»   » ಸುದೀಪ್ ಅಭಿಮಾನಿ ಮಾಡಿದ 'ದಿ ವಿಲನ್' ಟೀಸರ್ ನೋಡಿ

ಸುದೀಪ್ ಅಭಿಮಾನಿ ಮಾಡಿದ 'ದಿ ವಿಲನ್' ಟೀಸರ್ ನೋಡಿ

Posted By:
Subscribe to Filmibeat Kannada
Amy Jackson surprised Director Prem with her stunts in 'The Villain'

ಸ್ಟಾರ್ ನಟರ ಕೆಲ ಅಭಿಮಾನಿಗಳು ಸಖತ್ ಕ್ರಿಯೇಟಿವ್ ಆಗಿರುತ್ತಾರೆ. ತಮ್ಮ ಮೆಚ್ಚಿನ ನಟನ ಸಿನಿಮಾಗಳ ವಿಭಿನ್ನ ಪೋಸ್ಟರ್ ಗಳನ್ನು ತಾವೇ ತಯಾರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಇರುತ್ತಾರೆ. ಅದೇ ರೀತಿ ಇದೀಗ ಸುದೀಪ್ ಅಭಿಮಾನಿಯೊಬ್ಬರು ಕೂಡ 'ದಿ ವಿಲನ್' ಚಿತ್ರದ ಟೀಸರ್ ರೆಡಿ ಮಾಡಿದ್ದಾರೆ.

'ದಿ ವಿಲನ್' ರಿಮೇಕ್: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಹೆಬ್ಬುಲಿ ಸುದೀಪ್!

'ದಿ ವಿಲನ್' ಚಿತ್ರದ ಮೇಕಿಂಗ್ ಫೋಟೋಗಳನ್ನು ಮತ್ತು ಪೋಸ್ಟರ್ ಗಳನ್ನು ಬಳಸಿ ಈ ಟೀಸರ್ ಮಾಡಿದ್ದಾರೆ. ಅಲ್ಲದೆ ಈ ಟೀಸರ್ ನೋಡಿ ನಿರ್ದೇಶಕ ಪ್ರೇಮ್ ಸಹ ಮೆಚ್ಚಿಕೊಂಡು ತಮ್ಮ 'ಪ್ರೇಮ್ಸ್' ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

'The Villain' movie fan made teaser

ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿ ಈ ಟೀಸರ್ ಮೂಲಕ ಶುಭಾಶಯ ಕೋರಿದ್ದಾರೆ. ಜೊತೆಗೆ ಸದ್ಯದಲ್ಲಿಯೇ ಚಿತ್ರತಂಡ ಕೂಡ 'ದಿ ವಿಲನ್' ಅಫೀಶಿಯಲ್ ಟೀಸರ್ ರಿಲೀಸ್ ಮಾಡಲಿದೆ. 'ದಿ ವಿಲನ್' ಚಿತ್ರದ ಫ್ಯಾನ್ ಮೇಡ್ ಟೀಸರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
watch video : Actor Sudeep's fan made 'The Villain' movie teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada