»   » 10 ದಿನದಲ್ಲಿ ರಿಲೀಸ್ ಆಗಲಿದೆಯಂತೆ 'ದಿ ವಿಲನ್' ಫಸ್ಟ್ ಲುಕ್

10 ದಿನದಲ್ಲಿ ರಿಲೀಸ್ ಆಗಲಿದೆಯಂತೆ 'ದಿ ವಿಲನ್' ಫಸ್ಟ್ ಲುಕ್

Posted By:
Subscribe to Filmibeat Kannada

ಜೋಗಿ ಪ್ರೇಮ್ ನಿರ್ದೇಶನ ಮಾಡಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಸುತ್ತಿರುವ 'ದಿ ವಿಲನ್' ಚಿತ್ರದ ಟೀಸರ್ ಚಿತ್ರೀಕರಣ ಶುರುವಾಗಿದ್ದು, ಫಸ್ಟ್ ಲುಕ್ ಯಾವಾಗ ರಿಲೀಸ್ ಆಗಲಿದೆ ಎಂಬುದನ್ನ ಪ್ರೇಮ್ ಬಹಿರಂಗಪಡಿಸಿದ್ದಾರೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

'The Villain' Movie First Look Will Be Released within 10 Days

ಇಂದಿನಿಂದ (ಫೆಬ್ರವರಿ 10) 'ದಿ ವಿಲನ್' ಚಿತ್ರದ ಟೀಸರ್ ಶೂಟಿಂಗ್ ಮಾಡುತ್ತಿರುವ ಪ್ರೇಮ್, ಸದ್ಯ, ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ಅವರ ಚಿತ್ರೀಕರಣವನ್ನ ಮುಗಿಸಿದ್ದಾರೆ. ಇದೀಗ ಸುದೀಪ್ ಅವರ ಭಾಗಿಯಾಗಿದ್ದಾರೆ. ಟೀಸರ್ ಚಿತ್ರೀಕರಣಕ್ಕೂ ಮುಂಚೆ ಫೇಸ್ ಬುಕ್ ನಲ್ಲಿ ಲೈವ್ ಗೆ ಬಂದಿದ್ದ ಪ್ರೇಮ್, ಇನ್ನೂ 10 ದಿನಗಳಲ್ಲಿ 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.[ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ!]

ಮನೋಹರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಆಮಿ ಜಾಕ್ಸನ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

English summary
'The Villain' First Look Will Be Released within 10 Days, Says Director Jogi Prem. From Today (February 10th) 'The Villai'n Teaser Shooting Start. 'The Villain' Movie Starring By Sudeep and Shiva Rajkumar in the lead Role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X