twitter
    For Quick Alerts
    ALLOW NOTIFICATIONS  
    For Daily Alerts

    ಮೊದಲ ದಿನ 20 ಕೋಟಿ, 4 ದಿನಕ್ಕೆ ಎಷ್ಟಾಯಿತು ಎಂದು ಬಿಚ್ಚಿಟ್ಟ ನಿರ್ಮಾಪಕ.!

    |

    Recommended Video

    The Villain : ದಿ ವಿಲನ್ ಸಿನಿಮಾದ 4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು? | FILMIBEAT KANNADA

    ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನ ದಾಖಲೆಯ ಕಲೆಕ್ಷನ್ ಮಾಡಿದ್ದ ಈ ಚಿತ್ರ ನೂರು ಕೋಟಿ ಗಳಿಸುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ಬಹುಶಃ ಇದೇ ಹಾದಿಯತ್ತ 'ದಿ ವಿಲನ್' ಸಿನಿಮಾ ಸಾಗುತ್ತಿದೆ. ಮೊದಲ ದಿನ 20 ಕೋಟಿ ಕಲೆಕ್ಷನ್ ಆಗಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದರು. ಇದು ಸ್ಯಾಂಡಲ್ ವುಡ್ ಮಟ್ಟಿಗೆ ರೆಕಾರ್ಡ್ ಸೆಟ್ಟಿಂಗ್ ಚಿತ್ರ.

    ಮೊದಲ ವಾರಾಂತ್ಯಕ್ಕೆ 'ದಿ ವಿಲನ್' 50 ಕೋಟಿ ಗಳಿಕೆ: ಭವಿಷ್ಯ ನುಡಿದ ಖ್ಯಾತ ನಟ ಮೊದಲ ವಾರಾಂತ್ಯಕ್ಕೆ 'ದಿ ವಿಲನ್' 50 ಕೋಟಿ ಗಳಿಕೆ: ಭವಿಷ್ಯ ನುಡಿದ ಖ್ಯಾತ ನಟ

    ಇದೇ ಸಂತಸದಲ್ಲಿ 'ದಿ ವಿಲನ್' ಸಿನಿಮಾ ಸಕ್ಸಸ್ ಮೀಟ್ ಮಾಡಿತ್ತು. ಈ ವೇಳೆ ನಿರ್ಮಾಪಕ ಸಿ ಆರ್ ಮನೋಹರ್, ವಿತರಕ ಜಾಕ್ ಮಂಜು ಹಾಗೂ ನಿರ್ದೇಶಕ ಪ್ರೇಮ್ ಭಾಗಿಯಾಗಿದ್ದರು. ಮೊದಲ ನಾಲ್ಕು ದಿನಕ್ಕೆ ಎಷ್ಟು ಕಲೆಕ್ಷನ್ ಮಾಡಿದೆ ಎಂದು ಅಂಕಿ-ಅಂಶಗಳ ಮೂಲಕ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಮೊದಲ ನಾಲ್ಕು ದಿನದ ಗಳಿಕೆ ಎಷ್ಟು.? ಮುಂದೆ ಓದಿ.....

    ನಿರ್ಮಾಪಕರ ಷೇರು ಎಷ್ಟಾಗಿದೆ

    ನಿರ್ಮಾಪಕರ ಷೇರು ಎಷ್ಟಾಗಿದೆ

    ಚಿತ್ರದ ನಿರ್ಮಾಪಕ ಸಿ ಆರ್ ಮನೋಹರ್ ಅವರು ಹೇಳಿರುವ ಪ್ರಕಾರ ಮೊದಲ ನಾಲ್ಕು ದಿನಕ್ಕೆ ನಿರ್ಮಾಪಕರ ಶೇರ್ 30 ಕೋಟಿ ಕೈಗೆ ಬಂದಿದೆಯಂತೆ. ಇದು ಬರಿ ನಿರ್ಮಾಪಕನ ಷೇರು ಎಂದು ಹೇಳಿದ್ದು, ಒಟ್ಟಾರೆ ಕಲೆಕ್ಷನ್ ಬಗ್ಗೆ ನಿರೀಕ್ಷೆ ಹೆಚ್ಚಿದೆ ಎಂದು ಖುಷಿ ಹಂಚಿಕೊಂಡರು.

    'ವಿಲನ್' ಮೊದಲ ರಿವ್ಯೂ: ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.? 'ವಿಲನ್' ಮೊದಲ ರಿವ್ಯೂ: ಫಸ್ಟ್ ಹಾಫ್ ಚಿಂದಿ, ಸೆಕೆಂಡ್ ಹಾಫ್.?

    ನೂರು ಕೋಟಿ ರೀಚ್ ಆಗುತ್ತೆ

    ನೂರು ಕೋಟಿ ರೀಚ್ ಆಗುತ್ತೆ

    ಬಹುಶಃ ನಾಲ್ಕು ದಿನದಲ್ಲಿ ಕಲೆಕ್ಷನ್ ಮಾಡಿರುವ ಹಣವನ್ನ ನೋಡಿದ್ರೆ, ಈ ಸಿನಿಮಾ ಮೊದಲ ನೂರು ಕೋಟಿ ಕ್ಲಬ್ ಗೆ ಸೇರುತ್ತೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದರು. ಸದ್ಯಕ್ಕೆ 60 ಪರ್ಸೆಂಟ್ ರೀಚ್ ಆಗಿದ್ದೀವಿ. ಉಳಿದ ಮೊತ್ತವನ್ನ ಅತಿ ಶೀಘ್ರದಲ್ಲಿ ಗಳಿಸುತ್ತೆ ಎಂಬ ಭರವಸೆ ಮೂಡಿಸಿದ್ದಾರೆ.

    'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು 'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು

    ಹಾಕಿದ ಬಂಡವಾಳ ಬಂದಿದೆ

    ಹಾಕಿದ ಬಂಡವಾಳ ಬಂದಿದೆ

    ಇದು ಸದ್ಯದ ಮಟ್ಟಿಗೆ ಅತಿ ದೊಡ್ಡ ಬಂಡವಾಳದಲ್ಲಿ ನಿರ್ಮಾಣದ ಸಿನಿಮಾ. ನಿರ್ಮಾಪಕರು ಹಾಕಿದ ಬಂಡವಾಳ ನಾಲ್ಕು ದಿನದಲ್ಲೇ ವಾಪಸ್ ಬಂದಿದೆ. ಇನ್ನು ನಿರ್ಮಾಪಕರಿಗೆ ಕೊಟ್ಟಿದ್ದ ಹಣವೂ ನಮ್ಮ ಕೈಗೆ ಬಂದಿದೆ ಎಂದು ವಿತರಕ ಜಾಕ್ ಮಂಜು ತಿಳಿಸಿದ್ದಾರೆ.

    'ದಿ ವಿಲನ್' ನೋಡುವ ಅಭಿಮಾನಿಗಳಲ್ಲಿ ಮನವಿ ಮಾಡಿದ ಚಿತ್ರತಂಡ 'ದಿ ವಿಲನ್' ನೋಡುವ ಅಭಿಮಾನಿಗಳಲ್ಲಿ ಮನವಿ ಮಾಡಿದ ಚಿತ್ರತಂಡ

    ದಾಖಲೆಯ ಚಿತ್ರಮಂದಿರದಲ್ಲಿ ಪ್ರದರ್ಶನ

    ದಾಖಲೆಯ ಚಿತ್ರಮಂದಿರದಲ್ಲಿ ಪ್ರದರ್ಶನ

    ಕರ್ನಾಟಕ ರಾಜ್ಯದಲ್ಲಿ ಸುಮಾರು 450ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ 'ವಿಲನ್' ಸಿನಿಮಾ ರಿಲೀಸ್ ಆಗಿತ್ತು. ಎಲ್ಲಾ ಕಡೆಯೂ 5-6-7 ಶೋಗಳು ಪ್ರದರ್ಶನವಾಗುತ್ತಿದೆ. ಇನ್ನು ರಾಜ್ಯದ ಹೊರಗಡೆಯೂ ಅತಿ ಹೆಚ್ಚು ಗಳಿಕೆ ಬಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು! 'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    English summary
    Kannada actor shiva rajkumar and sudeep starrer The villain movie 4 days total collection details.
    Tuesday, October 23, 2018, 9:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X