For Quick Alerts
  ALLOW NOTIFICATIONS  
  For Daily Alerts

  ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್

  By Naveen
  |

  ಇಷ್ಟು ದಿನದಿಂದ ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದಿದ್ದು 'ದಿ ವಿಲನ್' ಸಿನಿಮಾದ ಟೀಸರ್ ನೋಡೋಕ್ಕೆ. ಆ ಘಳಗೆ ನಿನ್ನೆ ಬಂದಿದೆ. ನಿನ್ನೆ 'ದಿ ವಿಲನ್' ಚಿತ್ರದ ಟೀಸರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಟೀಸರ್ ಬಿಡುಗಡೆ ಮಾಡಿದ್ದಾರೆ.

  ಸಾಮಾಜಿಕ ಜಾಲ ತಾಣಗಳಲ್ಲಿ 'ದಿ ವಿಲನ್' ಟೀಸರ್ ಅಬ್ಬರ ಜೋರಾಗಿದೆ. ಯೂಟ್ಯೂಬ್ ನಲ್ಲಿ ಸಹ ರಿಲೀಸ್ ಆಗಿರುವ 'ದಿ ವಿಲನ್' ಟೀಸರ್ ಸಂಚಲನವನ್ನು ಸೃಷ್ಟಿಸಿದೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಒಂದೊಂದು ಟೀಸರ್ ಬಿಡುಗಡೆಯಾಗಿದ್ದು, ಎರಡು ಟೀಸರ್ ಗಳನ್ನು ಜನ ನೋಡಿ ಇಷ್ಟಪಟ್ಟಿದ್ದಾರೆ.

  ಸುದೀಪ್ ಅವರ ಟೀಸರ್ ಅನ್ನು ಎಂಟು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದು, ಶಿವರಾಜ್ ಕುಮಾರ್ ಅವರ ಟೀಸರ್ ಅನ್ನು ಆರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪ್ರಮುಖವಾಗಿ ಮೇಕಿಂಗ್ ಹಾಗೂ ಮ್ಯೂಸಿಕ್ ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಇವೆರಡೂ ಟೀಸರ್ ಮೆರಗನ್ನು ಹೆಚ್ಚು ಮಾಡಿವೆ.

  ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಎರಡು ಟೀಸರ್ ಗಳು ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಪಕ್ಕಾ ಅಭಿಮಾನಗಳಿಗೆ ಹೇಳಿ ಮಾಡಿಸಿದ್ದ ಆಗಿದೆ.

  ಸದ್ಯ ಸಿನಿಮಾದ ಎರಡು ಟೀಸರ್ ಗಳನ್ನು ಬಿಟ್ಟಿರುವ ನಿರ್ದೇಶಕ ಪ್ರೇಮ್ ನಂತರ ಆಡಿಯೋ ಲಾಂಚ್ ಮಾಡಲಿದ್ದಾರೆ. ಬಳಿಕ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ ಸಿ.ಆರ್. ಮನೋಹರ್ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಅಭಿಮಾನಿಗಳ ನಿರೀಕ್ಷೆಯನ್ನು ಪ್ರೇಮ್ ನಿರಾಸೆ ಮಾಡಿಲ್ಲ.

  English summary
  Kannada actor Shivraj Kumar and Sudeep's 'The Villain' kannada movie teaser got good response from the audience. The movie is directed by prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X