ವಿಲನ್ ಗಳ ಕಾದಾಟ ತೆರೆ ಮೇಲೆ ನೋಡಲು ದಿನಗಣನೆ ಶುರು

By Pavithra

Recommended Video

TheVillain : ಮುಗೀತು ದಿ ವಿಲನ್ ಶೂಟಿಂಗ್..! | Filmibeat Kannada

'ದಿ ವಿಲನ್' ಕಳೆದ ವರ್ಷದಿಂದಲೂ ಕನ್ನಡ ಸಿನಿಮಾರಂಗ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿಯೂ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಚಿತ್ರವನ್ನು ಕಣ್ಣು ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಇನ್ನು ಮುಂದೆ ಕಾಯುವ ಅವಶ್ಯಕತೆ ಇಲ್ಲ. ನಿರ್ದೇಶಕ ಪ್ರೇಮ್ ಅವರಿಗೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕುವ ಆಗಿಲ್ಲ. ಕಾರಣ 'ದಿ ವಿಲನ್' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಕಿಚ್ಚ ಸುದೀಪ್ ಹಾಗೂ ಆಮಿ ಜಾಕ್ಸನ್ ಜೊತೆಗಿನ ಹಾಡೊಂದನ್ನು ಬಾಕಿ ಉಳಿಸಿಕೊಂಡಿದ್ದ ಚಿತ್ರತಂಡ ಹಾಡಿನ ಮೂಲಕ ಸಿನಿಮಾ ಶೂಟಿಂಗ್ ಮಾಡಿ ಮುಗಿಸಿದೆ.

The Villain kannada movie shooting is complete

ನಿರ್ದೇಶಕ ಪ್ರೇಮ್ ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ಮೂಲಕ ತಿಳಿಸಿದ್ದು ಚಿತ್ರೀಕರಣ ಮುಗಿದಿದೆ ಆದಷ್ಟು ಬೇಗ ಚಿತ್ರಮಂದಿರದಲ್ಲಿ ಸಿಗೋಣ ಎಂದಿದ್ದಾರೆ. ಈಗಾಗಲೇ 'ದಿ ವಿಲನ್' ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಿರುವ ಸಿನಿಮಾತಂಡ ಇನ್ನು ಮಿಕ್ಕ ಹಾಡುಗಳನ್ನು ರಿಲೀಸ್ ಮಾಡಲಿದ್ದಾರೆ.

The Villain kannada movie shooting is complete

'ದಿ ವಿಲನ್' ಚಿತ್ರವನ್ನು ಸಿ ಆರ್ ಮನೋಹರ್ ನಿರ್ಮಾಣ ಮಾಡುತ್ತಿದ್ದು ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಆಮಿ ಜಾಕ್ಸನ್, ಸುದೀಪ್, ಶಿವರಾಜ್ ಕುಮಾರ್ ಚಿತ್ರದ ಮುಖ್ಯಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ತಂಡ ಆಗಸ್ಟ್ ನಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಿದೆ.

More from Filmibeat

English summary
Kannada movie The Villain shooting is complete. The movie will be release in August. Jogi Prem directed the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X