ಶಿವಣ್ಣನ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆದರೂ ಆಗಬಹುದು!
Recommended Video

'ದಿ ವಿಲನ್' ಸಿನಿಮಾದ ಎರಡು ಟೀಸರ್ ಗಳು ಇತ್ತೀಚಿಗಷ್ಟೆ ಬಿಡುಗಡೆಯಾಗಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿತ್ತು. ಇನ್ನೊಂದು ಕಡೆ ಟೀಸರ್ ನೋಡಿ ಕೆಲವು ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು. ಶಿವಣ್ಣನ ಅಭಿಮಾನಿಗಳು ಕೆಲವು ಕಾರಣಗಳಿಗೆ ಪ್ರೇಮ್ ಮೇಲೆ ಬೇಸರಗೊಂಡಿದ್ದರು.
ಆದರೆ, ಇದೀಗ ಮತ್ತೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ನಿರಾಸೆ ಆಗುವ ಹಾಗೆ ಕಾಣುತ್ತಿದೆ. ಶಿವರಾಜ್ ಕುಮಾರ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಪ್ಲಾನ ನಲ್ಲಿ ಪ್ರೇಮ್ ಇದ್ದರು. ಆದರೆ, ಈಗ ಆ ಹಾಡು ಶಿವಣ್ಣ ಬರ್ತ್ ಡೇ ಗೆ ರಿಲೀಸ್ ಆಗುವುದು ಡೌಟ್ ಇದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ 'ದಿ ವಿಲನ್' ಆಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ. ಮುಂದೆ ಓದಿ..

ಪ್ರೇಮ್ ಕೊಟ್ಟ ಸ್ಪಷ್ಟನೆ
''ಕನ್ನಡ ಸಿನಿಮಾನ ಪ್ರೀತಿಸ್ತಿರೋ ಎಲ್ಲಾ ಅಭಿಮಾನಿಗಳೇ ನೀವು ಡಾ.ಶಿವಣ್ಣನ ಹುಟ್ಟುಹಬ್ಬಕ್ಕೆ ಹಾಡನ್ನ ರಿಲೀಸ್ ಮಾಡ್ಬೇಕು ಅಂತ ಕೇಳ್ತಿದ್ದೀರಿ. ನಮಗೂ ಅಂದೇ 'ದಿ ವಿಲನ್' ಫಸ್ಟ್ ಸಾಂಗ್ ನ ರಿಲೀಸ್ ಮಾಡ್ಬೇಕು ಅಂತಿತ್ತು. ಆದರೆ ಅದು ಸಾಧ್ಯ ಆಗುವುದು ಕಷ್ಟ.'' ಎಂದು ಪ್ರೇಮ್ ತಿಳಿಸಿದ್ದಾರೆ.

ಹಾಡಿನ ಮಾಸ್ಟರಿಂಗ್ ಕೆಲಸ ನಡೆಯುತ್ತಿದೆ
''ಆ ಹಾಡಿನ ಮಾಸ್ಟರಿಂಗ್ ಫೈನಲ್ ಕೆಲಸಗಳು ಮುಂಬೈನಲ್ಲಿ ನಡೀತಿದೆ. ನಾವು 12 ಕ್ಕೆ ರಿಲೀಸ್ ಮಾಡ್ತೀವಿ ಅಂತ ಡೇಟ್ ಹಾಕಿ ಹಾಡಿನ ಕೆಲಸ ಮುಗೀದೆ ಇದ್ರೆ ಅದನ್ನ ರಿಲೀಸ್ ಮಾಡೋಕೆ ಆಗೋದಿಲ್ಲ ಹಾಗೆ ಮಾಡುವುದು ತಪ್ಪಾಗುತ್ತೆ. ಹಾಗಾಗಿ ನಾವು ಜುಲೈ 12 ರ ಬದಲು ಜುಲೈ 14 ಕ್ಕೆ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದೇವೆ.'' - ಪ್ರೇಮ್, ನಿರ್ದೇಶಕ

ಹಾಡು ರೆಡಿ ಆದ್ರೆ ರಿಲೀಸ್ ಮಾಡ್ತಿವಿ
''ಅಕಸ್ಮಾತ್ ಮಾಸ್ಟರಿಂಗ್ ಕೆಲಸ ಮುಗಿದು 12ನೇ ತಾರೀಖಿಗೆ ಹಾಡು ರೆಡಿ ಆಗಿದ್ದಲ್ಲಿ ಶಿವಣ್ಣನ ಹುಟ್ಟುಹಬ್ಬದಂದೇ ಹಾಡನ್ನ ಬಿಡುಗಡೆ ಮಾಡುತ್ತೇವೆ. ಇಲ್ಲ ಅಂದರೆ ಜುಲೈ 14 ರಂದು ಬೆಳ್ಳಗೆ 10 ಗಂಟೆಗೆ ಹಾಡು ಬಿಡುಗಡೆ ಮಾಡುತ್ತೇವೆ. ನಿಮ್ಮ ಸಹಕಾರ, ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು.'' - ಪ್ರೇಮ್, ನಿರ್ದೇಶಕ

ಮುಂಬೈನಲ್ಲಿ ಅರ್ಜುನ್ ಜನ್ಯ
ಸದ್ಯ, 'ದಿ ವಿಲನ್' ಸಿನಿಮಾದ ಹಾಡಿನ ಮಾಸ್ಟರಿಂಗ್ ಗಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂಬೈಗೆ ತೆರಳಿದ್ದಾರೆ. ಪ್ರಸಿದ್ಧ ಸೌಂಡ್ ಇಂಜಿನಿಯರ್ Eric Pillai ಅವರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











