ವಿಡಿಯೋ : 'ದಿ ವಿಲನ್' ಎಲ್ಲ ಹಾಡಿನ ಝಲಕ್ ನೋಡಿ
ಅಕ್ಟೋಬರ್ 18 ಹತ್ತಿರ ಆಗುತ್ತಿದ್ದಂತೆ ಕನ್ನಡ ಸಿನಿ ಪ್ರಿಯರ ಹೃದಯ ಬಿಡಿತ ಹೆಚ್ಚಾಗುತ್ತಿದೆ. ಕಾರಣ ಈ ವರ್ಷ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್' ಬಿಡುಗಡೆಯಾಗುತ್ತಿದೆ.
ದಿನೇ ದಿನೇ 'ದಿ ವಿಲನ್' ನೋಡುವ ಕುತೂಹಲ ಹೆಚ್ಚಾಗುತ್ತಿದ್ದು, ಈಗ ಸಿನಿಮಾದ ಹಾಡುಗಳ ಟೀಸರ್ ಗಳು ಬಿಡುಗಡೆಯಾಗಿವೆ. ಇದರಲ್ಲಿ 'ದಿ ವಿಲನ್' ಸಿನಿಮಾದ ಎಲ್ಲ ಹಾಡಿನ ಝಲಯ್ ಅನ್ನು ತೋರಿಸಲಾಗಿದೆ.

ಈ ಹಾಡಿನ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂ ಟ್ಯೂಬ್ ನಲ್ಲಿ 2 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಅಲ್ಲದೆ ಸದ್ಯ ಹಾಡುಗಳು ಟ್ರೆಂಡಿಂಗ್ 2ನಲ್ಲಿ ಇವೆ. ಹಾಡುಗಳಲ್ಲಿ ಸುದೀಪ್, ಶಿವಣ್ಣ, ಆಮಿ ಹಾಡಿನಲ್ಲಿ ಸಖತ್ ಮಿಂಚಿದ್ದಾರೆ. ಹಾಡುಗಳು ಹೇಗಿರುತ್ತೆ ಎಂಬ ಕೂತುಹಲ ಮತ್ತಷ್ಟು ಹೆಚ್ಚಾಗಿದೆ.
ಅಂದಹಾಗೆ, ಸಿನಿಮಾ ದಸರ ಹಬ್ಬದ ವಿಶೇಷವಾಗಿ ಅಕ್ಟೋಬರ್ 18 ರಂದು ರಿಲೀಸ್ ಆಗುತ್ತಿದೆ. ಅಕ್ಟೋಬರ್ 11 ರಿಂದ ಟಿಕೆಟ್ ಬುಕ್ಕಿಂಗ್ ಶುರು ಆಗುತ್ತಿದ್ದು, ಟಿಕೆಟ್ ಗೆ ಸಖತ್ ಡಿಮ್ಯಾಂಡ್ ಇದೆ.
More from Filmibeat
English summary
Actor Sudeep and Shivarajkumar starring 'The Villain' kannada movie songs teaser released. The movie is directed by Prem.
the villain sudeep shiva rajkumar prem amy jackson sandalwood ದಿ ವಿಲನ್ ಸುದೀಪ್ ಶಿವರಾಜ್ ಕುಮಾರ್ ಪ್ರೇಮ್ ಸ್ಯಾಂಡಲ್ ವುಡ್


Click it and Unblock the Notifications











