50 ಕೋಟಿ ದಾಟಿತು 'ದಿ ವಿಲನ್' ಸಂಪಾದನೆ
'ದಿ ವಿಲನ್' ಸಿನಿಮಾಗೆ ಅದೇನೇ ನೆಗೆಟಿವ್ ಮಾತುಗಳು ಕೇಳಿ ಬಂದಿರಬಹುದು ಆದರೆ, ಈ ಸಿನಿಮಾ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ. ಈಗ ಈ ಚಿತ್ರ ಬರೋಬ್ಬರಿ 50 ಕೋಟಿ ಕಲೆಕ್ಷನ್ ಮಾಡಿದೆಯಂತೆ.
ಹೌದು, ಈ ಸಿನಿಮಾದ ಸದ್ಯದ ಗಳಿಕೆ ಎಷ್ಟು ಎಂಬುದು ಅಭಿಮಾನಿಗಳ ಕುತೂಹಲವಾಗಿತ್ತು. ಈಗ ಈ ಗೊಂದಲಕ್ಕೆ ಸುದೀಪ್ ಉತ್ತರ ನೀಡಿದ್ದಾರೆ. 'ದಿ ವಿಲನ್' ಚಿತ್ರದ 50 ಕೋಟಿ ದಾಟಿದೆ ಎಂಬ ಸುದ್ದಿಯನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಕೂಡ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಸಿನಿಮಾ ಹೌಸ್ ಫುಲ್ ಆಗಿ ಮುನ್ನುಗುತ್ತಿದೆ.

ಮತ್ತೊಂದು ಕಡೆ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ 12 ಕೋಟಿಗೆ ಸೇಲ್ ಆಗಿದೆ. ಜೊತೆಗೆ ಟಿವಿ ರೈಟ್ಸ್ 9 ಕೋಟಿಗೆ ಮಾರಾಟ ಆಗಿದೆ.
English summary
Actor Shivaraj Kumar and Sudeep's 'The Villain' kannada movie collect 50 crore in box office.
box office the villain sudeep shiva rajkumar prem amy jackson sandalwood ದಿ ವಿಲನ್ ಸುದೀಪ್ ಶಿವರಾಜ್ ಕುಮಾರ್ ಪ್ರೇಮ್ ಬಾಕ್ಸ್ ಆಫೀಸ್ ಸ್ಯಾಂಡಲ್ ವುಡ್


Click it and Unblock the Notifications