'ದಿ ವಿಲನ್' ಕೊನೆಯ ಹಾಡಿಗಾಗಿ ಮುಂಬೈಗೆ ತೆರಳಿದ ಪ್ರೇಮ್

By Naveen

Recommended Video

ಅಂತೂ ಇಂತೂ ಕೊನೆ ಹಂತಕ್ಕೆ ಬಂತು ದಿ ವಿಲನ್ ಸಿನಿಮಾ | Filmibeat Kannada

ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ 'ದಿ ವಿಲನ್' ಸಿನಿಮಾವನ್ನು ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದರು. ಅದೇ ರೀತಿ ಸಿನಿಮಾದ ರಿಲೀಸ್ ಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು ಸಿನಿಮಾದ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಸದ್ಯ ಪ್ರೇಮ ಹಾಗೂ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೊನೆಯ ಹಾಡಿನ ತಯಾರಿಯಲ್ಲಿ ಬಿಜಿ ಇದ್ದಾರೆ.

ನಿರ್ದೇಶಕ ಪ್ರೇಮ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಅರ್ಜುನ್ ಜನ್ಯ ಜೊತೆಗಿನ ಫೋಟೋ ಹಾಕಿ ಹಾಡಿನ ಬಗ್ಗೆ ತಿಳಿಸಿದ್ದಾರೆ. ಈ ಹಾಡಿಗಾಗಿ ಇಬ್ಬರು ಮುಂಬೈಗೆ ಹೋಗಿದ್ದಾರೆ. ಈ ಹಾಡನ್ನು ಹಾಡುತ್ತಿರುವ ಸಿಂಗರ್ ಮತ್ತು ಆಡಿಯೋ ಬಿಡುಗಡೆ ದಿನಾಂಕವನ್ನು ಸದ್ಯದಲ್ಲಿಯೇ ಪ್ರೇಮ್ ರಿವೀಲ್ ಮಾಡಲಿದ್ದಾರಂತೆ.

'ದಿ ವಿಲನ್' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಂದಾಗಿದ್ದಾರೆ. ಮತ್ತೊಂದು ಕಡೆ ಈ ಚಿತ್ರದಿಂದ ಬಾಲಿವುಡ್ ನಟಿ ಆಮಿ ಜಾಕ್ಸನ್ ಕನ್ನಡಕ್ಕೆ ಬಂದಿದ್ದಾರೆ.

The Villain movie final song recording work going on in Mumbai

ಅಂದಹಾಗೆ, ಸಿನಿಮಾದ ಮಾತಿನ ಭಾಗದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಎರಡು ಹಾಡುಗಳಷ್ಟೇ ಬಾಕಿ ಉಳಿಸಿಕೊಂಡಿರುವ ಪ್ರೇಮ್ ಅದಾದ ನಂತರ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಹಾಡುಗಳ ಬಳಿಕ ವರಮಹಾಲಕ್ಷ್ಮಿ ಹಬ್ಬಕ್ಕೆ ಜನ ಸಿನಿಮಾವನ್ನು ನೋಡಬಹುದಾಗಿದೆ.

More from Filmibeat

English summary
Sudeep and Shivarajkumar starring 'The Villain' kannada movie final song recording work going on in Mumbai. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X