ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್'
Recommended Video

ನಿರ್ದೇಶಕ ಪ್ರೇಮ್ ಸಿನಿಮಾ ಅಂದರೆ ಆ ಸಿನಿಮಾ ಸದ್ದು ಹೆಜ್ಜೆ ಇರುತ್ತದೆ. ಅದೇ ರೀತಿ 'ದಿ ವಿಲನ್' ಸಿನಿಮಾ ಕೂಡ ಪ್ರತಿ ಹಂತದಲ್ಲಿ ಸೌಂಡ್ ಮಾಡುತ್ತಿದೆ. ಈಗ ಸಿನಿಮಾದ ಹಾಡುಗಳು ದುಬೈನಲ್ಲಿ ಬಿಡುಗಡೆಯಾಗಿವೆ.
ನಿನ್ನೆ ಸಿನಿಮಾದ ಆಡಿಯೋ ಲಾಂಚ್ ಮತ್ತು ಸ್ಟಾರ್ ನೈಟ್ ಕಾರ್ಯಕ್ರಮ ದುಬೈ ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ಸಿ ಆರ್ ಮನೋಹರ್ ಹಾಜರಿದ್ದರು.
ರೆಬಲ್ ಸ್ಟಾರ್ ಅಂಬರೀಶ್ ಕಾರ್ಯಕ್ರಮದ ವಿಶೇಷ ಅತಿಥಿ ಆಗಿದ್ದರು.

ಕನ್ನಡದ ನಟಿಯರಾದ ಹರ್ಷಿಕಾ ಪೂಣಚ್ಛ, ಕಾರುಣ್ಯ ರಾಮ್, ಹಾಗೂ ಭಾವನ ರಾವ್ ಕಾರ್ಯಕ್ರಮದ ಅಂದವನ್ನು ಹೆಚ್ಚು ಮಾಡಿದರು. ಈ ನಟಿಯರ ನೃತ್ಯ ಕಾರ್ಯಕ್ರಮದಲ್ಲಿ ಕಲರ್ ಫುಲ್ ಆಗಿತ್ತು.

ಇತ್ತೀಚಿಗಷ್ಟೆ ಸಿನಿಮಾ ಆಡಿಯೋ ಬಿಡುಗಡೆ ಬೆಂಗಳೂರಿನಲ್ಲಿ ನಡೆದಿತ್ತು. ಆ ಬಳಿಕ ದುಬೈ ನಲ್ಲಿ ಸಹ ಒಂದು ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 'ಕನ್ನಡಕ್ಕಾಗಿ ಒಂದು ದಿನ' ಎಂಬ ಟ್ಯಾಗ್ ಲೈನ್ ಮೂಲಕ ಅಲ್ಲಿನ ಅನೇಕ ಕನ್ನಡಿಗರು ಕಾರ್ಯಕ್ರಮವನ್ನು ನೋಡಿ ಖುಷಿ ಪಟ್ಟರು.


Click it and Unblock the Notifications











