'ದಿ ವಿಲನ್' ತಂಡದ ಗಣೇಶ ಆಚರಣೆ ಸಖತ್ ವಿಶೇಷವಾಗಿತ್ತು
Recommended Video

The Villain : ದಿ ವಿಲನ್ ಚಿತ್ರತಂಡದಿಂದ ಗಣೇಶ ಹಬ್ಬದ ಆಚರಣೆ | Filmibeat Kannada
ಗಣೇಶ ಹಬ್ಬಕ್ಕೆ 'ದಿ ವಿಲನ್' ಸಿನಿಮಾದ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಿರುವ ಪ್ರೇಮ್ ತಮ್ಮ ತಂಡ ಜೊತೆಗೆ ಈ ಬಾರಿಯ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಗರಿಕೆಯಲ್ಲಿಯೇ ಮಾಡಿದ ದೊಡ್ಡ ಗಣೇಶನಿಗೆ ವಿಲನ್ ಚಿತ್ರತಂಡ ಪೂಜೆ ಸಲ್ಲಿಸಿದೆ. ಚಿತ್ರ ನಿರ್ಮಾಪಕ ಸಿ ಆರ್ ಮನೋಹರ್, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
10 ಅಡಿ ಎತ್ತರದ ಈ ವಿಶಿಷ್ಟ ಗಣಪನನ್ನು ಗರಿಕೆ ಹುಲ್ಲು, ಮಣ್ಣು, ಥರ್ಮಕೋಲ್, ತೆಂಗಿನ ನಾರು ಬಳಸಿ ತಯಾರು ಮಾಡಲಾಗಿದೆ. ಮಹೇಶ್ ಎನ್ನುವ ಕಲಾವಿದನ ಕೈ ಚಳಕ ಈ ಗಣಪನ ಮೂರ್ತಿಯ ಹಿಂದೆ ಇದೆ.

ಇನ್ನೊಂದು ಕಡೆ 'ದಿ ವಿಲನ್' ಶೈಲಿಯ ಗಣೇಶ ಕೂಡ ರೆಡಿಯಾಗಿದೆ. ಶಿವಣ್ಣ ಹಾಗೂ ಸುದೀಪ್ ರೀತಿ ಇರುವ ಗಣೇಶ ಗಮನ ಸೆಳೆಯುತ್ತಿದೆ.

ಅಂದಹಾಗೆ, ಇಷ್ಟು ದಿನದಿಂದ ಎಲ್ಲರೂ ಕಾಯುತ್ತಿದ್ದ 'ದಿ ವಿಲನ್' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸಿನಿಮಾ ಅಕ್ಟೋಬರ್ 18ಕ್ಕೆ ಬಿಡುಗಡೆ ಆಗಲಿದೆ.
More from Filmibeat
English summary
'The Villain' kannada movie team calibrated ganesh chaturthi festival.
the villain sudeep shiva rajkumar prem amy jackson sandalwood ದಿ ವಿಲನ್ ಸುದೀಪ್ ಶಿವರಾಜ್ ಕುಮಾರ್ ಪ್ರೇಮ್ ಸ್ಯಾಂಡಲ್ ವುಡ್


Click it and Unblock the Notifications











