click it and Unblock the Notifications











